ಲ್ಯಾಂಡ್ ಟ್ರೇಡ್ಸ್ ನ ಪ್ರತಿಷ್ಠಿತ ಸಾಲಿಟೇರ್ ಯೋಜನೆ ನಿರ್ಮಾಣ ಪರವಾನಗಿ ನ್ಯಾಯಬದ್ಧ: ಸುಪ್ರೀಂ ಕೋರ್ಟ್ ತೀರ್ಪು

ಲ್ಯಾಂಡ್ ಟ್ರೇಡ್ಸ್ ನ ಪ್ರತಿಷ್ಠಿತ ಸಾಲಿಟೇರ್ ಯೋಜನೆ ನಿರ್ಮಾಣ ಪರವಾನಗಿ ನ್ಯಾಯಬದ್ಧ: ಸುಪ್ರೀಂ ಕೋರ್ಟ್ ತೀರ್ಪು

ಮಂಗಳೂರು: ನಗರದ ಲ್ಯಾಂಡ್ಟ್ರೇಡ್ಸ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್ನ ಪ್ರತಿಷ್ಠಿತ `ಸಾಲಿಟೇರ್’ ರೆಸಿಡೆನ್ಸಿಯಲ್ ಯೋಜನೆಗೆ ಮಂಗಳೂರು ಮಹಾನಗರ ಪಾಲಿಕೆ ನೀಡಿರುವ ಕಟ್ಟಡ ನಿರ್ಮಾಣ ಪರವಾನಗಿಯು (ಲೈಸೆನ್ಸ್) ನ್ಯಾಯಬದ್ಧ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ನಗರದ ಪ್ರಮುಖ ಪ್ರದೇಶವಾಗಿರುವ ಹ್ಯಾಟ್ಹಿಲ್ನಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಾಲಿಟೇರ್ನ ಸಂಪರ್ಕ ರಸ್ತೆಗಳಲ್ಲೊಂದರ ಅಗಲೀಕರಣಕ್ಕೆ ಸಮ್ಮತಿ ಇಲ್ಲದ ಕೆಲವು ಮಂದಿ ಸ್ಥಳೀಯರು, ನಗರ ಪಾಲಿಕೆಯು ಸಾಲಿಟೇರ್ ಕಟ್ಟಡ ನಿರ್ಮಾಣಕ್ಕೆ ನೀಡಿರುವ ಪರವಾನಗಿ ಬಗ್ಗೆ ಕರ್ನಾಟಕದ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ದೂರು ಸಲ್ಲಿಸಿದ್ದರು. ಎಲ್ಲಾ ವಾದ ಪ್ರತಿವಾದ ಆಲಿಸಿದ ಬಳಿಕ ಪಾಲಿಕೆಯ ಪರವಾನಗಿಯು ಕಾನೂನು ಬದ್ಧವೆಂದು ಉಚ್ಚ ನ್ಯಾಯಾಲಯ ತೀರ್ಪು ನೀಡಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ದೂರುದಾರರು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 19-7-2019ರಂದು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ ಕೂಡಾ ಪಾಲಿಕೆಯ ಪರವಾನಗಿ ಕಾನೂನುಬದ್ಧವೆಂದು ತೀರ್ಪು ನೀಡಿತು. ಪಾಲಿಕೆಯು ಲ್ಯಾಂಡ್ಟ್ರೇಡ್ಸ್ನ `ಸಾಲಿಟೇರ್’ ಯೋಜನೆಗೆ ಕಾನೂನಿಗೆ ಅನುಗುಣವಾಗಿ ಕ್ಷಿಪ್ರವಾಗಿ ಪೂರ್ಣಗೊಂಡಿರುವ ಪ್ರಮಾಣಪತ್ರ (ಛಿomಠಿಟeಣioಟಿ ಛಿeಡಿಣiಜಿiಛಿಚಿಣe) ನೀಡಬೇಕೆಂದು ಆದೇಶಿಸಿದೆ. ಸಾಲಿಟೇರ್ ಸಂಪರ್ಕಿಸುವ ರಸ್ತೆಯನ್ನು ಪಾಲಿಕೆ ಅಗಲೀಕರಣಗೊಳಿಸುವ ಬಗ್ಗೆ ತಾನು ನೀಡಿದ್ದ `ಯಥಾಸ್ಥಿತಿ’ ಆಜ್ಞೆಯನ್ನು ಕೂಡಾ ಇದೇ ವೇಳೆ ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ. ಅರ್ಜಿದಾರರ ಸಮಸ್ಯೆಗಳಿಗೆ ಸಂಬಂಧಿಸಿ ನ್ಯಾಯಾಲಯದ ಸೂಚನೆಯಂತೆ ಪಾಲಿಕೆಯು ರಸ್ತೆ ಅಗಲೀಕರಣದ ಸಂದರ್ಭದಲ್ಲಿ, ಅರ್ಜಿದಾರರ ಪೈಕಿ ಮೂವರ ಕಟ್ಟಡಗಳ ರಕ್ಷಣೆಗಾಗಿ ರಕ್ಷಣಾಗೋಡೆ ನಿರ್ಮಿಸಲು ಸಮ್ಮತಿಸಿದೆ. ಈ ಮೂಲಕ, ರಸ್ತೆ ಅಗಲೀರಣಕ್ಕೆ ಸಂಬಂಧಿಸಿದ ಎಲ್ಲಾ ಅಡೆತಡೆಗಳು ನ್ಯಾಯೋಚಿತವಾಗಿ ಪರಿಹಾರಗೊಂಡಿವೆ.
ಪ್ರತಿಷ್ಠೆಯ ಯೋಜನೆ: ಶ್ರೀನಾಥ್ ಹೆಬ್ಬಾರ್
`ಸಾಲಿಟೇರ್ ಯೋಜನೆಯು ಸರ್ವಶ್ರೇಷ್ಠ ಸ್ವರೂಪದಲ್ಲಿ ನಿರ್ಮಾಣಗೊಳ್ಳುವಂತೆ ನಾವು ಕ್ರಮ ಕೈಗೊಂಡಿದ್ದೇವೆ. ನ್ಯಾಯಾಲಯದ ಅಂಗಣದಲ್ಲಿದ್ದು ಈ ಪ್ರತಿಷ್ಠಿತ ಯೋಜನೆಯ ನಿರ್ಮಾಣ ಪರವಾನಗಿಯನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಪುರಸ್ಕರಿಸಿದ್ದು ನಮಗೆ ಸಂತಸ ನೀಡಿದೆ’ ಎಂದು ಲ್ಯಾಂಡ್ಟ್ರೇಡ್ಸ್ನ ಮಾಲಕ ಕೆ. ಶ್ರೀನಾಥ್ ಹೆಬ್ಬಾರ್ ಅವರು ಹೇಳಿದ್ದಾರೆ. ಈ ಅವಧಿಯಲ್ಲಿ ಸಂಪೂರ್ಣ ನಂಬಿಕೆಯಿಂದ ತನ್ನೊಂದಿಗೆ ಸಹಕರಿಸಿದ ಗ್ರಾಹಕರು, ಸಹವರ್ತಿಗಳಿಗೆ ಕೃತಜ್ಞನಾಗಿರುವುದಾಗಿ ವಿವರಿಸಿದ್ದಾರೆ.


ನಿರ್ಮಾಣವಾಗಿರುವ ಪ್ರತಿಷ್ಠೆಯ ಸಾಲಿಟೇರ್ ಯೋಜನೆಯಲ್ಲಿ 32 ಅಂತಸ್ತುಗಳಿದ್ದು, ನಗರದ ಅತೀ ಎತ್ತರದ ಯೋಜನೆಗಳಲ್ಲೊಂದಾಗಿದೆ. ಅರಬೀ ಸಮುದ್ರದ ಸುಂದರ ದೃಶ್ಯಗಳನ್ನು ಇಲ್ಲಿಂದ ವೀಕ್ಷಿಸಬಹುದಾಗಿದೆ.
2 ಬಿಎಚ್ಕೆ, 3 ಬಿಎಚ್ಕೆ, 4 ಬಿಎಚ್ಕೆ, 5 ಬಿಎಚ್ಕೆ, ಡೂಪ್ಲೆಕ್ಸ್ ಅಪಾರ್ಟ್ಮೆಂಟ್ಗಳು ವೈಭÀವಯುತ ಸೌಕರ್ಯ ಸಹಿತ ನಿರ್ಮಾಣಗೊಂಡಿವೆ. ಈಜುಕೊಳ, ಕ್ಲಬ್ಹೌಸ್, ಮಕ್ಕಳಿಗೆ ಆಟದ ಪ್ರದೇಶ, ಒಳಾಂಗಣ ಆಟಗಳು, ಸ್ನೂಕರ್, ಟೇಬಲ್ ಟೆನಿಸ್, ಧ್ಯಾನ ಮಂದಿರ, ಯೋಗ ಮಂದಿರ, ಜಾಕೂಜಿ- ಸೌನಾ-ಸ್ಟೀಮ್ ರೂಮ್ಗಳಿವೆ.

ಪರಿಸರ ಸ್ನೇಹಿ
ಸಾಲಿಟೇರ್ ಯೋಜನೆಯು ಪರಿಸರ ಸ್ನೇಹಿಯಾಗಿದ್ದು ಸೌರ ವಿದ್ಯುತ್, ಮಳೆನೀರು ಕೊಯ್ಲು, ತ್ಯಾಜ್ಯ ಬೇರ್ಪಡೆ, ಆಂತರಿಕವಾಗಿ ತ್ಯಾಜ್ಯ ಮರು ಬಳಕೆ ಸ್ಥಾವರ ಹೊಂದಿದೆ. ಸಕಾಲಿಕ ನಿರ್ಮಾಣ ಶ್ರೇಷ್ಠ ಸೌಲಭÀÀ್ಯ, ಬ್ರಾಂಡೆಡ್ ಸಲಕರಣೆಗಳ ಬಳಕೆಯ ಲ್ಯಾಂಡ್ಟ್ರೇಡ್ಸ್ ಪರಂಪರೆಯಂತೆ ನಿರ್ಮಾಣವಾಗಿದೆ.
ಸ್ಥಾಪನೆಯ ದಿನದಿಂದಲೇ ಲ್ಯಾಂಡ್ಟ್ರೇಡ್ಸ್ ಸಂಸ್ಥೆಯು ಎಲ್ಲಾ ನಿಯಮ, ಕಾನೂನುಗಳನ್ನು ಪರಿಪೂರ್ಣವಾಗಿ ಅನುಸರಿಸುತ್ತಿದೆ. ಎಲ್ಲಾ ಯೋಜನೆಗಳೂ ಕಾನೂನುಬದ್ಧವಾಗಿವೆ. ಐಎಸ್ಒ 9000: 2015 ಮಾನ್ಯತೆಯ ಲ್ಯಾಂಡ್ಟ್ರೇಡ್ಸ್ ಕ್ರಿಸಿಲ್ನಿಂದ ರಿಯಲ್ ಎಸ್ಟೇಟ್ ಡೆವಲಪರ್ನ ಡಿಎ2 ಪುರಸ್ಕಾರ ಹೊಂದಿದೆ ಎಂದು ಶ್ರೀನಾಥ್ ಹೆಬ್ಬಾರ್ ತಿಳಿಸಿದ್ದಾರೆ.