ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಕಡಬ ಗ್ರಾಮ ಲೆಕ್ಕಾಧಿಕಾರಿ

ಲಂಚ ಸ್ವೀಕಾರದ ವೇಳೆ ಎಸಿಬಿ ಬಲೆಗೆ ಬಿದ್ದ ಕಡಬ ಗ್ರಾಮ ಲೆಕ್ಕಾಧಿಕಾರಿ

ಮಂಗಳೂರು: ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಗ್ರಾಮ ಲೆಕ್ಕಾಧಿಕಾರಿಯೋರ್ವರು ಎಸಿಬಿ ಬಲೆಗೆ ಬಿದ್ದ ಘಟನೆ ಮಂಗಳೂರಿನ ಕಡಬದಲ್ಲಿ ನಡೆದಿದೆ.

ಕಡಬ ಗ್ರಾಮ ಪಂಚಾಯತ್ ಗ್ರಾಮ ಲೆಕ್ಕಾಧಿಕಾರಿ ದುರ್ಗಪ್ಪ ಎಂಬವರು ಖಾತಾ ಬದಲಾವಣೆ ವಿಚಾರದಲ್ಲಿ ಶರತ್ ಪಿ ಎನ್ ಹಲೇರನರಕ್ಕಿ ಎಂಬವರಿಂದ ರೂ 8000 ಬೇಡಿಕೆ ಇಟ್ಟಿದ್ದು ರೂ 5000 ಮುಂಗಡ ಹಣವನ್ನು ಪಡೆದಿದ್ದರು. ಗುರುವಾರ ಪುನಃ ಬಾಕಿ ರೂ 3000 ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ದಾಳಿಯಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮಸುಂದರ್, ಯೋಗೀಶ್, ಅಧಿಕಾರಿಗಳಾದ ಹರಿಪ್ರಸಾದ್, ರಾಧಕೃಷ್ಣ, ಉಮೇಶ್, ರಾಕೇಶ್, ರಾಜೇಶ್, ಪ್ರಶಾಂತ್, ವೈಶಾಲಿ, ಗಣೇಶ್ ಉಪಸ್ಥಿತರಿದ್ದರು.

Leave a Reply

  Subscribe  
Notify of