ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವೆಲರ್ಸ್ – 32 ನೇ ವರ್ಷದ ಸಂಭ್ರಮ

Spread the love

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವೆಲರ್ಸ್ – 32 ನೇ ವರ್ಷದ ಸಂಭ್ರಮ

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವೆಲರ್ಸ್ – 32 ನೇ ವರ್ಷದ ಸಂಭ್ರಮ ಡಿಸೆಂಬರ್ 16 ರಂದು  (ಕೃತಜ್ಞತಾ ಸಮರ್ಪಣೆ) ಸಮಾರಂಭವನ್ನು ಆಯೋಜಿಸಿತ್ತು. ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ನ ಗ್ರಾಹಕರು, ಹಿತೈಷಿಗಳು, ಮಾರ್ಗದರ್ಶಕರು ವ್ಯವಹಾರ ಸಹವರ್ತಿಗಳು ಮತ್ತು ಮಾಧ್ಯಮ ಸದಸ್ಯರಿಗೆ ಧನ್ಯವಾದ ಅರ್ಪಣೆಯು ಈ ಸಮಾರಂಭದ ಉದ್ದೇಶವಾಗಿತ್ತು.

ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ನ 3 ದಶಕಗಳ ಈ ಯಶಸ್ವಿ ಅಭಿಯಾನ ಸರ್ವರ ಅಭಿಮಾನದಿಂದ ಸಾಧ್ಯವಾಯಿತು. 1992 ರ ಅ.28ರಂದು ಮಂಗಳೂರಿನಲ್ಲಿ ಕೆ. ಶ್ರೀನಾಥ್ ಹೆಬ್ಬಾರ್ ರವರು ಮೊದಲ ತಲೆಮಾರಿನ ಉದ್ಯಮವಾಗಿ ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಸಂಸ್ಥೆಯು ಮಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ವಲಯದಲ್ಲಿ, ತನ್ನದೇ ಆದ ಯಶಸ್ವೀ ಪರಂಪರೆಯನ್ನು ಹೊಂದಿದೆ. ಕಾರ್ಕಳದ ಪುಟ್ಟ ಹಳ್ಳಿ ಕಬ್ಬಿನಾಲೆಯಿಂದ ಅನೇಕ ಕನಸುಗಳನ್ನು ಹೊತ್ತು ಮಂಗಳೂರಿಗೆ ಬಂದ ಹೆಬ್ಬಾರ್ರವರು ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ ಮೂಲಕ ಈ ಕನಸುಗಳನ್ನು ನನಸಾಗಿಸಿದರು. ಗ್ರಾಹಕರಿಗೆ ಸರ್ವಶ್ರೇಷ್ಠ ಕೊಡುಗೆಗಳನ್ನು ನೀಡುತ್ತಾ ಸತತ ಪರಿಶ್ರಮದಿಂದ ಈ ಎತ್ತರವನ್ನು ಸಾಧಿಸಿದರು.

ಆಸ್ತಿ ವ್ಯವಹಾರದ ಕನ್ಸಲ್ಟನ್ಸಿಯಾಗಿ ಆರಂಭವಾದ ಲ್ಯಾಂಡ್ ಟ್ರೇಡ್ಸ್ ಮುಂದೆ ಗೃಹ ನಿವೇಶನಗಳ ಅಭಿವೃದ್ಧಿ ಉದ್ಯಮದಲ್ಲಿ 1993 ರಲ್ಲಿ ಜಪ್ಪು ಬಪ್ಪಲ್ನಲ್ಲಿ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿತು. ಎಲ್ಲಾ ವರ್ಗದ ಜನರಿಗೆ ಸಾಧ್ಯವಾಗುವಂತೆ ಬೃಹತ್, ಮಧ್ಯಮ, ಸಣ್ಣ ಪ್ರಮಾಣದ 25 ಗೃಹ ಬಡಾವಣೆಗಳನ್ನು ನಿರ್ಮಿಸಲಾಯಿತು. 21ನೇ ಶತಮಾನದ ಅಪಾರ್ಟ್ಮೆಂಟ್ ಸಂಸ್ಕೃತಿಗೆ ಅನುಗುಣವಾಗಿ 2008 ರಲ್ಲಿ ಅಸ್ಟೋರಿಯಾ, ಮುಂದೆ ಪ್ರೀಮಿಯಂ ಯೋಜನೆಗಳಾದ ಸಾಲಿಟೇರ್, ಸಾಯಿ ಗ್ರಾಂಡ್ಯೂರ್, ನಕ್ಷತ್ರ, ಮೌರಿಷ್ಕ ಪ್ಯಾಲೇಸ್, ಅಟ್ಲಾಂಟಿಸ್, ಅದೀರಾ, ಮೈಲ್ಸ್ಟೋನ್-25 ಇತ್ಯಾದಿ ನಿರ್ಮಾಣಗೊಂಡವು. ಈಗ ಕದ್ರಿಯಲ್ಲಿ ಶಿವಭಾಗ್, ಬೆಂದೂರ್ವೆಲ್ನಲ್ಲಿ ಅಲ್ಟೂರ, ಚಿಲಿಂಬಿಯಲ್ಲಿ ಪ್ರಿಸ್ಟಿನ್, ಪಿವಿಎಸ್ ಜಂಕ್ಷನ್ ಬಳಿ ವಿಕ್ರಂ ನಿರ್ಮಾಣವಾಗುತ್ತಿದೆ. ಇದಲ್ಲದೇ ವಾಸ್ಲೇನ್ನಲ್ಲಿ ಬಿಎಂಕೆ ಸ್ಕೆöÊ ವಿಲ್ಲ ಹಾಗೂ ಅಳಕೆ ಕಂಬ್ಳದಲ್ಲಿ ಬಹುಮಹಡಿ ವಸತಿ ನಿಯೋಜನೆಗಳು ಪ್ರಾರಂಭವಾಗಲಿವೆ.

ನಿರ್ಮಾಣ ಕ್ಷೇತ್ರದ ಗರಿಷ್ಠ ಸಾಧನೆಗಳಾಗಿ ಐಎಸ್ಒ 9001:2015 ಮಾನ್ಯತೆ, ಕ್ರಿಸಿಲ್ನಿಂದ ಡಿಎ2 ಡೆವೆಲರ್ಸ್ ರೇಟಿಂಗ್ ಮಾನ್ಯತೆ ಇವು ಸಂಸ್ಥೆಗೆ ಬಂದ ಗರಿಮೆಗಳು. ಈವರೆಗೆ 42.52 ಲಕ್ಷ ಚ.ಅಡಿ ನಿರ್ಮಾಣವನ್ನು ಮುಕ್ತಾಯಗೊಳಿಸಿ ಹಸ್ತಾಂತರಿಸುವ ಸಂಸ್ಥೆಯು ಇದೀಗ 11.70 ಲಕ್ಷ ಚ.ಅಡಿ ನಿರ್ಮಾಣವನ್ನು ಕೈಗೆತ್ತಿಗೊಂಡಿದೆ.
ರೂಪೇಶ್ ಶೆಟ್ಟಿ : ಬ್ರಾö್ಯಂಡ್ ಅಂಬಾಸೆಡರ್ : ಪ್ರಖ್ಯಾತ ರಾಕ್ ಸ್ಟಾರ್, ಬಿಗ್ ಬಾಸ್ ಸೀಸನ್ 9 ರ ವಿಜೇತ ರೂಪೇಶ್ ಶೆಟ್ಟಿ ಅವರೀಗ ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ನ ಬ್ರಾö್ಯಂಡ್ ಅಂಬಾಸೆಡರ್ ಆಗಿ ನಿಯೋಜನೆಗೊಂಡಿದ್ದಾರೆ. ಅವರ ಕಲಾ ಉತ್ಸಾಹ ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ನ 32 ರ ಸಂಭ್ರಮದ ಜೊತೆಗೆ ಮೇಳೈಸಿದೆ ಅನ್ನುವುದು ಹೆಮ್ಮೆಯ ಸಂಗತಿ ಎಂದು ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ನ ಮಾಲಕ ಕೆ.ಶ್ರೀನಾಥ್ ಹೆಬ್ಬಾರ್ ಹೇಳುತ್ತಾರೆ.

ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ ಪ್ರಾಪರ್ಟಿ ಶೋ : ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ ಸಂಸ್ಥೆಯು ಕಳೆದ 4 ವರ್ಷಗಳಿಂದ ಪ್ರತೀ ಡಿಸೆಂಬರ್ನಲ್ಲಿ ಪ್ರಾಪರ್ಟಿ ಶೋ ಏರ್ಪಡಿಸುತ್ತದೆ. ನೂತನ ಯೋಜನೆಗಳು ಮತ್ತು ಆರ್ಥಿಕ ಮಾರ್ಗದರ್ಶನದ ಕುರಿತಾಗಿ ಮಾಹಿತಿ ಇಲ್ಲಿ ಇರುತ್ತದೆ. ಪ್ರಾಪರ್ಟಿ ಶೋದ 5ನೇ ಆವೃತ್ತಿಯು ಈ ಬಾರಿ ಡಿಸೆಂಬರ್ 17ರಿಂದ 20ರವರೆಗೆ ಬಲ್ಮಠದ ಮೈಲ್ಸ್ಟೋನ್-25 ಬಿಲ್ಡಿಂಗ್ನ 5 ಮಹಡಿಯಲ್ಲಿ ನಡೆಯಲಿದೆ. ಅನೇಕ ರಾಷ್ಟಿçÃಕೃತ ಬ್ಯಾಂಕ್ಗಳು ಹಾಗೂ ಖಾಸಗಿ ಬ್ಯಾಂಕ್ಗಳೂ ಇದರಲ್ಲಿ ಭಾಗವಹಿಸಲಿದ್ದು, ಸ್ಥಳದಲ್ಲೇ ಖರೀದಿ ಮಾಡಲು ಲ್ಯಾಂಡ್ ಟ್ರೇಡ್ಸ್ ಬಿಲ್ರ್ಸ್ ಆಂಡ್ ಡೆವೆಲರ್ಸ್ ಸಂಸ್ಥೆ ವ್ಯಾಪಕ ವ್ಯವಸ್ಥೆಯನ್ನು ಮಾಡಿದೆ.


Spread the love