ರಾಷ್ರೀಯ ರುಡ್‍ಸೆಟ್  ಅಕಾಡೆಮಿಯ ವಾರ್ಷಿಕ ವರದಿ ಬಿಡುಗಡೆ

Spread the love

ಮಂಗಳೂರು: ರಾಷ್ರೀಯ ರುಡ್‍ಸೆಟ್ ಅಕಾಡೆಮಿಯ (ನ್ಯಾಶನೆಲ್ ಅಕಾಡೆಮಿ ಆಪ್ ರುಡ್‍ಸೆಟಿ) ಅಧ್ಯಕ್ಷರಾದ ಡಾ.  ಡಿ. ವೀರೇಂದ್ರ ಹೆಗ್ಗಡೆಯವರು ಈ ಸಂಸ್ಥೆಯ 2014-15ರ ಸಾಲಿನ ವಾರ್ಷಿಕ ವರದಿಯನ್ನು ಇತ್ತೀಚೆಗೆ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು.

1

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಇವರ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು ರಾಷ್ಟ್ರ ಮಟ್ಟದ ತರಬೇತಿ ಸಂಸ್ಥೆಯಾಗಿದ್ದು ದೇಶದಾದ್ಯಂತ ಇರುವ ಗ್ರಾಮೀಣ ಸ್ವಉದ್ಯೋಗ ಸಂಸ್ಥೆ (ರುಡ್‍ಸೆಟ್ ಮತ್ತು ಆರ್‍ಸೆಟಿ)ಗಳ ನಿರ್ದೇಶಕರು ಮತ್ತು ಬೋಧಕವರ್ಗದವರಿಗೆ ಅತ್ಯುತ್ತಮವಾದ ತರಬೇತಿ ಮತ್ತು ಮಾರ್ಗದರ್ಶನ ನೀಡುತ್ತಿದೆ ಎಂದು ಡಾ.ಹೆಗ್ಗಡೆಯವರು ಈ ಸಂದರ್ಭದಲ್ಲಿ ಹೇಳಿದರು.

ಈ ಸಮಾರಂಭದಲ್ಲಿ ಸಂಸ್ಥೆಯ ಮಹಾನಿರ್ದೇಶಕರಾದ ಶ್ರೀ.ಎನ್. ಮಂಜುನಾಥ ಭಟ್, ನಿರ್ದೇಶಕರಾದ ಶ್ರೀ.ಗೋಪಾಲ್ ಕೆ. ಬಂಡಿವಾಡ ಮತ್ತು ರುಡ್‍ಸೆಟ್ ಸಂಸ್ಥೆಯ ಕೇಂದ್ರ ಕಛೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಟಿ. ಪಿ. ಜಗದೀಶ ಮೂರ್ತಿ ಮತ್ತು ಉಜಿರೆ ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ. ಅಜಿತ್ ರಾಜಣ್ಣನವರ್ ಉಪಸ್ಥಿತರಿದ್ದರು.


Spread the love