ಮೊಬೈಲ್ ಟವರ್ ಬ್ಯಾಟರಿ ಕಳವು- ಮೂವರ ಬಂಧನ

Spread the love

ಮೊಬೈಲ್ ಟವರ್ ಬ್ಯಾಟರಿ ಕಳವು- ಮೂವರ ಬಂಧನ

ಮಂಗಳೂರು: ನಗರದ ಹ್ಯಾಟ್ ಹಿಲ್ ನಲ್ಲಿರುವ ತನ್ ರಾಜ್ ಮಹಲ್ ಇಂಡಸ್ ಕಂಪೆನಿಗೆ ಸೇರಿದ 48 ಮೊಬೈಲ್ ಟವರ್ ನ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪುತ್ತೂರಿನ ಬಿಳಿನೆಲೆ ಗ್ರಾಮದ ಆನಂದ್ (28), ಕಡೂರಿನ ಸಿಂಗಟಗೆರೆ ಸಮೀಪದ ಸೋಮನಹಳ್ಳಿಯ ಕೆ.ಎನ್.ಗೀರಿಶ್ (36), ಭಟ್ಕಳ ಜಾಲಿಕೋಡಿ ಹೋಬಳಿಯ ಜಾಲಿ ಗ್ರಾಮದ ಜಗನ್ನಾಥ್ ಮುಗೇರ (32) ಎಂದು ಗುರುತಿಸಲಾಗಿದೆ.

ಮೂವರು ಆರೋಪಿಗಳು ಕಳವು ಮಾಡಿದ್ದ 1 ಲಕ್ಷ ರೂ 20 ಸಾವಿರ ರೂ ಮೌಲ್ಯದ 48 ಬ್ಯಾಟರಿಗಳು ಹಾಗೂ 2 ಲಕ್ಷ ರೂ ಮೌಲ್ಯದ ಆಲ್ಟೋ ಕಾರನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವಶಕ್ಕೆ ಪಡೆದ ಆರೋಪಿಗಳೆಲ್ಲರೂ ಇಂಡಸ್ ಕಂಪೆನಿಯ ಬ್ಯಾಟರಿಗಳ ನಿರ್ವಹಣೆಯ ಬಗ್ಗೆ ಗುತ್ತಿಗೆ ಪಡೆದ ಸಂಸ್ಥೆಯೊಂದರ ಸಿಂಬಂದಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಪೋಲಿಸ್ ಆಯುಕ್ತ ಟಿ.ಆರ್.ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪಪೋಲಿಸ್ ಆಯುಕ್ತ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತೆ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಉರ್ವ ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬಂಧಿ ಭಾಗವಹಿಸಿದ್ದರು.
ಈ ಕುರಿತು ಉರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love