ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ, ಪುರುಷೋತ್ತಮ ಬಿಳಿಮಲೆಯವರ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತಂದಿದೆ ; ಶಾಸಕ ವೈ ಭರತ್ ಶೆಟ್ಟಿ

Spread the love

ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ, ಪುರುಷೋತ್ತಮ ಬಿಳಿಮಲೆಯವರ ಹೇಳಿಕೆ ಹಿಂದೂ ಭಾವನೆಗೆ ಧಕ್ಕೆ ತಂದಿದೆ ; ಶಾಸಕ ವೈ ಭರತ್ ಶೆಟ್ಟಿ

ಹಿಂದೂ ಸಂಪ್ರದಾಯಯ ಆಚಾರ , ವಿಚಾರಗಳಿಗೆ ದಕ್ಕೆ ತರುವ ಕೆಲಸ ಕರ್ನಾಟಕದ ಕಾಂಗ್ರೆಸ್ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ . ಕರಾವಳಿ ಭಾಗದಲ್ಲಿ ಯಕ್ಷಗಾನಕ್ಕೆ ಅದರದ್ದೇ ಆದ ಮಹತ್ವವಿದೆ . ಯಕ್ಷಗಾನವನ್ನು ದೈವಿಕ ಕಲೆಯನ್ನಾಗಿ ಆಚರಿಸುವವರು ನಾವುಗಳು . ಯಕ್ಷಗಾನದಲ್ಲಿ ದೇವರ ವೇಷ ಹಾಕಿದ ಕಲಾವಿದರನ್ನು ಕಂಡಾಗ ಕೈಮುಗಿಯುವವರು ನಾವು . ಬಹಳ ಶ್ರದ್ದಾ , ನಿಷ್ಠೆ, ವೃತದಿಂದ ಆಚರಿಸುವ ಯಕ್ಷಗಾನ ಕಲೆಯನ್ನು , ಕಲಾವಿದರ ಭಾವನೆಗೆ ಪುರುಷೋತ್ತಮ ಬಿಳಿಮಲೆಯವರ ಹೇಳಿಕೆ ದಕ್ಕೆ ತಂದಿದೆ ಎಂದು ಶಾಸಕರಾದ ವೈ ಭರತ್ ಶೆಟ್ಟಿ ಆರೋಪಿಸಿದರು .

ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆಯವರು ಯಕ್ಷಗಾನ ಕಲಾವಿದರ ಭಾವನೆಗೆ ದಕ್ಕೆ ತರುವ ಪ್ರಯತ್ನ ಮಾಡಿದ್ದಾರೆ . ಬಿಳಿ ಮಲೆಯವರಿಗೆ ಯಕ್ಷಗಾನ ಸ್ತ್ರೀ ವೇಷಧಾರಿಗಳನ್ನು ನೋಡಿದಾಗ ಕ್ರಶ್ ಆಗುತ್ತಿತೆಂದು ಅವರು ಹೇಳಿದ್ದಾರೆ . ಅವರ ವೈಯುಕ್ತಿಕ ವಿಚಾರವನ್ನು ನಾನು ಈ ಕ್ಷಣ ಹೇಳುವುದಿಲ್ಲ ಆದರೆ ಯಕ್ಷಗಾನ ಕಲಾವಿದರನ್ನು ಬೊಟ್ಟುಮಾಡಿ ಆ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ .

ಇದು ಬೇಕಂತಲೇ ಷಡ್ಯಂತರವನ್ನು ರಚಿಸಿ . ಈ ವಿಷಯ ದೊಡ್ಡದಾದ ಚರ್ಚೆ ಆಗಬೇಕೆಂದು ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ

ಕರಾವಳಿಯಲ್ಲಿ ಉಳಿದ ಪಕ್ಷದ ಕಲಾಭಿಮಾನಿಗಳು ಯಕ್ಷಗಾನ ಮೇಳಗಳ ಪ್ರದರ್ಶನ ಮಾಡಿಸುತ್ತಾರೆ . ಆದರೆ ಅವರು ಯಾರು ಇದರ ವಿರುದ್ಧವಾಗಿ ಮಾತನಾಡುವುದಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದರು . ಯಕ್ಷಗಾನ ಪ್ರದರ್ಶನವನ್ನು ಕಾಂಗ್ರೆಸ್ ನಾಯಕರು ಮಾಡಿಸುತ್ತಾರೆ ಆದರೆ ಈ ಕುರಿತು ಯಾಕೆ ಅವರು ಮೌನ ವಹಿಸಿದ್ದಾರೆ?!. ರಾಜ್ಯ ಸರಕಾರ ಪುರುಷೋತ್ತಮ ಬಿಳಿಮಲೆಯವರನ್ನು ಕೂಡಲೇ ಅಧಿಕಾರ ಸ್ಥಾನದಿಂದ ಕೆಳಗೆ ಇಳಿಸಬೇಕೆಂದು ಆಗ್ರಹಿಸಿದರು .

ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ , ಯಕ್ಷಗಾನ ಕಲಾವಿದರನ್ನು ಪುರುಷೋತ್ತಮ ಬಿಳಿಮಲೆಯವರು ನೋಯಿಸಿದ್ದಾರೆ . ಈ ರೀತಿಯ ಮಾತುಗಳನ್ನು ಆಡಿ ಇಲ್ಲಿನ ಕಲಾ ವಲಯಕ್ಕೆ ಬಾಂಬ್ ಹಾಕಿದ್ದಾರೆ . ಅದು ಇಂದು ಸಿಡಿದು ಕಲಾವಿದರ ನೈತಿಕ ಸ್ಟೈರ್ಯ ವನ್ನು ಕುಗ್ಗಿಸಿ. ಮನಸಿಗೆ ಘಾಸಿ ಉಂಟುಮಾಡಿದೆ. ಅವರ ಹೇಳಿಕೆ ಮುಂದೊಂದು ದಿನ ಅವರ ಅಧಿಕಾರದಿಂದ ಕೆಳಗಿಳಿಸಲು ಬಹುದು. ಅವರು ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಬೇಕೆಂದು ಆಗ್ರಹಿಸಿದರು.

ನಮ್ಮ ಯಕ್ಷಗಾನ ಕ್ಷೇತ್ರ ಕನ್ನಡ ಭಾಷೆಗೆ ಅದರದ್ದೇ ಆದ ಕೊಡುಗೆಯನ್ನು ನೀಡಿದೆ . ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಈ ರೀತಿಯ ಮಾತುಗಳನ್ನು ಆಡುವುದು ಸರಿಯಲ್ಲ ಎಂದು ಹೇಳಿದರು .

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರರಾದ ಅರುಣ್ ಜಿ ಶೇಟ್ , ಯಕ್ಷಗಾನ ಕಲಾವಿದರಾದ ಸತೀಶ್ , ರವಿ ಉಪಸ್ಥಿತತರಿದ್ದರು


Spread the love
Subscribe
Notify of

0 Comments
Inline Feedbacks
View all comments