ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕಲ್ಲಡ್ಕ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Spread the love

ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕಲ್ಲಡ್ಕ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: 74 ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕೆ.ಸಿ.ರೋಡ್ ಕಲ್ಲಡ್ಕ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಯುನೈಟೆಡ್ ಫ್ರೆಂಡ್ಸ್ ಸರ್ಕಲ್ ಕೆ.ಸಿ.ರೋಡ್ ಕಲ್ಲಡ್ಕ ವತಿಯಿಂದ ಪ್ರಥಮ ಬಾರಿಗೆ ಬಹಳ ಅದ್ದೂರಿಯಾಗಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು

ಧ್ವಜಾರೋಹಣವನ್ನು ಕಲ್ಲಡ್ಕ ಮಸ್ಜಿದ್ ಖತೀಬರು ಬಹು : ಉಸ್ತಾದ್ ಶೇಖ್ ಮಹಮ್ಮದ್ ಫೈಝಿ ಇರ್ಫಾನಿ ಮತ್ತು ಕೆ.ಸಿ.ರೋಡ್ ಮಸ್ಜಿದ್ ಖತೀಬರು ಬಹು : ಅಬ್ದುಲ್ ಹಮೀದ್ ದಾರಿಮಿ ಹಾಗೂ ಗೋಳ್ತಮಜಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೆ.ಎಸ್ ಮುಸ್ತಫಾ ಮತ್ತು ಜವಾಝ್ ಕಲ್ಲಡ್ಕ ಹಾಗೂ ಕೆ.ಎಮ್ ಶರೀಫ್ ರವರು ನೆರವೇರಿಸಿದರು

ಪ್ರಾಸ್ತಾವಿಕವಾಗಿ ಕಲ್ಲಡ್ಕ ಖತೀಬರು ಶೇಖ್ ಮಹಮ್ಮದ್ ಫೈಝಿ ಇರ್ಫಾನಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಾಡಿನ ಹಿರಿಯರು ಕಿರಿಯರು ಪುಟಾಣಿ ಮಕ್ಕಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

ಕಾರ್ಯಕ್ರಮವನ್ನು ಶಂಸುದ್ದೀನ್ ಸ್ವಾಗತಿಸಿ ನಿರೂಪಿಸಿದರು.


Spread the love