ರಾಷ್ಟ್ರೀಯ ಯುವಜನ ಸಮ್ಮೇಳನ 2017: ಜಿಲ್ಲೆಗೆ ಪವಿತ್ರ ಶಿಲುಬೆ ಆಗಮನ

Spread the love

ರಾಷ್ಟ್ರೀಯ ಯುವಜನ ಸಮ್ಮೇಳನ 2017: ಜಿಲ್ಲೆಗೆ ಪವಿತ್ರ ಶಿಲುಬೆ ಆಗಮನ

ಉಡುಪಿ: ಕಥೊಲಿಕ ಕ್ರೈಸ್ತ ಸಮುದಾಯದ ರಾಷ್ಟ್ರೀಯ ಯುವಜನ ಸಮ್ಮೇಳನ 2017ರ ಸಿದ್ಧತೆ ಸಲುವಾಗಿ ಕರ್ನಾಟಕದಾದ್ಯಂತ ಪವಿತ್ರ ಶಿಲುಬೆಯ ಸಂಚಾರ ಈಗಾಗಲೇ ಆರಂಭಗೊಂಡಿದ್ದು ನವೆಂಬರ್ 27ರಂದು ಕಾರ್ಕಳ ಗಡಿಭಾಗವಾದ ಮಿಯಾರಿನಿಂದ ಉಡುಪಿ ಜಿಲ್ಲೆಗೆ ಆಗಮಿಸಿತು.

ಬೆಳ್ತಂಗಡಿ ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧರ್ಮಕೇಂದ್ರಗಳಲ್ಲಿ 20 ದಿನಗಳ ಕಾಲ ಈ ಪವಿತ್ರ ಶಿಲುಬೆ ಸಂಚರಿಸಿದ ಬಳಿಕ ಉಡುಪಿ ಧರ್ಮಕ್ಷೇತ್ರದ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಇದರ ಪದಾಧಿಕಾರಿಗಳು ಬೆಳ್ತಂಗಡಿಗೆ ತೆರಳಿ ಪವಿತ್ರ ಶಿಲುಬೆಯನ್ನು ಸ್ವೀಕರಿಸಿ ಉಡುಪಿ ಧರ್ಮಪ್ರಾಂತ್ಯದ ಗಡಿಭಾಗದ ಕಾರ್ಕಳ ತಾಲೂಕಿನ ಮಿಯಾರಿನಲ್ಲಿರುವ ಸಂತ ಡೊಮಿನಿಕರ ಚರ್ಚಿಗೆ ತರಲಾಯಿತು.

image001icym-nyc-cross-udupi-dist-20161127 image004icym-nyc-cross-udupi-dist-20161127 image005icym-nyc-cross-udupi-dist-20161127 image002icym-nyc-cross-udupi-dist-20161127 image003icym-nyc-cross-udupi-dist-20161127 image002icym-nyc-cross-udupi-diocese-20161127 image006icym-nyc-cross-udupi-diocese-20161127 image010icym-nyc-cross-udupi-diocese-20161127 image011icym-nyc-cross-udupi-diocese-20161127 image012icym-nyc-cross-udupi-diocese-20161127 image014icym-nyc-cross-udupi-diocese-20161127 image015icym-nyc-cross-udupi-diocese-20161127 image018icym-nyc-cross-udupi-diocese-20161127 image020icym-nyc-cross-udupi-diocese-20161127 image022icym-nyc-cross-udupi-diocese-20161127 image024icym-nyc-cross-udupi-diocese-20161127 image026icym-nyc-cross-udupi-diocese-20161127 image029icym-nyc-cross-udupi-diocese-20161127 image032icym-nyc-cross-udupi-diocese-20161127 image043icym-nyc-cross-udupi-diocese-20161127 image044icym-nyc-cross-udupi-diocese-20161127 image047icym-nyc-cross-udupi-diocese-20161127 image051icym-nyc-cross-udupi-diocese-20161127

ಬೆಳ್ತಂಗಡಿಯ ಸಂತ ಲಾರೆನ್ಸ್ ಕ್ಯಾಥೆಡ್ರಲ್‍ನಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ ಡಾ ಲಾರೆನ್ಸ್ ಮುಕ್ಕುಝಿ ನೇತೃತ್ವದಲ್ಲಿ ಪ್ರಾರ್ಥನಾವಿಧಿ ನೆರವೇರಿಸಿದ ಬಳಿಕ ವಿಕಾರ್ ಜನರಲ್ ವಂ ಬಿನೊಯ್, ಕ್ಯಾಥೆಡ್ರಲ್ ರೆಕ್ಟರ್ ವಂ ಜೋರ್ಜ್ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ ಶಿಬಿ ಥೋಮಸ್, ಕೋಶಾಧಿಕಾರಿ ಅರುಣ್ ಹಾಗೂ ಇತರ ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಯುವಜನರು ಜೊತೆಯಾಗಿ ಪವಿತ್ರ ಶಿಲುಬೆಯನ್ನು ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ ಎಡ್ವಿನ್ ಡಿ’ಸೋಜಾ, ಅಧ್ಯಕ್ಷರಾದ ಲೊಯೆಲ್ ಡಿ’ಸೋಜಾ, ಕಾರ್ಯದರ್ಶಿ ಫೆಲಿನಾ ಡಿ’ಸೋಜಾ, ಸಚೇತಕರಾದ ವಾಲ್ಟರ್ ಡಿ’ಸೋಜ, ಸಿಸ್ಟರ್ ಹಿಲ್ಡಾ ಮಸ್ಕರೇನ್ಹಸ್, ಕಾರ್ಕಳ ವಲಯ ಯುವ ನಿರ್ದೇಶಕ ವಂ ಸುನಿಲ್, ಪ್ರಾಂತೀಯ ಐಸಿವೈಎಮ್ ಪ್ರತಿನಿಧಿ ವೆಲಿಡಾ ಮಸ್ಕರೇನ್ಹಸ್ ಕೇಂದ್ರಿಯ, ವಲಯ ಹಾಗೂ ಮಿಯಾರು ಧರ್ಮಕೇಂದ್ರದ ಪ್ರತಿನಿಧಿಗಳಿಗೆ ಅವರಿಗೆ ಹಸ್ತಾಂತರಿಸಲಾಯಿತು. ಮಿಯಾರು ಚರ್ಚಿನ ವತಿಯಿಂದ ವಂ ಮನೋಹರ್, ಐಸಿವೈಎಮ್ ಅಧ್ಯಕ್ಷ ಜೋಯೆಲ್ ಸಾಂತುಮಾಯೆರ್ ಶಿಲುಬೆಯನ್ನು ಸ್ವೀಕರಿಸಿದರು.

ಬೆಳ್ತಂಗಡಿಯಿಂದ ಕಾರ್ಕಳ ತಾಲ್ಲೂಕಿನ ಮಿಯಾರಿನಲ್ಲಿರುವ ಸಂತ ಡೊಮಿನಿಕರ ದೇವಾಲಯಕ್ಕೆ ತಂದ ಪವಿತ್ರ ಶಿಲುಬೆಗೆ ಅದ್ದೂರಿಯಾದ ಸ್ವಾಗತವನ್ನು ಕೋರಲಾಯಿತು. ಬಳಿಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು.

ನವೆಂಬರ್ 27 ರಿಂದ ಡಿಸೆಂಬರ್ 11ರವರೆಗೆ ಉಡುಪಿ ಧರ್ಮಕ್ಷೇತ್ರದ ವ್ಯಾಪ್ತಿಯ ವಿವಿಧ ಧರ್ಮಕೇಂದ್ರಗಳಲ್ಲಿ ಈ ಶಿಲುಬೆ ಸಂಚರಿಸಲಿದೆ. ಈಗಾಗಲೇ ಉಡುಪಿಯ ಯುವಜನರು ಸಕಲ ಸಿದ್ಧತೆಗಳನ್ನು ಮಾಡಿದ್ದು ಡಿಸೆಂಬರ್ 11ರಂದು ಧರ್ಮಕ್ಶೇತ್ರದ ಮಹಾದೇವಾಲಯ ಮಿಲಾಗಿಸ್ ಕ್ಯಾಥೆಡ್ರಲ್‍ನಲ್ಲಿ ಉಡುಪಿಯ ಧರ್ಮಾಧ್ಯಕ್ಷರಾದ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಮೆರವಣಿಗೆ, ಬಲಿಪೂಜೆ, ಶಿಲುಬೆಯ ಆರಾಧನೆ ಹಾಗೂ ಅದ್ದೂರಿ ಸಮಾರೋಪ ಕಾರ್ಯಕ್ರಮ ಜರುಗಲಿರುವುದು. ನಂತರ ಶಿಲುಬೆಯನ್ನು ಮಂಗಳೂರು ಧರ್ಮಕ್ಷೇತ್ರಕ್ಕೆ ಹಸ್ತಾಂತರಿಸಲಾಗುವುದು.

ಉಡುಪಿ ಧರ್ಮಪ್ರಾಂತ್ಯದಲ್ಲಿ ಶಿಲುಬೆ ಸಂಚರಿಲಿರುವ ಸ್ಥಳಗಳು: ನವೆಂಬರ್ 27-28 ಮಿಯಾರು, 29 ಕಾರ್ಕಳ ಟೌನ್, 30 ಬೆಳ್ಮಣ್, ಡಿಸೆಂಬರ್ 1 ಶಿರ್ವ, 2 ಪಾಂಗಾಳ – ಶಂಕರ್‍ಪುರ, 3 ಕಲ್ಮಾಡಿ, 4 ಮೂಡುಬೆಳ್ಳೆ, 5 ಉಡುಪಿ, 6 ಕುಂದಾಪುರ, 7 ತ್ರಾಸಿ, 8 ಸಾಸ್ತಾನ, 9 ಬಾರ್ಕೂರು, 10 ಮೌಂಟ್ ರೋಸರಿ ಸಂತೆಕಟ್ಟೆ ಸಂಚರಿಸಿ ಡಿಸೆಂಬರ್ 11 ರಂದು ಮೆರವಣಿಗೆಯ ಮೂಲಕ ಮಿಲಾಗ್ರಿಸ್ ಕ್ಯಾಥೆಡ್ರಲ್‍ಗೆ ತೆರಳಿ ಧರ್ಮಕ್ಶೇತ್ರದ ಮಹಾದೇವಾಲಯ ಮಿಲಾಗಿಸ್ ಕ್ಯಾಥೆಡ್ರಲ್‍ನಲ್ಲಿ ಉಡುಪಿಯ ಧರ್ಮಾಧ್ಯಕ್ಷರಾದ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಮೆರವಣಿಗೆ, ಬಲಿಪೂಜೆ, ಶಿಲುಬೆಯ ಆರಾಧನೆ ಹಾಗೂ ಅದ್ದೂರಿ ಸಮಾರೋಪ ಕಾರ್ಯಕ್ರಮ ಜರುಗಲಿರುವುದು.


Spread the love