ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 5ನೇ ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 5ನೇ ಶ್ರಮದಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛತಾ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಶ್ರಮದಾನದ 5ನೇ ಭಾನುವಾರದ ಕಾರ್ಯಕ್ರಮವನ್ನು ಭಾನುವಾರದಂದು ಪದುವಾ ಪರಿಸರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಮಹಮ್ಮದ್ ನಜೀರ್ 5ನೇ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಮುಖ್ಯ ಅಭ್ಯಾಗತರಾಗಿ ಕ್ಯಾಪ್ಟನ್ ಗೋಪಿನಾಥ್ ರಾವ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಆಯುಕ್ತರಾದ ಶ್ರೀ ಮಹಮದ್ ನಜೀರ್ ಮಾತನಾಡಿ, “ಸಾರ್ವಜನಿಕರ ಸಹಕಾರವಿಲ್ಲದೇ ಸರಕಾರದ ಯಾವ ಯೋಜನೆಯೂ ಸಫಲವಾಗುವುದಿಲ್ಲ. ಇಂದು ಮಂಗಳೂರು ಸ್ವಚ್ಛತೆಯಲ್ಲಿ ದೇಶದ ಗಮನ ಸೆಳೆದಿದೆ ಅದಕ್ಕೆ ಕಾರಣ ರಾಮಕೃಷ್ಣ ಮಿಷನ್ ಜನರ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನ. ಮಂಗಳೂರು ನಗರ ಘನ ತ್ಯಾಜ್ಯ ನಿರ್ವಹಣೆಯಲ್ಲಿ ದೇಶದಲ್ಲಿ ಪ್ರಥಮ ಸ್ಥಾನ ಪಡೆಯುವಲ್ಲಿ ಈ ಅಭಿಯಾನದ ಪಾತ್ರ ಬಹಳಷ್ಟಿದೆ. ಈಗಾಗಲೇ ಪಾಲಿಕೆಯು ಮನೆಮನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆಗಾಗಿ ರಾಮಕೃಷ್ಣ ಮಿಷನ್ ಜೊತೆಗೆ ಪೂರ್ಣ ಪ್ರಮಾಣದಲ್ಲಿ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ಈ ಅಭಿಯಾನಕ್ಕೆ ಪೂರ್ಣ ಸಹಕಾರ ನೀಡಲು ಉತ್ಸುಕವಾಗಿದೆ.” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮೊಸಾ ಶರೀಫ್, ಹರ್ಷಕುಮಾರ್ ಕೇದಿಗೆ, ಶ್ರೀಕರ ಪ್ರಭು, ಭಾರತಿ ಭಟ್, ಮಹೇಶ್ ಕೆ.ಕೆ ಸೇರಿದಂತೆ ಸುಮಾರು ಇನ್ನೂರಕ್ಕೂ ಅಧಿಕ ಸ್ವಯಂ ಸೇವಕರು ಉಪಸ್ಥಿತರಿದ್ದರು. ಸ್ವಚ್ಛತಾ ಅಭಿಯಾನದ ಮಾರ್ಗದರ್ಶಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸರ್ವರನ್ನು ಸ್ವಾಗತಿಸಿದರು.

ಶ್ರಮದಾನ : ಒಟ್ಟು ಆರು ತಂಡಗಳಲ್ಲಿ ಸ್ವಚ್ಛತಾ ಕಾರ್ಯ ನೆರವೇರಿತು. ಪ್ರಥಮ ತಂಡ ನಿವೇದಿತಾ ಬಳಗದ ಸದಸ್ಯರು ಪದುವಾ ಹೆದ್ದಾರಿಯ ಮಾರ್ಗವಿಭಾಜಕಗಳನ್ನು ಸ್ವಚ್ಛಗೊಳಿಸಿದರು. ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಮತ್ತೊಂದು ತಂಡ ಹೆದ್ದಾರಿಯ ಪಕ್ಕದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ರಾಶಿಗಳನ್ನು ತೆಗೆದು ಶುಚಿಗೊಳಿಸಿದರು. ಮೂರನೇ ತಂಡ ಅನಿರುದ್ಧ ನಾಯಕ್ ಮಾರ್ಗದರ್ಶನದಲ್ಲಿ ನಂತೂರ ವೃತ್ತದತ್ತ ಸಾಗುವ ಮಾರ್ಗ ಬದಿಗಳಲ್ಲಿದ್ದ ಹುಲ್ಲು ತೆಗೆದು ಹಸನು ಮಾಡಿದರು. ನಾಲ್ಕನೇ ತಂಡದಲ್ಲಿದ್ದ ಪುನೀತ್ ಪೂಜಾರಿ ಹಾಗೂ ಯುವ ಕಾರ್ಯಕರ್ತರು ಕೆಪಿಟಿ ಯತ್ತ ಹೋಗುವ ರಸ್ತೆ ಬದಿಗಳಲ್ಲಿದ್ದ ಪ್ಲಾಸ್ಟಿಕ್ ರಾಶಿಗಳನ್ನು ತೆರವುಗೊಳಿಸಿದರು. ಡಾ. ಸತೀಶ್ ರಾವ್ ಹಾಗೂ ಹಿರಿಯರು ಬಸ್ ತಂಗುದಾಣಗಳ ಸುತ್ತಮುತ್ತ ಬೆಳೆದಿದ್ದ ಹುಲ್ಲು, ಕಸ, ಮಣ್ಣುಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಪದುವಾ ಪರಿಸರದಲ್ಲಿ ಬೀಡುಬಿಟ್ಟಿದ್ದ ಅಲೆಮಾರಿ ಜನರು ಕೊಳೆಮಾಡಿದ್ದ ಜಾಗೆಯನ್ನೂ ಸ್ವಚ್ಛಮಾಡಲಾಯಿತು. ಅಲ್ಲದೇ ಎರಡು ಬಸ್ ತಂಗುದಾಣಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಳಿದು ಅಂದಗೊಳಿಸಲಾಯಿತು. ಕಳೆದ ವಾರದ ಶ್ರಮದಾನಗೈದ ಜಾಗೆಯಲ್ಲಿದ್ದ ಎರಡು ಮಾರ್ಗಸೂಚಕ ಫಲಕಗಳನ್ನು ನವೀಕರಣ ಮಾಡಲಾಗಿದೆ.

10 ಟಿಪ್ಪರ್ ತ್ಯಾಜ್ಯ ತೆರವು: ಪದುವಾ-ಕೆಪಿಟಿ ಮಧ್ಯದಲ್ಲಿರುವ ಹೆದ್ದಾರಿ ಅಕ್ಕಪಕ್ಕದಲ್ಲಿ ರಾಶಿರಾಶಿಯಾಗಿ ಬಿದ್ದುಕೊಂಡಿದ್ದ ಕಟ್ಟಡ ತ್ಯಾಜ್ಯ ಸಹಿತ ಪ್ಲಾಸ್ಟಿಕ್ ಪೇಪರ್, ಹಳೆಯ ಹಾಸಿಗೆ, ಬಟ್ಟೆ, ಮತ್ತಿತರ ಕಸದ ರಾಶಿಗಳನ್ನು ತೆಗೆಯಲಾಗಿದೆ. ಅಭಿಯಾನದ ಪ್ರಮುಖರಾದ ದಿಲ್‍ರಾಜ್ ಆಳ್ವ, ಸುಭೋದಯ ಆಳ್ವ, ಅಶೋಕ ಸುಬ್ಬಯ್ಯ ಮತ್ತಿತರರು ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಸುಮಾರು ಆರು ಟಿಪ್ಪರಗಳನ್ನು ಹಾಗೂ ಎರಡು ಜೆಸಿಬಿ ವಾಹನಗಳ ಸಹಾಯದಿಂದ ಸುಮಾರು ನೂರು ಜನ ಕಾರ್ಯಕರ್ತರು ಈ ಕಾರ್ಯವನ್ನು ಕೈಗೊಂಡರು. ಹತ್ತು ಟಿಪ್ಪರ್ ಭರ್ತಿ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಲಾಯಿತು. ಇನ್ನೂ ಕೆಲಸ ಬಾಕಿಯಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಮತ್ತೊಂದು ಬಾರಿ ಶ್ರಮದಾನವನ್ನು ಅಲ್ಲಿಯೇ ಕೈಗೊಳ್ಳಲು ತೀರ್ಮಾನಿಸಲಾಯಿತು. ಕಾಯರ್ತಡ್ಕ ಗ್ರಾಮದಿಂದ ಸುಮಾರು ಇಪ್ಪತ್ತು ಜನರ ತಂಡ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡಿದ್ದು ಬಹಳ ವಿಶೇಷವಾಗಿತ್ತು. ಯೋಗಿಶ್ ಕಾಯರ್ತಡ್ಕ ನೇತೃತ್ವದಲ್ಲಿ ಯುವಶಕ್ತಿ ತಂಡದ ಸದಸ್ಯರು ಬೆಳಿಗ್ಗೆ 7-30 ರಿಂದ 10-30 ರ ವರೆಗೆ ಶ್ರಮದಾನ ಮಾಡಿದರು.

ಪಿ ಎನ್ ಭಟ್, ಕುದ್ರೋಳಿ ಗಣೇಶ್, ಗೀತಾ ಕುರುಂಬುಡೇಲು, ಚಂದ್ರಶೇಖರ್ ಹಂಕರ್ಜಾಲು, ರಾಮಚಂದ್ರ ಶೆಟ್ಟಿ, ಸರೀತಾ ಶೆಟ್ಟಿ, ಭಾನುಮತಿ, ರಾಜಗೋಪಾಲ್ ಶೆಟ್ಟಿ, ಅಕ್ಷಿತ್ ಶೆಟ್ಟಿ ಹಾಗೂ ಇನ್ನಿತರ ಕಾರ್ಯಕರ್ತರು ಸುಮಾರು ಮೂರು ಗಂಟೆಗಳ ಕಾಲ ಸ್ವಚ್ಛತೆಗಾಗಿ ಶ್ರಮದಾನ ಮಾಡಿದರು.

ಸ್ವಚ್ಛ ಉಡುಪಿ ಹಾಗೂ ಸ್ವಚ್ಛ ದಕ್ಷಿಣ ಕನ್ನಡ: ರಾಮಕೃಷ್ಣ ಮಿಷನ್ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಮಂಗಳೂರು ಇವರುಗಳ ಸಹಯೋಗದಲ್ಲಿ ಸುಮಾರು ನಲವತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳಾದ ಉಜಿರೆ, ತಣ್ಣಿರುಪಂತ, ಇರ್ವತ್ತೂರು, ಬೆಳಾಲು, ಐವರ್ನಾಡು, ಬೇಂಗಮಲೆ, ಪಡಪಣಂಬೂರು, ಮಿಯಾರು, ಅಂಬಲಪಾಡಿ, ಮುದರಂಗಡಿ, ಕೋಟತಟ್ಟು, ಶಿರೂರು, ಜಡಕಲ್, ಹಾರ್ದಳ್ಳಿ-ಮಂದಳ್ಳಿ, ಮಡಮಕ್ಕಿ, ವಂಡ್ಸೆ, ಬೆಳ್ಮಣ್, ಕಡ್ತಲ್, ಕೆರ್ವಾಶೆ, ಬೈಲೂರು, ಬೊಳ, ಹೇರೂರು, ನಲ್ಲೂರು, ದುರ್ಗಾ, ಕುಕ್ಕುಂದೂರು, ಇನ್ನಾ, ಚಾರ, ಹಾಲಾಡಿ ಇತ್ಯಾದಿ ಸ್ಥಳಗಳಲ್ಲಿ ಶ್ರಮದಾನ ನಡೆಯಿತು. ಒಟ್ಟು ನಲವತ್ತಕ್ಕೂ ಅಧಿಕ ಗ್ರಾಮಗಳಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೀನ್ ಕೋಣಾಜೆ ಹಾಗೂ ಉಡುಪಿಯಲ್ಲಿ ಸುಧೀರ್ ಅಡಮಲೆ ಕಾರ್ಯಕ್ರಮಗಳನ್ನು ಸಂಯೋಜಿಸಿದರು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್.ಪಿ.ಎಲ್ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿವೆ.

1 Comment

 1. I see that week after week, so much work is done. yet so much remains which means 2 things. 1. A lot of people are still irresponsible. It pains that educate cultured people of Mangaluru have still not embrace cleanliness. 2. Mangaluru corporation is not doing its duty incerely.
  Good that commisioner is now involved and is talking about cooperation.
  Here are a few humble suggestions (Nothing new and some of these may be already in place and may be I don’t know)
  1. Every week, there should be one team exclusively doing survey along with Mangaluru corporation officials (only those who are enthusiastic) and identify all areas of Mangaluru that needs to be cleaned. If corporators also can take part without party banners and work with citizens, this survey becomes easy.
  2. Have a dedicated website for this and let people give suggestions; post photos. IT companies in and around Mangaluru can take up this task of creating and maintaing a dedicated website as part of their CSR.
  3. A committee of officials, volunteers, Swamis of RK Ashram can decide which one to be taken by Sunday Swatchata Drive, what should Corporation do (For example, installing and cleaning trash bins in the public places). Mangaluru MP Nalin Kumar Kateel and Mangaluru MLAs could contribute and plan to meaningfully contribute to this by developing and implementing plans using their development funds.
  Mangalore has so many highly intelligent individuals; so many engineering and other colleges with some professors teaching public health; and many more intellectuals. They should come forward (may be on a active basis or by means of suggestions on the website).
  4. Finally a suggestion for Mangalorean or anyone else publishes these photos. You are doing a great job. It would be really good if you can please publish ‘before’ and ‘after’ side by side or next to each other and also it would be great to print the location information next to the picture.

Comments are closed.