ಯು.ಎ.ಇ: ಬಸವ ಜಯಂತಿ ದಶಮಾನೋತ್ಸವ ಆಚರಣೆ

Spread the love

ಯು.ಎ.ಇ: ಶುಕ್ರವಾರ ಮೇ೧೩ ರಂದುದು ಬೈನ “ಜೆ.ಎಸ್.ಎಸ್. ಪ್ರೈವೆಟ್ಶಾಲೆ”ಯ ಭವ್ಯಪ್ರಾಂಗಣದಲ್ಲಿ ಪ್ರೆಶಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ದುಬೈ ಸಹಯೋಗದಲ್ಲಿ ಯು.ಎ.ಇ. ಬಸವಸಮೀತಿ ದುಬೈ ತನ್ನ “ಬಸವಜಯಂತಿ”  ದಶಮಾನೋತ್ಸವ ಬಲು ವಿಜ್ರಂಭಣೆಯಿಂದ ಆಚರಿಸಿತು.

ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಅರವಿಂದ ಜತ್ತಿ,ಅಧ್ಯಕ್ಷರುಬಸವ ಸಮೀತಿ,ಭಾರತಅವರುವಹಿಸಿದ್ದರು. ಜಾನಪದ ಸಾಹಿತಿ ಡಾ. ಶಂಭು ಬಳಿಗಾರ, ಶ್ರೀ ಮ.ನಿ.ಪ್ರ ನಿಜಗುಣಾನಂದ ಮಹಾಸ್ವಾಮೀಜಿ, ಕೂಡಲ ಸಂಗಮದ ಶ್ರೀ. ಮ.ನಿ.ಪ್ರ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಲಂಡನ್ನಿನ ಲೇಮ್ಬೇಥ್ನ ಮಾಜಿ ಮೇಯರ್ ಡಾ.ನೀರಜ ಪಾಟೀಲ ಹಾಗುಚಿತ್ರನಟಿ ತಾರಾಆವರನ್ನುಶ್ರೀಮತಿ ಸುಮಾ, ಶ್ರೀಮತಿ ಉಮಾಹಾಗೂ ಸುಮಂಗಲೆಯರ”ಪೂರ್ಣಕುಂಭ”, ಬಸವದಳ ಹಾಗು ಚಂಡೀ ವಾದ್ಯದೊಂದಿಗೆ ಅತಿಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

image002basava-jayanthi-dubai-020160521-002 image003basava-jayanthi-dubai-020160521-003 image004basava-jayanthi-dubai-020160521-004 image005basava-jayanthi-dubai-020160521-005 image006basava-jayanthi-dubai-020160521-006

“ಗಣೇಶ ವಂದನ” ಸುಂದರ ನೃತ್ಯದೊಂದಿಗೆ ಹಾಗು ಕುಮಾರ ಅಮೋಘ ವರ್ಷ ಹಾಡಿದ ವಚನದಿಂದ ಕಾರ್ಯಕ್ರಮ ಆರಂಭಗೊಂಡಿತು. ವಿಶೇಷವಾಗಿ ಆಹ್ವಾನಿತರಾದ ನಿರೂಪಕಿ ಶ್ರೀಮತಿ ಡಾ.ಶಾರದಾ ಮುಳ್ಳುರ ಹಾಗೂ ಶ್ರೀ ಆದರ್ಶ,ಪೂಜ್ಯ ಶ್ರೀ ಗಳು, ಗೌರವಾನ್ವಿತ ಅತಿಥಿಗಳು ಮತ್ತು ಯು. ಎ. ಈ. ಬಸವ ಸಮೀತಿ ದುಬೈನ ಸಲಹಾ ಸಮಿತಿಯ ಪದಾಧಿಕಾರಿಗಳಾದಶ್ರೀ ರುದ್ರಯ್ಯ,ಡಾ. ಶಿವಕುಮಾರ, ಶ್ರೀ ಮುರುಗೇಶ ಗಾಜರೆ, ಶ್ರೀ ಮಲ್ಲಿಕಾರ್ಜುನ ಮುಳ್ಳೂರ, ಶ್ರೀ ಚಂದ್ರಶೇಖರ ಲಿಂಗದಳ್ಳಿ,ಶ್ರೀ ಸಂಗಮೇಶ ಬಿಸರಳ್ಳಿ, ಹಾಗೂ ಶ್ರೀಮತಿ ರೂಪಾ ನಂದೀಶ ಅವರನ್ನು ವೇದಿಕೆಗೆ ಬರಮಾಡಿಕೊಂಡು ಬಸವ ಜ್ಯೋತಿಯನ್ನು ಬೆಳಗಿಸಿದರು. ಬಸವಜ್ಯೋತಿ ಬೆಳಗಲಿ ಎಂದು ಕವಿಶ್ರೀ ಈರಣ್ಣ ರಚಿಸಿದ ಗೀತೆಯನ್ನು ಶ್ರೀಮತಿ. ಆರತಿ ರವಿಕುಮಾರ್,ಶ್ರೀಮತಿ ಶ್ಯಾಮಲಾ ಬಸವರಾಜ್, ಶ್ರೀ ಚೆನ್ನಯ್ಯ ರೂಗಿ ಹಾಗು ಅಭಿಷೇಕ ಸುಶ್ರಾವ್ಯವಾಗಿ ಹಾಡಿದರು.

ಶ್ರೀರುದ್ರಯ್ಯನವಲಿಹಿರೇಮಠ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸರ್ವರನ್ನು ಗೌರವಿಸಿ ಸ್ವಾಗತಿಸಿದರು. ಸುತ್ತೂರು ಮಠದ ಶ್ರೀಶ್ರೀ ಶಿವರಾತ್ರೇಶ್ವರದೇಶಿ ಕೇಂದ್ರಮಹಾಸ್ವಾಮಿ ಗಳ ಕೃಪಾಶಿರ್ವಾದ ದಿಂದ”ಯು.ಎ.ಇ. ಬಸವ ಸಮೀತಿ ದುಬೈ”೯ ವರ್ಷಗಳ ಸಾಧನೆಗಳ ವಿವರವನ್ನು ಶ್ರೀ ಮುರುಗೇಶ ಗಾಜರೆನೆರೆದ ಸಭೆಗೆ ಚಿತ್ರಿಸಿದರು. ಶಥ ಪ್ರಯತ್ನ ದಿಂದ ಲಂಡನ್ನಿನ ಸಂಸತ್ತ ಭವನ ಆವರಣದಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪನೆಗೆ ಶ್ರಮಪಟ್ಟ ಡಾ.ನೀರಜಪಾಟೀಲ ಇವರಿಗೆ ಸಮೀತಿ ಇಂದ ಬಸವ ಭೂಷಣ ಪ್ರಶಸ್ತಿಯನ್ನುಗೌರವಾನ್ವಿತ ಅತಿಥಿಗಳು ಮತ್ತು ದುಬೈನ ಪ್ರಖ್ಯಾತ ಉದ್ಯಮಿಗಳಾದ ಶ್ರೀರಾಜಶೆಟ್ಟಿ, ಶ್ರೀಜಫರುಲ್ಲಾಖಾನ್, ಶ್ರೀಪ್ರವೀಣಶೆಟ್ಟಿ ಅವರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಎSS ಅಇಔ ಡಾ, ಶಿವಕುಮಾರ ಸನ್ಮಾನ ಪತ್ರ ಓದಿದರು.

image007basava-jayanthi-dubai-020160521-007 image008basava-jayanthi-dubai-020160521-008 image009basava-jayanthi-dubai-020160521-009 image010basava-jayanthi-dubai-020160521-010

ಭಾರತದ ವಿವಿಧ ರಾಜ್ಯಗಳ ವೇಷ ಭೂಷಣ ಧರಿಸಿ ವೇದಿಕೆ ಮೇಲೆ ಪುಟ್ಟ ಮಕ್ಕಳು ಬರುವ ದೃಶ್ಯ ನಿಜಕ್ಕೂ ನಯನ ಮನೋಹರವಾಗಿತ್ತು. ಶ್ರೀಮತಿ ಲಕ್ಷ್ಮಿ ಲಿಂಗದಳ್ಳಿ ಹಾಗು ಶ್ರೀಮತಿ ಅನಿತಾ ದಂಡಿನ ಚದ್ಮ ವೇಶ ಸ್ಪರ್ಧೆಯನ್ನು ನಡೆಸಿಕೊಟ್ಟರೆ, ನಿರ್ಣ್ಣಾಯಕತ್ವವನ್ನು ಶ್ರೀಮತಿ ವೀಣಾ ದೇವಗಿರಿ ದಕ್ಷತೆ ಇಂದ ನಿಭಾಯಿಸಿದರು. ಅದರಲ್ಲೂ  ಪಂಜಾಬಿ ವೇಷದಲ್ಲಿ ಬಂದ ಸ್ರುಜನ ಮಾಳಿ ಹಾಗು ಉತ್ತರ ಕರ್ನಾಟಕ ವೇಷದಲ್ಲಿ ಆದರ್ಶ ಹಂಜಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ನಂತರ ಯು.ಎ.ಇ ಬಸವ ಸಮೀತಿಯ, ಶ್ರೀಮತಿ ಜ್ಯೋತಿ ಬಡ್ಡಿ ಅವರ ಸಾರಥ್ಯದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಶಿವಕುಮಾರ ಹಾಗು ಕುಮಾರಿ ರೋಶನಿ ಸಾಣಿಕೊಪ್ಪ ಅವರು ಭಕ್ತಿ ಗೀತೆಗಳನ್ನು ಸುಮಧುರವಾಗಿ ಹಾಡಿದರು. ”ನಟೇಶ್ವರ ಕೌತಂ” ತಂಡದ ಭರತನಾಟ್ಯ, ತಂಡದಿಂದ ವಿದುಷಿ ರೋಹಿಣಿ ಸಂಯೋಜಿಸಿದ ಜಾನಪದ ನೃತ್ಯ, ನೆರೆದ ಜನ ಜಂಗುಳಿಯನ್ನು ಮನರಂಜಿಸಿದವು.

ಬಸವ ಸಮೀತಿಯವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಸ್ಪರ್ಧೆಯ ವಿಜೇತರಿಗೆ “ಬಸವ ಕಪ್” ವಿತರಿಸಲಾಯಿತು.

image011basava-jayanthi-dubai-020160521-011 image012basava-jayanthi-dubai-020160521-012 image013basava-jayanthi-dubai-020160521-013 image014basava-jayanthi-dubai-020160521-014 image015basava-jayanthi-dubai-020160521-015 image016basava-jayanthi-dubai-020160521-016 image017basava-jayanthi-dubai-020160521-017

ಶ್ರೀ ನಿಜಗುಣಾನಂದ ಮಹಾಸ್ವಾಮೀಜಿಗಳವರ ಆಶೀರ್ವಚನ ನೆರೆದ ಶರಣರಿಗೆ ಬಸವಣ್ಣ ಯಾರು ಎನ್ನುವದನ್ನು ಕುವೆಂಪು ಅವರ ಕವನ ಮುಖೇನ ಸಭೆಗೆ ತಿಳಿಸಿ ಕೊಟ್ಟರು.ಶ್ರೀ. ಮ.ನಿ.ಪ್ರ ಬಸವ ಜಯ ಮೃತ್ಯುಂಜಯ ಸ್ವಾಮೀಜಿತಮ್ಮ ಆಶೀರ್ವಚನದಲ್ಲಿ ಬಸವಸಮೀತಿ ದುಬೈನ ಸಾಧನೆಗಳನ್ನು ಹಾಡಿ ಹೊಗಳಿದರು. ನಂತರ ದುಬೈದಲ್ಲೇ ತಯಾರಿಸಿದ್ದ ಹೋಳಿಗೆ, ಮಾವಿನಹಣ್ಣಿನ ಸೀಕರಣೆ, ಜೋಳದ ರೊಟ್ಟಿ ಇನ್ನಿತರ ಘಮ ಘಮಿಸುವ ಪ್ರಸಾದ ಏಲ್ಲರ ಹಸಿವನ್ನು ತ್ರುಪ್ತಿಪಡಿಸಿತು.

ನಂತರ ಮಧ್ಯಾನಡಾ. ಶಂಭು ಬಳಿಗಾರ ಅವರ ಜಾನಪದ ಗೀತೆಗಳು, ಹಳ್ಳಿಯ ಸೊಗಡುಹಾಗು ಹಾಸ್ಯ ಸನ್ನಿವೇಶಗಳು ಎಲ್ಲರನ್ನು ರಂಜಿಸಿದವು. ಚಿಕ್ಕ ಮಕ್ಕಳು ಸಾದರ ಪಡಿಸಿದ ಅಂದಿನ ಸಂಸತ್ತು“ಅನುಭವ ಮಂಟಪ” ಎಲ್ಲರ ಕಣ್ಮನ ಸೆಳಯಿತು. ಶ್ರೀ ಪ್ರಸನ್ನಕುಮಾರ ಸಂಯೋಜಿಸಿದ ಜಾನಪದ ನೃತ್ಯ ಸಭಿಕರ ಒತ್ತಾಯದಿಂದ ಎರಡು ಸಾರಿ ಪ್ರಸ್ತುತ ಪಡಿಸಲಾಯಿತು.

image018basava-jayanthi-dubai-020160521-018 image019basava-jayanthi-dubai-020160521-019 image020basava-jayanthi-dubai-020160521-020

image001basava-jayanthi-dubai-020160521-001

ಈ “ಬಸವಜಯಂತಿ” ಹಬ್ಬದ ಆಚರಣೆಯಲ್ಲಿ ಸುಮಾರು ಏಳು ನೂರಕ್ಕೂ ಮಿಕ್ಕಿ ಯು.ಎ.ಇ. ಕನ್ನಡಿಗರು ಹಾಜರಾಗಿದ್ದರು. ಇಲ್ಲಿಯ ಗಣ್ಯರಾದ, ಕರ್ನಾಟಕ ಸಂಘ ಅಬು ಧಾಬಿಯ ಶ್ರೀ. ಸರ್ವೋತ್ತಮ ಶೆಟ್ಟಿ,  ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷ ಶ್ರೀ ಸುಗಂಧರಾಜ ಬೇಕಲ, ಕನ್ನಡಿಗರು ದುಬೈನ ಅಧ್ಯಕ್ಷೇಶ್ರೀಮತಿ ಉಮಾ ವಿದ್ಯಾಧರ್, ಶ್ರೀ ಸದನ್ ದಾಸ, ಕನ್ನಡ ಮಿತ್ರರು ಅಧ್ಯಕ್ಷ ಶ್ರೀಶಶಿಧರ ಹಾಗೂ ಇನ್ನಿತರ ಸಂಘಗಳ ಪದಾಧಿಕಾರಿಗಳು ನಾಡಿನ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಸುಂದರವಾದ ಬ್ಯಾನರ್ ವಿನ್ಯಾಸಕ ಹಾಗು ಬಸವೇಶ್ವರ ಮೂರ್ತಿಯ ಶಿಲ್ಪಿ ಶ್ರೀ ಗಣೇಶ ರೈ ಆವರಿಗೂ ಗೌರವಿಸಲಾಯಿತು.

ಕೊನೆಯಲ್ಲಿ ಶ್ರೀಮತಿ ಕಾವ್ಯ ಯುವರಾಜ ಎಲ್ಲ ಪ್ರಾಯೋಜಕರಿಗೆ ಧನ್ಯವಾದ ಅರ್ಪಿಸುತ್ತ, ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಅಂತಿಮ ಘಟ್ಟವನ್ನು ತಲುಪಿತು.

Click here for Photo Album

ವರದಿ: ಶ್ರೀ ಮುರುಗೇಶ ಗಾಜರ.


Spread the love