ಯಡ್ಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಹೆಚ್ಚು ದಿನ ಉಳಿಯೋಲ್ಲ – ಯು.ಟಿ.ಖಾದರ್

ಯಡ್ಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಹೆಚ್ಚು ದಿನ ಉಳಿಯೋಲ್ಲ – ಯು.ಟಿ.ಖಾದರ್

ಉಡುಪಿ: ಸಂಸದರಾಗಿ ಹೇಗೂ ನಳಿನ್ ಕುಮಾರ್ ಕಟೀಲ್ ಕೆಲಸ ಮಾಡಿಲ್ಲ ಈಗ ರಾಜ್ಯಾಧ್ಯಕ್ಷರ ಪ್ರಭಾವ ಬಳಸಿಯಾದರೂ ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದರು.

ಅವರು ಬುಧವಾರ ಉಡುಪಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮೂರು ಅವಧಿಗೆ ಸಂಸದರಾಗಿ ಆಯ್ಕೆಯಾದರೂ ಯಾವುದೇ ರೀತಿಯ ಅಭಿವೃದ್ಧಿ ಕೆಲ ಮಾಡಿಲ್ಲ ಈಗ ರಾಜ್ಯಾಧ್ಯಕ್ಷರಾಗಿದ್ದು ಅದರ ಪ್ರಭಾವದ ಮೇಲಾದರೂ ಕೇಂದ್ರ- ರಾಜ್ಯ ಸರಕಾರಗಳ ಸಹಾಯ ಪಡೆದು ಅಭಿವೃದ್ಧಿ ಕೆಲಸ ಮಾಡಲಿ ಎಂದರು.

ರಾಜ್ಯದಲ್ಲಿ ಯಡ್ಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ಹೆಚ್ಚು ದಿನ ಉಳಿಯೋಲ್ಲ ಎನ್ನುವುದು ಅವರದ್ದೇ ಪಕ್ಷದ ನಾಯಕರ ಹೇಳಿಕೆಗಳಿಂದ ಸಾಬಿತಾಗುತ್ತಿದೆ. ಇನ್ನೊಂದೆಡೆ ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆಯಾಗುತ್ತಿದೆ. ಒಟ್ಟಾರೆಯಾಗಿ ರಾಜ್ಯ ಸರಕಾರಕ್ಕೆ ಮತಿ ಇಲ್ಲ ರಾಜ್ಯದ ಜನಕ್ಕೆ ಗತಿ ಇಲ್ಲ ಎಂದರು.

ರಾಜ್ಯ ಭೀಕರ ಮಳೆ ಹಾಗೂ ನೆರೆಯಿಂದ ತತ್ತರಿಸಿದ್ದು ಪರಿಹಾರ ಹಂಚಿಕೆ ವಿಚಾರದಲ್ಲಿ ರಾಜ್ಯ ಸರಕಾರ ನಾಟಕವಾಡುತ್ತಿದೆ. ನೆರೆಯಿಂದ ತತ್ತರಿಸಿದ ಪ್ರತಿ ಮನೆಗೆ 50 ಸಾವಿರ ಪ್ರಾಥಮಿಕ ಪರಿಹಾರ ಕೊಡಿ ನಮ್ಮ ಸರಕಾರವಿದ್ದಾಗ ನಾವು 35 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇವೆ ಈಗ ಬಿಜೆಪಿ ಸರಕಾರಕ್ಕೆ ನೆರಪರಿಹಾರಕ್ಕಾಗಿ ಒಂದು ಸಾವಿರ ಕೋಟಿ ಕೊಡಲು ಏನು ಕಷ್ಟ ಎಂದು ಅವರು ಪ್ರಶ್ನಿಸಿದರು.