ರಾಷ್ಟ್ರಮಟ್ಟದಲ್ಲಿ ಮಿಂಚಿದ ಕರ್ನಾಟಕದ ಬಾಲಕ-ಬಾಲಕೀಯರು

Spread the love

ರಾಷ್ಟ್ರಮಟ್ಟದಲ್ಲಿ ಮಿಂಚಿದ ಕರ್ನಾಟಕದ ಬಾಲಕ-ಬಾಲಕೀಯರು

ನವದೆಹಲಿ: 2020 ಮತ್ತು 2024 ರ ಓಲಂಪಿಕ್ಸ್‍ನನ್ನು ಕಣ್ಣ ಮುಂದೆ ಇಟ್ಟುಕೊಂಡು ದೇಶದ 120 ಜಿಲ್ಲೆ ಕೇಂದ್ರದಲ್ಲಿ 600 ಜಿಲ್ಲೆಗಳನ್ನು ಒಳಗೊಂಡ 11-14 ಮತ್ತು 15-17 ವರ್ಷದೊಳಗಿನ ಬಾಲಕ / ಬಾಲಕೀಯರ 100, 200 ಮತ್ತು 400 ಮೀಟರ್ ಓಟದ ಆಯ್ಕೆ ಪ್ರಕ್ರಿಯೆಯು ಯಶಸ್ವಿಯಾಗಿ ಮುಕ್ತಾಯವಾಗಿದೆ. ಇಡೀ ದೇಶದ 29 ರಾಜ್ಯಗಳಲ್ಲಿ 120 ಜಿಲ್ಲಾ ಕೇಂದ್ರದಲ್ಲಿ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಒಟ್ಟು 1,40,000 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ 20 ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಗೆ 3500 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಈ ಮೂಲಕ ರಾಜ್ಯಮಟ್ಟದಿಂದ 243 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮಿಂಚಿದ ಕರ್ನಾಟಕದ ಬಾಲಕ/ಬಾಲಕೀಯರು :
ಕರ್ನಾಟಕದಿಂದ ಒಟ್ಟು 10 ಬಾಲಕ / ಬಾಲಕಿಯರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಇದರಲ್ಲಿ 9 ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದರು. ಫೆ. 15 ರಿಂದ ಫೆ. 22 ರ ತನಕ ದೆಹಲಿಯ ತ್ಯಾಗರಾಜ ಮೈದಾನದಲ್ಲಿ ತರಭೇತಿ ಮತ್ತು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸೆಮಿಫೈನಲ್‍ನಲ್ಲಿ 7 ವಿದ್ಯಾರ್ಥಿಗಳು ಫೈನಲ್‍ಗೆ ಆಯ್ಕೆಯಾಗಿರುತ್ತಾರೆ.

ಫೈನಲ್‍ನಲ್ಲಿ ಕರ್ನಾಟಕ ಚಾಂಪಿಯನ್ (4 ಚಿನ್ನ 2 ಕಂಚು) :
ಕರ್ನಾಟಕದ ಬಾಲಕೀಯರ U-14 ನಲ್ಲಿ ನೆಹಲೋ ಅಣ್ಣ 100 ಮೀ ಓಟದಲ್ಲಿ 12.64 ಸೆಕೆಂಡ್‍ನಲ್ಲಿ ಓಡುವುದರ ಮೂಲಕ ಚಿನ್ನದ ಪದಕ ಗಳಿಸಿದರು. ಸರೋಣ ಸ್ತುತಿ ಬಾಲಕೀಯರ U-14 ನ 100 ಮೀ ಓಟದಲ್ಲಿ 12.93 ಸೆಕೆಂಡ್‍ನಲ್ಲಿ ಓಡುವುದರ ಮೂಲಕ ಕಂಚಿನ ಪದಕ ಪಡೆದರು. ಬಾಲಕೀಯರ U-14 ನ ಸರೋಣ ಸ್ತುತಿ 200 ಮೀಟರ್‍ನಲ್ಲಿ 26.95 ಸೆಕೆಂಡ್ ಓಡುವುದರ ಮೂಲಕ ಕಂಚಿನ ಪದಕ ಪಡೆದರು. ಬಾಲಕಿಯರ U-14 ನ 400 ಮೀಟರ್ ಓಟದಲ್ಲಿ 59.59 ಸೆಕೆಂಡ್ ಓಡುವುದರ ಮೂಲಕ ಗೌತಮಿ ಶೆಟ್ಟಿ ಚಿನ್ನದ ಪದಕ ಪಡೆದರು. ಬಾಲಕರ U-17 ನ ಓಟದಲ್ಲಿ 100 ಮೀಟರ್‍ನಲ್ಲಿ ಎಂ.ಡಿ. ಸಫ್ವಾನ್ 11.15 ಸೆಕೆಂಡ್‍ನಲ್ಲಿ ಓಡುವುದರ ಮೂಲಕ ಚಿನ್ನದ ಪದಕ ಪಡೆದರು. ಬಾಲಕರ U-17 ನ 200 ಮೀಟರ್‍ನಲ್ಲಿ ಅಭಿನ್ ದೇವಾಡಿಗ 22.09 ಸೆಕೆಂಡ್ ಮೂಲಕ ಚಿನ್ನದ ಪದಕ ಪಡೆದರು. ಈ ಮೂಲಕ ಕರ್ನಾಟಕ 4 ಚಿನ್ನ 2 ಕಂಚಿನ ಪದಕ ಪಡೆಯುವುದರ ಮೂಲಕ ತನ್ನ ಕ್ರೀಡಾ ಪ್ರತಿಭೆಯನ್ನು ಭಾರತಕ್ಕೆ ಪರಿಚಯಿಸುವ ಮೂಲಕ ಚಾಂಪಿಯನ್ ಆಯಿತು.

ರಾಷ್ಟ್ರೀಯ ಆಯ್ಕೆ ಸಮಿತಿ :
ಪಿ.ಟಿ. ಉಷಾ, ಶ್ರೀ ರಾಮ್ ಸಿಂಗ್ ಶೇಖಾವತ್, ರಚಿತಾ ಮಿಶಸ್ತ್ರಿ, ಅನುರಾಧ ಬಿಸ್ವಲ್, ಕವಿತಾ ರಾವತ್, ಮನಿಷ್ ಬಹುಗುಣ, ಮುರಳಿಧರನ್ ಇವರುಗಳು ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ಇವರು 10 ಜನರನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ. ಈಗಾಗಲೇ ಇವರು ಸೀಸನ್ 1 ಮತ್ತು 2 ರಲ್ಲಿ ಆಯ್ಕೆ ಮಾಡಿರುವ 14 ಬಾಲಕ ಬಾಲಕಿಯರು ಜಮೈಕಾದಲ್ಲಿ ಹುಸೈನ್ ಬೊಲ್ಟೊ ಮತ್ತು ಯೋವನ್ ಬ್ಲಾಕೇ ಇವರು ತರಬೇತಿ ನೀಡುತ್ತಿದ್ದಾರೆ.

ಅಭಿನಂದನೆ ಸಲ್ಲಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವ ಹರ್ಷವರ್ಧನ್ ಸಿಂಗ್ ರಾಥೋಡ್ ಎನ್‍ವೈಸಿಸ್ ಮತ್ತು ಗೈಲ್‍ನ ಪ್ರಯೋಜಕತ್ವದಲ್ಲಿ ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ತುಂಬು ಹೃದಯದಿಂದ ಶ್ಲಾಘಿಸಿದರು. ಕ್ರೀಡೆ ಮತ್ತು ಕ್ರೀಡೆ ಸಾಧಕರಿಂದ ದೇಶದ ಕ್ರೀಡಾ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯತೆಯಿದೆ ಎಂದು ಹೇಳಿದರು. ಮುಂದಿನ 2020 ಮತ್ತು 2024ರ ಓಲಂಪಿಕ್ಸ್‍ನಲ್ಲಿ ಭಾರತ ಪದಕ ಪಡೆಯುವುದು ನಿಶ್ಚಿತ. ಹೆಚ್ಚು ಹೆಚ್ಚು ಪ್ರಯತ್ನ ಪಟ್ಟಾಗ ಫಲಿತಾಂಶ ಪಡೆಯಲು ಸುಲಭ. ಖೇಲ್ ಇಂಡಿಯಾ ಮೂಲಕ ಕೇಂದ್ರ ಸರಕಾರವು ಒಂದು ಹೊಸ ಪ್ರಯತ್ನ ಮಾಡಿದೆ. ಅದು ಯಶಸ್ವಿಯಾಗಿರುವುದರಿಂದ ಮುಂದಿನ ದಿನಗಳಲ್ಲಿ ಓಲಂಪಿಕ್ಸ್‍ನಲ್ಲಿ ಪದಕ ಪಡೆಯುವುದು ನಿಶ್ಚಿತ ಎಂದು ಹೇಳಿದ್ದಾರೆ.

ಕರ್ನಾಟಕದಿಂದ 15 ಜಿಲ್ಲಾ ಸಂಚಾಲಕರು ಭಾಗವಹಿಸಿದರು. ಈ ಸಂದರ್ಭದಲ್ಲಿ ಎನ್.ವೈ.ಸಿ.ಎಸ್. ಅಧಕ್ಷರಾದ ಪ್ರಕಾಶ್ ಸಾಹು, ಆಡಳಿತ ಚೇರ್‍ಮೆನ್ ರಾಜೇಶ್ ಪಾಂಡೆ ಉಪಸ್ಥಿತರಿದ್ದರು.


Spread the love