ರಾಜ್ಯದಲ್ಲಿ ಕಾಂಗ್ರೆಸ್‌‌‌ 150 ಸ್ಥಾನ ಗೆಲ್ಲುತ್ತೆ: ಬಿಜೆಪಿ ಕಾರ್ಯಕಾರಿಣಿಯನ್ನ ಬೆಚ್ಚಿಬೀಳಿಸಿದ ರಾವ್‌‌!

Spread the love

ರಾಜ್ಯದಲ್ಲಿ ಕಾಂಗ್ರೆಸ್‌‌‌ 150 ಸ್ಥಾನ ಗೆಲ್ಲುತ್ತೆ: ಬಿಜೆಪಿ ಕಾರ್ಯಕಾರಿಣಿಯನ್ನ ಬೆಚ್ಚಿಬೀಳಿಸಿದ ರಾವ್‌‌!

ಮೈಸೂರು: ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ. ಅದಕ್ಕೆ ಉತ್ತಮವಾಗಿ ಕೆಲಸ ಮಾಡಬೇಕೆಂದು ಹೇಳುವ ಮೂಲಕ ರಾಜ್ಯ ಬಿಜೆಪಿ ಕಾರ್ಯಕಾರಣಿಯ ಭಾಷಣದಲ್ಲಿ ಕರ್ನಾಟಕ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ ಬೆಚ್ಚಿಬೀಳಿಸಿದ್ದಾರೆ.

ಇಂದಿನಿಂದ ಎರಡು ದಿನಗಳ ಕಾಲ ಮೈಸೂರಿನಲ್ಲಿ ನಡೆಯುತ್ತಿರಯವ ಬಿಜೆಪಿ ರಾಜ್ಯ ಕಾರ್ಯಕಾರಣಿಯ ಉದ್ಘಾಟನೆಯ ನಂತರ ಉದ್ಘಾಟಕರ ಭಾಷಣವನ್ನು ಮುರಳಿಧರ್ ರಾವ್ ಮಾಡಿದರು. ಈ ವೇಳೆ ಅವರು, ಮೈಸೂರಿನಲ್ಲಿ ನಡೆಯುತ್ತಿರುವ ಈ ಕಾರ್ಯಕಾರಣಿಯಲ್ಲಿ ಎರಡು ಸಂದೇಶಗಳು ರವಾನೆಯಾಗಬೇಕು. ಮೊದಲನೆಯದು ‘ಕಾಂಗ್ರೆಸ್ 150 ಸ್ಥಾನ ಗೆಲ್ಲುವ’ ರೀತಿ ನಾವೆಲ್ಲ ಕೆಲಸ ಮಾಡಬೇಕು. ಎರಡನೆಯದು ಗುಜರಾತ್ ಮತ್ತು ದೆಹಲಿಯಲ್ಲಿ ಸೇರಿದಂತೆ ಉತ್ತರ ಭಾರತದಲ್ಲಿ ಬಿಜೆಪಿ ಮುಂದೆ ಇರುವಂತೆ ದಕ್ಷಿಣ ಭಾರತದ ಕರ್ನಾಟಕದಲ್ಲೂ ಬಿಜೆಪಿ ಮುಂದೆ ಇರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು. ಈಶು ಬಂದಾಗ ಎಲ್ರೂ ಎದ್ದು ಕೈಕುಲುಕಿದ್ರು…ಬಿಎಸ್‌ವೈ ಕುರ್ಚಿಯಿಂದ ಕದಲಿಲ್ಲ!

ಬಳಿಕ ಮುರಳಿಧರ್ ರಾವ್ ನೀಡಿದ ‘ಕಾಂಗ್ರೆಸ್ 150 ಸ್ಥಾನ ಗೆಲ್ಲುವ’ ಹೇಳಿಕೆಯನ್ನು ವೇದಿಕೆಯ ಹಿಂಭಾಗದಲ್ಲಿದ್ದವರು ಚೀಟಿ ಮೂಲಕ ಅವರಿಗೆ ತಿಳಿಸಿದರು. ಆಗ ತಮ್ಮ ಹೇಳಿಕೆಯನ್ನು ಸರಿ ಪಡಿಸಿಕೊಂಡ ಮುರಳಿಧರ್ ರಾವ್, ಕಾಂಗ್ರೆಸ್‌ ಮುಕ್ತ ಕರ್ನಾಟಕ ಮಾಡುವ ನಿಟ್ಟಿನದಲ್ಲಿ ನಾವೆಲ್ಲ ಕಾರ್ಯನಿರ್ವಹಿಸಬೇಕು. ಮುಂದಿನ ಟಾರ್ಗೆಟ್‌ ಬಿಜೆಪಿ ಮಿಷನ್ 150 ಎಂದು ತಿಳಿಸಿದರು.


Spread the love