ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ: ಬಾಲಿವುಡ್ ನಟ ನಾನಾ ಪಾಟೇಕರ್ ಉದ್ಘಾಟನೆ
ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸಿದ 200 ಸ್ವಚ್ಚ ಮಂಗಳೂರು ಅಭಿಯಾನದ ಉದ್ಘಾಟನೆಯನ್ನು ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತರಾದ ನಾನಾ ಪಾಟೇಕರ್ ಅವರು ಚಿತ್ರ ಬಿಡಿಸುವ ಮೂಲಕ ಮಾಡಿದರು.

ಈ ವೇಳೆ ಮಾತನಾಡಿದ ನಾನಾ ಪಾಟೇಕರ್ ಸ್ವಚ್ಚ ಭಾರತ ಎಂದರೆ ನಮ್ಮನ್ನು ನಾವೇ ವೈಯುಕ್ತಿಕವಾಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಗೊಳೀಸುವುದಾಗಿದೆ. ನಮ್ಮ ಮನೆ ಮತ್ತು ಪರಿಸರವರನ್ನು ಮೊದಲಾಗಿ ಸ್ಚಚ್ಚವಾಗಿಡುವುದರಿಂದ ನಮ್ಮ ದೇಶವನ್ನು ಸ್ವಚ್ಚ ಸುಂದರವಾಗಿಸಬಹುದು. ನಾವು ಮಾತಿನಲ್ಲಿ ಸ್ವಚ್ಚತೆಯಬಗ್ಗೆ ಹೇಳುತ್ತೇವೆ ಆದರೆ ನಮ್ಮ ಜವಾಬ್ದಾರಿಯನ್ನು ಮರೆಯುತ್ತೇವೆ. ಯಾವಾಗ ನಾವು ನಮ್ಮನ್ನು ಸ್ವಚ್ಚವಾಗಿರಿಸಿಕೊಳ್ಳುತ್ತೇವೆಯೋ ಆರೋಗ್ಯ ಪರಿಸರ ನಿರ್ಮಾಣ ಮಾಡುತ್ತೇವೆ. ಸ್ವಚ್ಚತೆ ನಮ್ಮ ಮನಸ್ಸು ಶುಚಿಗೊಳಿಸುವುದರೊಂದಿಗೆ ಆರೋಗ್ಯವಂತರಾಗಿ ಬಾಳಲು ಸಹಕಾರಿಯಾಗುತ್ತದೆ. ನಮ್ಮ ದೇಶವನ್ನು ಸ್ವಚ್ಚತೆಯಿಂದ ಇಡಲು ಅಭಿಯಾನಗಳನ್ನು ಆಯೋಜಿಸಬೇಕಾಗಿ ಬಂದಿರುವುದು ಖೇದಕರ ಸಂಗತಿ. ದೇಶದ ಪ್ರಧಾನಿಯವರು ಆಂದೋಲನಕ್ಕೆ ಚಾಲನೆ ನೀಡಿದ್ದು, ಸಮಾಜ ಅದನ್ನು ನಿರ್ಲಕ್ಷಿಸಿದೆ. ಜನರು ಸ್ವಚ್ಚತೆಯ ಕುರಿತು ಅರಿತುಕೊಂಡು ಇಂದೊಂದು ಮೂಲಭೂತ ಅವಶ್ಯಕತೆ ಎಂದು ಅರಿಯಬೇಕು ಎಂದರು.
ನಾವು ಬೇರೆ ದೇಶಗಳಿಗೆ ತೆರಳಿದರೆ ಅಲ್ಲಿನ ಸ್ವಚ್ಚತೆಯನ್ನು ಕಂಡು ಅದನ್ನು ಪ್ರಶಂಸಿಸುತ್ತೇವೆ ಅಲ್ಲದೆ ಅಲ್ಲಿನ ಸ್ವಚ್ಚತೆಯ ನಿಯಮಗಳನ್ನು ಕೂಡ ಪಾಲಿಸುತ್ತೇವೆ. ಆದರೆ ನಮ್ಮ ದೇಶದಲ್ಲಿ ಮಾತ್ರ ನಿಯಮಗಳನ್ನು ಗಾಳಿಗೆ ತೂರುತ್ತೇವೆ. ರಾಮಕೃಷ್ಣ ಮಿಷನ್ ಅಭಿಯಾನದಲ್ಲಿ ವಿದ್ಯಾರ್ಥಿಗಳು ಕೈಜೋಡಿಸಿರುವುದು ಉತ್ತಮ ವಿಷಯ ಎಂದರು.













