ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ  25 ಮತ್ತು 26 ನೇ ಶ್ರಮದಾನ ಕಾರ್ಯಕ್ರಮಗಳ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ  25 ಮತ್ತು 26 ನೇ ಶ್ರಮದಾನ ಕಾರ್ಯಕ್ರಮಗಳ ವರದಿ

25ನೇ ಶ್ರಮದಾನ ಕಾರ್ಯಕ್ರಮ: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ ನಾಲ್ಕನೇ ಹಂತದ 25ನೇ ಶ್ರಮದಾನ ಹೈಲ್ಯಾಂಡ್ ಫಳ್ನೀರ ಪರಿಸರದಲ್ಲಿ ನಡೆಯಿತು. 15-4-2018 ಭಾನುವಾರ ಬೆಳಿಗ್ಗೆ 7:30 ಕ್ಕೆ ಮೈಸೂರು ಶ್ರೀರಾಮಕೃಷ್ಣ ಅಶ್ರಮದ ಸ್ವಾಮಿ ತೀರ್ಥಕರಾನಂದಜಿ ಹಾಗೂ ಸ್ವಾಮಿ ಜಿತಕಾಮಾನಂದಜಿ ಮಹರಾಜ್ 25ನೇ ಶ್ರಮದಾನ ಕಾರ್ಯಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಖ್ಯಾತ ಮನೋವೈದ್ಯ ಡಾ. ಸತೀಶ್ ರಾವ್, ಮಹ್ಮದ್ ಶಮೀಮ್, ಶ್ರೀಮತಿ ಲತಾ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಮಳೆಯಲ್ಲಿ ಸ್ವಚ್ಛತೆ: ಶ್ರಮದಾನಕ್ಕೆ  ಚಾಲನೆ ನೀಡಿದ ಬಳಿಕ ಸ್ವಾಮಿಜಿದ್ವಯರು ಸ್ವತ: ಪೊರಕೆ ಹಿಡಿದು ಕಾರ್ಯಕರ್ತರೊಂದಿಗೆ ಸ್ವಲ್ಪಹೊತ್ತು ಶ್ರಮದಾನ ಮಾಡಿದರು. ಜೊತೆಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಹಿರಿಯ ಕಾರ್ಯಕರ್ತರು ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಮದರ್ ತೆರೇಸಾ ರಸ್ತೆಯ ಎರಡೂ ಬದಿಗಳನ್ನು ಹಾಗೂ ಪುಟ್‍ಪಾಥ್‍ಗಳನ್ನು ಶುಚಿಗೊಳಿಸಿದರು. ಮತ್ತೊಂದು ಗುಂಪು ದಯಾನಂದ ಕಂಕನಾಡಿ ಜೊತೆಗೂಡಿ ರಸ್ತೆಯ ಬದಿಯಲ್ಲಿ ಬಿದ್ದುಕೊಂಡಿದ್ದ ರಾಶಿ ರಾಶಿ ಕಲ್ಲುಗಳನ್ನು, ಕಟ್ಟಡ ತ್ಯಾಜ್ಯವನ್ನು ತೆಗೆದು ಟಿಪ್ಪರಿಗೆ ತುಂಬಿಸಿದರು. ಇದಲ್ಲದೇ ಬಸ್ ತಂಗುದಾಣವೊಂದು ಕಸ ಹಾಗೂ ಮಣ್ಣು ತುಂಬಿಕೊಂಡು ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಅಸಾಧ್ಯವಾಗಿತ್ತು. ಈ ದಿನ  ದಿನೇಶ್ ಕರ್ಕೇರಾ ಹಾಗೂ ಇತರ ಕಾರ್ಯಕರ್ತರು  ಅಲ್ಲಿದ್ದ ಮಣ್ಣು  ತೆಗೆದು, ಸ್ವಚ್ಛಗೊಳಿಸಿ, ಬಣ್ಣ ಬಳಿದು, ಸಣ್ಣ ಪುಟ್ಟ ದುರಸ್ತಿಗೊಳಿಸಿ ಬಸ್ ತಂಗುದಾಣÀವನ್ನು ಸ್ವಚ್ಛ ಸುಂದರವನ್ನಾಗಿಸಲಾಯಿತು. ಸೌರಜ್ ಮಂಗಳೂರು ಇವರ ನೇತೃತ್ವದಲ್ಲಿ ಅಲ್ಲಲ್ಲಿ ಕಟ್ಟಿದ್ದ ಪೆÇೀಸ್ಟರ್ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು. ದಿಲರಾಜ್ ಆಳ್ವ  ಅಭಿಯಾನವನ್ನು ಸಂಯೋಜಿಸಿದರು.

26ನೇ ಶ್ರಮದಾನ ಕಾರ್ಯಕ್ರಮ; ಸ್ವಚ್ಛ ಮಂಗಳೂರು ಅಭಿಯಾನದ 26ನೇ ಶ್ರಮದಾನವನ್ನು ಮಾರ್ನಮಿಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು.  15-4-2018 ಭಾನುವಾರ ಬೆಳಿಗ್ಗೆ 7:15 ಕ್ಕೆ ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಉಪಸ್ಥಿತಿಯಲ್ಲಿ  ಶ್ರೀ ಪುರುಷೋತ್ತಮ ಚಿತ್ಪಾಲ್, ಪ್ರಾಧ್ಯಪಕರು, ನಿಟ್ಟೆ ಫಿಸಿಯೋಥೆರಫಿ ಕಾಲೇಜು ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ಸುರೇಶ ಶೆಟ್ಟಿ  ಶ್ರಮದಾನ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು.

ಶುಚಿತ್ವ; ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ಯುವಕ ಯುವತಿಯರು  ಮಾರ್ನಮಿಕಟ್ಟೆಯ ನಾಲ್ಕೂ ರಸ್ತೆಗಳಲ್ಲಿ ಎರಡು ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತೆ ಮಾಡಿದರು. ಮಂಗಳಾದೇವಿ ದೇವಸ್ಥಾನದತ್ತ ಸಾಗುವ ಮಾರ್ಗ, ನಂದಿಗುಡ್ಡೆಯತ್ತ ಹೋಗುವ ದಾರಿ, ಮೋರ್ಗನ್ಸಗೇಟ್ ರಸ್ತೆ ಹಾಗೂ ಮಾರ್ನಮಿಕಟ್ಟೆ ವೃತ್ತ ಮುಂತಾದ ಸ್ಥಳಗಳನ್ನು ಕಸಗುಡಿಸಿ ಸ್ವಚ್ಚಗೊಳಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಧನೇಶ ಕುಮಾರ ವಿದ್ಯಾರ್ಥಿಗಳನ್ನು  ಮಾರ್ಗದರ್ಶಿಸಿದರು. ನಿವೇದಿತಾ ಬಳಗದ ಸದಸ್ಯರು ಮಾರ್ನಮಿಕಟ್ಟೆಯ ಕೆಳರಸ್ತೆಗಳನ್ನು ಹಾಗೂ ತೋಡುಗಳನ್ನು ಸ್ವಚ್ಛ ಮಾಡಿದರು.

ತ್ಯಾಜ್ಯದ ರಾಶಿಯ ತೆರವು: ಮಾರ್ನಮಿಕಟ್ಟೆಯ ಬಸ್ ತಂಗುದಾಣದ ಪಕ್ಕದ ಜಾಗೆಯೊಂದರಲ್ಲಿ ಸಾರ್ವಜನಿಕರು ಪ್ರತಿನಿತ್ಯ ಕಸತ್ಯಾಜ್ಯವನ್ನು ಬಿಸಾಡುತ್ತಿದ್ದರು. ಕಳೆದೆರಡು ದಿನಗಳಿಂದ ಅಲ್ಲಿನ ಅಂಗಡಿಗಳನ್ನು, ಮನೆಗಳನ್ನು ಸಂಪರ್ಕಿಸಿ ಕಸವನ್ನು ರಸ್ತೆಯ ಬದಿ ಚೆಲ್ಲಬಾರದಾಗಿ ವಿನಂತಿಸಲಾಗಿತ್ತು.  ಇಂದು ಮೆಹಬೂಬ್ ಖಾನ್, ಸುಧೀರ್ ವಾಮಂಜೂರು  ಹಾಗೂ ಸ್ವಯಂಸೇವಕರು ಶ್ರಮವಹಿಸಿ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು.  ನಂತರ  ಜೆಸಿಬಿ ಬಳಸಿ ನೆಲವನ್ನು ಸಮತಟ್ಟು ಮಾಡಿ, ಹೊಸದಾಗಿ ಒಂದಿಷ್ಟು ಮಣ್ಣು ಹಾಕಿಸಿದರು ಕೊನೆಯಲ್ಲಿ ಆ ಜಾಗೆಯ ಸೌಂದರ್ಯ ಹೆಚ್ಚಿಸಲು ಹೂಕುಂಡಗಳನ್ನು ಅಲ್ಲಿಡಲಾಯಿತು. ಸುತ್ತಮುತ್ತಲಿನ ಅಂಗಡಿಗಳನ್ನು ಸಂಪರ್ಕಿಸಿ ಈ ಜಾಗೆಯನ್ನು ಸ್ವಚ್ಛವಾಗಿಡುವಂತೆ ಮನವಿ ಮಾಡಿ ಅದರ ನಿರ್ವಹಣೆಯ eವಾಬ್ದಾರಿಯನ್ನು ಅವರಿಗೆ ಕೊಡಲಾಯಿತು.  ಶ್ರೀ ಉಮಾನಾಥ್ ಕೋಟೆಕಾರ್ ಅಭಿಯಾನದ ಉಸ್ತುವಾರಿ ವಹಿಸಿದ್ದರು.

ಡಾ. ಚಂದ್ರಶೇಖರ್,  ಉದ್ಯಮಿ ಸಂದೀಪ್ ಶೇಣವ, ನಜೀರ್ ಅಹ್ಮದ್, ಚೇತನಾ ಗಡಿಯಾರ್, ಯೋಗಿಶ್ ಕಾಯರ್ತಡ್ಕ,  ಸೇರಿದಂತೆ ಅನೇಕ ಕಾರ್ಯಕರ್ತರು ಈ ಅಭಿಯಾನಗಳಲ್ಲಿ  ಪಾಲ್ಗೊಂಡರು. ಶ್ರಮದಾನದ ಬಳಿಕ ಎಲ್ಲ ಕಾರ್ಯಕರ್ತರಿಗೆ ಉಪಾಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.  ಈ ಸ್ವಚ್ಛತಾ ಅಭಿಯಾನಗಳಿಗೆ  ಎಂಆರ್‍ಪಿಎಲ್  ಸಂಸ್ಥೆ ಪ್ರಾಯೋಜಕತ್ವ  ನೀಡಿ ಪ್ರೋತ್ಸಾಹಿಸುತ್ತಿದೆ.


Spread the love