ರೂ 8 ಲಕ್ಷ ಮೌಲ್ಯದ ಅಕ್ರಮ ಮದ್ಯ ಸಾಗಾಟ ಪತ್ತೆ

Spread the love

ಉಡುಪಿ: ಏಪ್ರಿಲ್ 27 ರ ಸಂಜೆ 4.30 ರ ಸಮಯಕ್ಕೆ ಕುಂದಾಪುರ ತಾಲೂಕು ಶೀರೂರು ಗ್ರಾಮದ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರ ಚೆಕ್‍ಪೋಸ್ಟ್ ಬಳಿ ಅಕ್ರಮವಾಗಿ 14,000 ಲೀ ಗೋವಾ ರಾಜ್ಯದಲ್ಲಿ ತಯಾರಾದ ಮದ್ಯವನ್ನು ಹೊಂದಿ ಮಾರಾಟ ಮಾಡಲು ವಾಹನ ಸಂಖ್ಯೆ ಕೆಎ-20-ಡಿ-7671ರಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಲಾಗಿದೆ.

Excise

ಸದರಿ ಪ್ರಕರಣದಲ್ಲಿ ಭಾಗಿಯಾಗಿರುವ ಎಂ. ಅನಿಲ್ ಕುಮಾರ್ (ಪ್ರಾಯ:22 ವರ್ಷ, ಬಿನ್: ಅಂದಾನಿ ನಾಯ್ಕ್, ಹೂವಿನ ಹಡಗಲಿ, ಕೆ.ಕೆ ತಾಂಡಾ ಬಳ್ಳಾರಿ ಜಿಲ್ಲೆ, ಮೋಟ್ಲ ನಾಯ್ಕ್(ಪ್ರಾಯ 33 ವರ್ಷ, ಬಿನ್ ಸೋಮ್ಲ ನಾಯ್ಕ್, ಹೂವಿನ ಹಡಗಲಿ ತಾಲೂಕು, ಬಿತ್ಯಾನ ತಾಂಡಾ, ಬಳ್ಳಾರಿ ಜಿಲ್ಲೆ ಇವರನ್ನು ದಸ್ತಗಿರಿ ಮಾಡಿ ವಾಹನದೊಂದಿಗೆ ಗೋವಾ ಮದ್ಯ ಮತ್ತು 1 ಮೊಬೈಲ್ ಫೋನ್‍ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ 8,00,000/- ಆಗಿರುತ್ತದೆ.
ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಎಸ್.ಎಲ್. ರಾಜೇಂದ್ರ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ, ಉಡುಪಿ ಜಿಲ್ಲೆ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ಕೆ.ಎಸ್ ಮುರಳಿ ಇವರ ನಿರ್ದೇಶನದಂತೆ, ಅಬಕಾರಿ ಉಪನಿರೀಕ್ಷಕ ಬಿ.ಚಂದ್ರಶೇಖರ ನಾಯ್ಕ, ಜಿಲ್ಲಾ ತಂಡ ಹಾಗೂ ಸಿಬ್ಬಂದಿಯವರಾದ ಅಬಕಾರಿ ರಕ್ಷಕ ಶಾಂತಪ್ಪ ಏಳಗಿ, ಗೃಹ ರಕ್ಷಕ ಗಣೇಶ್ ಹಾಗೂ ವಾಹನಚಾಲಕರಾದ ಪ್ರಕಕಾಶ್‍ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಅಬಕಾರಿ ಉಪನಿರೀಕ್ಷಕ ಬಿ.ಚಂದ್ರಶೇಖರ ನಾಯ್ಕ, ಜಿಲ್ಲಾ ತಂಡ ಉಡುಪಿ ಇವರು ಮೊಕದ್ದಮೆಯನ್ನು ದಾಖಲಿಸಿ ಮುಂದಿನ ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಸ್ ರವರ ಪ್ರಕಟಣೆ ತಿಳಿಸಿದೆ.


Spread the love