ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ಬಾಲಕಿ

Spread the love

ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ 7ನೇ ತರಗತಿ ಬಾಲಕಿ

ಪಡುಬಿದ್ರೆ : ಮೊಬೈಲ್ ನೋಡುತ್ತಾ ಕೂರಬೇಡ ಮನೆ ಕೆಲಸ ಮಾಡು ಎಂದು ತಾಯಿ ಹೇಳಿದ್ದಕ್ಕೆ ಮನ ನೊಂದು 13 ವರ್ಷದ ಬಾಲಕಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯಲ್ಲಿ ಸೋಮವಾರ ನಡೆದಿದೆ.

ಮೃತ ಬಾಲಕಿಯನ್ನು ಎಲ್ಲೂರು ಗ್ರಾಮದ ಜಯರಾಮ ಎಂಬವರ 13 ವರ್ಷದ ಮಗಳು ಎಂದು ಗುರುತಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಬಾಲಕಿಯು ಸ್ಥಳೀಯ ಶಾಲೆಯಲ್ಲಿ 7 ನೇತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು ಸೋಮವಾರ ತಾಯಿ ದಿನ ಮೊಬೈಲ್ ನೋಡುತ್ತಾ ಕೂರಬೇಡ, ಮನೆಯ ಕೆಲಸವನ್ನು ಮಾಡು ಎಂದು ಬುದ್ದಿವಾದ ಹೇಳಿದ್ದರಿಂದ ಮನನೊಂದು ಮನೆಯ ಬೆಡ್ರೂಮಿನ ಮಾಡಿನ ಕಬ್ಬಿಣದ ಪೈಪಿಗೆ ಚೂಡಿದಾರದ ವೇಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಮನೆಯವರು ಕಂಡು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love