ಯಾವುದೇ ಹೊಸ ಆವಿಷ್ಕಾರದ ಫಲಿತಾಂಶದ ಕುರಿತು ಚಿಂತಿಸಬಾರದು, ಆವಿಷ್ಕರಿಸುವುದು ಮುಖ್ಯವೇ ಹೊರತು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸಬಾರದು – ಡೀನ್ ಡಾ.ಮಂಜುನಾಥ್ ಪಟ್ಟಾಭಿ

ಯಾವುದೇ ಹೊಸ ಆವಿಷ್ಕಾರದ ಫಲಿತಾಂಶದ ಕುರಿತು ಚಿಂತಿಸಬಾರದು, ಆವಿಷ್ಕರಿಸುವುದು ಮುಖ್ಯವೇ ಹೊರತು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸಬಾರದು – ಡೀನ್ ಡಾ.ಮಂಜುನಾಥ್ ಪಟ್ಟಾಭಿ

ವಿದ್ಯಾಗಿರಿ: ಯಾವುದೇ ಹೊಸ ಆವಿಷ್ಕಾರದ ಫಲಿತಾಂಶದ ಕುರಿತು ಚಿಂತಿಸಬಾರದು. ಆವಿಷ್ಕರಿಸುವುದು ಮುಖ್ಯವೇ ಹೊರತು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸಬಾರದು ಎಂದು ಮಂಗಳೂರು ವಿಶ್ವವಿದ್ಯಾಲಯದ ಮಟೇರಿಯಲ್ ಸೈನ್ಸ್ ವಿಭಾಗದ ಡೀನ್ ಡಾ.ಮಂಜುನಾಥ್ ಪಟ್ಟಾಭಿ ಹೇಳಿದರು.

ಇವರು ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಹಿಂದೆ ಅನುಭವಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಹೊಂದಿದ್ದೇವೆ. ಇವುಗಳು ದೇಶದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.  ಮೈಕ್ರೋ ಎಲೆಕ್ಟ್ರಾನಿಕ್ಸ್ ಹಾಗೂ ಟ್ರಾನ್ಸ್‍ಪರಂಟ್ ಎಲೆಕ್ಟ್ರಾನಿಕ್ಸ್‍ಗಳ ಕುರಿತು ಪಿ.ಪಿ.ಟಿ. ಪ್ರದರ್ಶನದ ಮೂಲಕ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಡೀನ್  ರಮ್ಯ ರೈ ಪಿ. ಡಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಿಶಾ ಕೆ.ಎಮ್ ಹಾಗೂ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.