ಯುವಕನ ಮೇಲೆ ಹಲ್ಲೆಗೈದ ಬುರ್ಖಾಧಾರಿ ಮಹಿಳೆ!!

Spread the love

ಪುತ್ತೂರಿನ ಚರ್ಚ್ ಬಳಿ ಎರಡು ಪ್ರತ್ಯೇಕ ಪ್ರಕರಣ

ಯುವಕನ ಮೇಲೆ ಹಲ್ಲೆಗೈದ ಬುರ್ಖಾಧಾರಿ ಮಹಿಳೆ!!

ರಾತ್ರೋ ರಾತ್ರಿ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ!!

ಪುತ್ತೂರು: ಪುತ್ತೂರಿನ ಹೃದಯಭಾಗದಲ್ಲಿರುವ ಫ್ಯಾನ್ಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಯೋರ್ವ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.

ಪುತ್ತೂರಿನ ಮೈದೇ ದೇವುಸ್ ಚರ್ಚ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿರುವ ಶಫೀಕ್ ಮಾಲಕತ್ವದ ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಅಂಗಡಿಗೆ ಬೆಂಕಿ ಹಚ್ಚಿದ್ದು, ದುಷ್ಕರ್ಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಈ ಘಟನೆ ಸುಮಾರು ತಡರಾತ್ರಿ 2:30ರ ಸಮಯಕ್ಕೆ ನಡೆದಿದೆ. ಹೆಲ್ಮೆಟ್ ಧರಿಸಿ ಬಂದ ದುಷ್ಕರ್ಮಿ ಫ್ಯಾನ್ಸಿ ಅಂಗಡಿಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಇದೇ ಫ್ಯಾನ್ಸಿ ಅಂಗಡಿ ಮುಂಭಾಗ ನಿನ್ನೆ ರಾತ್ರಿ 8:30ರ ಸಮಯಕ್ಕೆ ಗಲಾಟೆಯೊಂದು ನಡೆದಿತ್ತು. ಆಟೋ ರಿಕ್ಷಾ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದನ್ನ ಕಾರಿನಲ್ಲಿದ್ದ ಯುವಕನೋರ್ವ ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆದಿತ್ತು. ಬ್ಲ್ಯಾಕ್ ಡೈಮಂಡ್ ಫ್ಯಾನ್ಸಿ ಮುಂಭಾಗದ ರಸ್ತೆಯಲ್ಲಿ ಆಟೋ ರಿಕ್ಷಾವನ್ನ ಪಾರ್ಕ್ ಮಾಡಲಾಗಿತ್ತು. ಸೈಡ್ ಕೊಡುವಂತೆ ಕಾರಿನಲ್ಲಿದ್ದ ಪುನೀತ್ ಕೇಳಿಕೊಂಡಿದ್ದಾರೆ. ಈ ವೇಳೆ ಏಕಾಏಕಿ ಕಾರಿನಲ್ಲಿದ್ದ ಪುನೀತ್ ಮೇಲೆ ಆಟೋ ರಿಕ್ಷಾ ಚಾಲಕ ನೌಶದ್ ಪತ್ನಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಬಳಿಕ ಕಾರಿನಲ್ಲಿದ್ದ ಪುನೀತ್ ಅವರ ಇತರ ಗೆಳೆಯರ ಮೇಲೂ ಅಲ್ಲಿ ಸೇರಿದ್ದವರು ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.


Spread the love
Subscribe
Notify of

0 Comments
Inline Feedbacks
View all comments