ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಖ್ಯಾತ್ ಶೆಟ್ಟಿಗೆ ಅಭ್ಯರ್ಥಿಯಾಗಿ ಟಿಕೇಟ್ ನೀಡಲು ಅಭಿಮಾನಿಗಳಿಂದ ಆಸ್ಕರ್ ರಿಗೆ ಮನವಿ

Spread the love

ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಪ್ರಖ್ಯಾತ್ ಶೆಟ್ಟಿಗೆ ಅಭ್ಯರ್ಥಿಯಾಗಿ ಟಿಕೇಟ್ ನೀಡಲು ಅಭಿಮಾನಿಗಳಿಂದ ಆಸ್ಕರ್ ರಿಗೆ ಮನವಿ

ಉಡುಪಿ : ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಸಮಾಜ ಸೇವಕರಾಗಿರುವ ತೆಂಕನಿಡಿಯೂರಿನ ಪ್ರಖ್ಯಾತ್ ಶೆಟ್ಟಿಯವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಟಿಕೇಟ್ ನೀಡುವಂತೆ ಅಭಿಮಾನಿ ಬಳಗ ಕಾಂಗ್ರೆಸ್ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರಖ್ಯಾತ್ ಶೆಟ್ಟಿಯವರು ರಾಜಕೀಯದಲ್ಲಿ ಪ್ರಭಾವಿ ನಾಯಕರಾಗಿದ್ದು, ಯುವಕರ ಬಗ್ಗೆ ಹೆಚ್ಚಿನ ಕಾಳಜಿಯುಳ್ಳವರಾಗಿದ್ದಾರೆ. ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಪ್ರತಿಯೊಬ್ಬರ ಪರಿಚಿರತರಾಗಿದ್ದು ಅವರಿಗೆ ಲೋಕಸಭಾ ಟಿಕೇಟ್ ನೀಡಿದ್ದಲ್ಲಿ ಯುವಕರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ಯತೀಶ್ ಕರ್ಕೇರ, ಹಾಗೂ ಕಾಂಗ್ರೆಸ್ ಕಾಯ೯ಕತ೯ರು ಉಪಸ್ಥಿತರಿದ್ದರು.


Spread the love