ಯು.ಟಿ.ಖಾದರ್‌ ಗೆ ಬೆದರಿಕೆ: ಕಾವೂರು ಠಾಣೆಯಲ್ಲಿ  ಪ್ರಕರಣ ದಾಖಲು

Spread the love

ಯು.ಟಿ.ಖಾದರ್‌ ಗೆ ಬೆದರಿಕೆ: ಕಾವೂರು ಠಾಣೆಯಲ್ಲಿ  ಪ್ರಕರಣ ದಾಖಲು

ಮಂಗಳೂರು: ಶಾಸಕ ಯು.ಟಿ. ಖಾದರ್‌ಗೆ ಕೊಲೆ ಬೆದರಿಕೆ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಬುಧವಾರ ಕಾವೂರು ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಪರವಾಗಿ ಬಿಜೆಪಿ ವತಿಯಿಂದ ಜ.27ರಂದು ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸೋಮವಾರ ನಡೆದ ಜನಜಾಗೃತಿ ರ್ಯಾಲಿ ಸಂದರ್ಭ ಯುವಕರ ಗುಂಪೊಂದು ಶಾಸಕ ಯು.ಟಿ.ಖಾದರ್‌ಗೆ ಜೀವ ಬೆದರಿಕೆ ಒಡ್ಡುವ ಘೋಷಣೆ ಕೂಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


Spread the love