ರಾಜ್ಯದ ಬಿಜೆಪಿ ಸರಕಾರದಿಂದ ಪತ್ರಿಕಾ ಸ್ವಾತಂತ್ರ್ಯ ದ ಮೇಲಿನ ದಾಳಿ ಖಂಡನೀಯ: ಎಸ್.ಡಿ.ಪಿ.ಐ

Spread the love

ರಾಜ್ಯದ ಬಿಜೆಪಿ ಸರಕಾರದಿಂದ ಪತ್ರಿಕಾ ಸ್ವಾತಂತ್ರ್ಯ ದ ಮೇಲಿನ ದಾಳಿ ಖಂಡನೀಯ: ಎಸ್.ಡಿ.ಪಿ.ಐ

ರಾಜ್ಯದ ಮುಖ್ಯಮಂತ್ರಿಯ ಮಗ ವಿಜಯೇಂದ್ರ ನಡೆಸಿದನೆನ್ನಲಾದ ಭೃಷ್ಟಾಚಾರವನ್ನು ವರದಿ ಮಾಡಿದ   ಟಿವಿ ನಿರ್ದೇಶಕರ ಮನೆಯ ಮೇಲೆ ದಾಳಿ ಹಾಗೂ ನಿರೂಪಕನ ಬಂಧನ ಮಾಡಿದ ಬಿಜೆಪಿ ಸರಕಾರದ ಸೇಡಿನ ಕ್ರಮ ಅತ್ಯಂತ ನಾಚಿಕೆಗೇಡು. ಬಿಜೆಪಿ ನಡೆಸುವ ಇಂತಹ ದಾಳಿಗಳು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದು ಮಾಧ್ಯಮಗಳ ಬಾಯಿಮುಚ್ಚಿಸುವ ಹೇಡಿತನವಲ್ಲದೆ ಇನ್ನೇನೂ ಅಲ್ಲ. ಹಿಟ್ಲರ್ ಕೂಡ ಇದೇ ರೀತಿ ಆತನ ವಿರುದ್ಧ ಮಾತನಾಡಿದವರನ್ನು ತನ್ನ ಸೇನೆಯ ಬಲದ ಮೂಲಕ ದಬ್ಬಾಳಿಕೆ ನಡೆಸುತ್ತಿದ್ದನು. ರಾಜ್ಯದ ಮುಖ್ಯಮಂತ್ರಿಗಳು ಹಿಟ್ಲರ್ ನ ಹಾದಿಯನ್ನು ತುಳಿಯುತ್ತಿದ್ದು ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕರ್ನಾಟಕ ರಾಜ್ಯಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ

ಮುಖ್ಯಮಂತ್ರಿಯ ಮಗನು ಭಾರಿ ಭ್ರಷ್ಟಾಚಾರ ಮಾಡಿರುವಾಗ ತನ್ನ ಹುದ್ದೆಗೆ ರಾಜೀನಾಮೆ ಇತ್ತು ತನಿಖೆಗೆ ಆಜ್ಙೆ ಮಾಡುವ ಬದಲಾಗಿ ಭೃಷ್ಟಾಚಾರ ವರದಿ ಮಾಡಿದ ಮಾಧ್ಯಮದ ಮೇಲೆ ದಾಳಿ ನಡೆಸಿರುವುದು ಬಿಜೆಪಿ ಸರಕಾರ ನಾಚಿಕೆ ಮಾನ ಮರ್ಯಾದೆ ಬಿಟ್ಟಿರುವುದನ್ನು ತೋರಿಸುತ್ತದೆ. ಈ ರೀತಿಯ ದಾಳಿ ಬಂಧನಗಳಿಂದ ಅನ್ಯಾಯ, ಅಕ್ರಮ, ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹತ್ತಿಕಲಾಗುವುದು ಎಂಬ ಭ್ರಮೆಯಲ್ಲಿ ಬಿಜೆಪಿ ತೇಲುತ್ತಿದೆ. ಆದರೆ ಬಿಜೆಪಿ ಸರಕಾರದ ಇಂತಹ ಅನೈತಿಕ ಕ್ರಮಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟ ಕಿಚ್ಚನ್ನು ಹೆಚ್ಚಿಸುತ್ತದೆ. ಭೃಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಸಾಬೀತು ಪಡಿಸುವವರೆಗೆ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಹಾಗೂ ಜಂಟಿ ಸಮಿತಿಯಿಂದ ತನಿಖೆ ನಡೆಸಲಿ ಎಂದು ಇಲಿಯಾಸ್ ತುಂಬೆ ಆಗ್ರಹಿಸಿದ್ದಾರೆ.


Spread the love