ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

Spread the love

ರಾಮಕೃಷ್ಣ ಮಠದಲ್ಲಿ ಆಧ್ಯಾತ್ಮಿಕ ಶಿಬಿರ

ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಅಂತರ್ಯೋಗ – ಆಧ್ಯಾತ್ಮಿಕ ಶಿಬಿರ ನಡೆಯಲಿದೆ. ಕಾರ್ಯಕ್ರಮವು ಪೂರ್ವಾಹ್ನ 9 ರಿಂದ ಅಪರಾಹ್ನ 3.30 ರವೆರೆಗೆ ಜರುಗಲಿದ್ದು ಆಸಕ್ತರಿಗೆ ಪ್ರವೇಶ ಮುಕ್ತವಾಗಿರುತ್ತದೆ. ಆಸಕ್ತರು 12 ಆಗಸ್ಟ್ ಒಳಗೆ ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು (ಕಾರ್ಯಾಲಯ – 2414412)

ಕಾರ್ಯಕಮದಲ್ಲಿ ಅರ್ಚನೆ, ಭಜನೆ, ಧ್ಯಾನ, ಉಪನ್ಯಾಸ ಕಾರ್ಯಕ್ರಮಗಳಿರುತ್ತದೆ. ಮೈಸೂರು ರಾಮಕೃಷ್ಣ ಮಠದ ಸನ್ಯಾಸಿಗಳಾದ ಸ್ವಾಮಿ ಶಾಂತಿವ್ರತಾನಂದಜಿಯವರು “ಕೃಷ್ಣಂ ವಂದೇ ಜಗದ್ಗುರುಂ” ಎಂಬ ವಿಷಯವಾಗಿ, ಬೆಂಗಳೂರಿನ ರಾಮಕೃಷ್ಣ ವೇದಾಂತ ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಅಭಯಾನಂದಜಿಯವರು “ಆದ್ವೈತಾಮೃತವರ್ಷಿಣೀ ಗೀತಾ” ಎಂಬ ವಿಷಯವಾಗಿ ಪ್ರವಚನ ನೀಡಲಿರುವರು. ಅಪರಾಹ್ನ 1.30ಕ್ಕೆ ಶಿವಮೊಗ್ಗದ ಖ್ಯಾತ ಉಪನ್ಯಾಸಕರಾದ ಜಿ. ಎಸ್. ನಟೇಶ್ ಅವರು ಮಂಕುತಿಮ್ಮನ ಕಗ್ಗದ ಕುರಿತು ಪ್ರವಚನ ನೀಡಲಿರುವರು.


Spread the love