ರಾಹುಲ್ ಪ್ರಧಾನಿ ಮಾಡಲು ಕಟಿಬದ್ಧರಾಗಲು ಕಾರ್ಯಕರ್ತರಿಗೆ ಎಂ.ಬಿ ಪಾಟೀಲ್ ಕರೆ

Spread the love

ರಾಹುಲ್ ಪ್ರಧಾನಿ ಮಾಡಲು ಕಟಿಬದ್ಧರಾಗಲು ಕಾರ್ಯಕರ್ತರಿಗೆ ಎಂ.ಬಿ ಪಾಟೀಲ್ ಕರೆ

ಉಡುಪಿ: ಪಂಚ ರಾಜ್ಯಗಳಚುನಾವಣೆಯಿಂದ ಕಾಂಗ್ರೆಸ್ಗೆ ಶಕ್ತಿಬಂದಿದೆ. ಮುಂದಿನ ಚುನಾವಣೆಯಲ್ಲಿ ಯುಪಿಎ ಸರಕಾರ ಅಧಿಕಾರಕ್ಕೆ ಬರಲಿದ್ದು, ರಾಹುಲ್ ಗಾಂಧಿಯವರನ್ನು ಪ್ರಧಾನಿಯಾಗಿ ಮಾಡಲು ಕಾರ್ಯಕರ್ತರು ಕಟಿಬದ್ಧರಾಗಬೇಕು ಎಂದು ಗೃಹಸಚಿವ ಎಂ.ಬಿ. ಪಾಟೀಲ್ ಹೇಳಿದರು.

ಶನಿವಾರ ಬ್ರಹ್ಮಗಿರಿ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮೋದಿ ಸರಕಾರ ಸರ್ವ ರಂಗಗಳಲ್ಲಿ ವಿಫಲವಾಗಿದೆ. ಧರ್ಮದ ಹೆಸರಿನಲ್ಲಿ ಅಧಿಕಾರಕ್ಕೇರುವ ಬಿಜೆಪಿ ಹುನ್ನಾರವನ್ನು ಜನರು ಅರಿತಿದ್ದಾರೆ. ನಾವು ಲೋಕಸಭಾ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದರು.

ಮಾಜಿ ಶಾಸಕರಾದ ಪ್ರಮೋದ್ ಮಧ್ವರಾಜ್, ಯು.ಆರ್. ಸಭಾಪತಿ, ಗೋಪಾಲ ಭಂಡಾರಿ, ಮೊದಿನ್ ಬಾವಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಎಮ್ ಎ ಗಫೂರ್, ಅಶೋಕ ಕುಮಾರ್ ಕೊಡವೂರು, ಸರಳಾ ಕಾಂಚನ್, ಸರಸು ಬಂಗೇರ, ದಿನೇಶ ಪುತ್ರನ್, ನರಸಿಂಹ ಮೂರ್ತಿ, ಮುನಿಯಾಲು ಉದಯಕುಮಾರ ಶೆಟ್ಟಿ, ಯತೀಶ ಕರ್ಕೇರ  ಉಪಸ್ಥಿತರಿದ್ದರು.


Spread the love