ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ 

Spread the love

ವಂದೇ ಭಾರತ್ : ಕೊಚ್ಚಿನ್ – ಮಂಗಳೂರು ಹೊಸ ರೈಲು ಹಾಗೂ ತಿರುವನಂತಪುರ- ಮಂಗಳೂರಿಗೆ ವಿಸ್ತರಿಸಲು ಕಟೀಲ್ ಮನವಿ 

ತಿರುವನಂತಪುರ-ಕಾಸರಗೋಡು ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ತನಕ ವಿಸ್ತರಿಸುವಂತೆ ಹಾಗೂ ಮಂಗಳೂರಿನಿಂದ ಕೊಚ್ಚಿನ್ ಗೆ ಇನ್ನೊಂದು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ನೀಡುವಂತೆ ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನ್ ವೈಷ್ಣವ್ ರವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರು ನಗರವು ಕರ್ನಾಟಕದ ದಕ್ಷಿಣ ಭಾಗದ ಒಂದು ಪ್ರಮುಖ ಬಂದರು ಮತ್ತು ವಾಣಿಜ್ಯ ನಗರವಾಗಿದ್ದು, ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆಯನ್ನು ಮಂಗಳೂರಿಗೆ ವಿಸ್ತರಿಸುವುದರಿಂದ ಕೇರಳ ಮತ್ತು ಕರ್ನಾಟಕದ ನಡುವಿನ ಆರ್ಥಿಕ ಚಟುವಟಿಕೆಗಳಿಗೆ, ಪ್ರವಾಸೊಧ್ಯಮಕ್ಕೆ ಅನುಕೂಲವಾಗಲಿದೆ. ಸುಖಕರ ಪ್ರಯಾಣ ಹಾಗೂ ಅತೀ ವೇಗಕ್ಕೆ ಹೆಸರಾಗಿರುವ ವಂದೆ ಭಾರತ್ ಎಕ್ಸ್ ಪ್ರೆಸ್ ರೈಲ್ ನಿಂದ ಪ್ರಯಾಣ ಅವಧಿ ಕಡಿಮೆಯಾಗಲಿದೆ. ವಂದೇ ಭಾರತ್ ರೈಲಿಗೆ ಹೆಚ್ಚಿನ ಬೇಡಿಕೆ ಇದ್ದು ಈ ಕುರಿತು ಅಗತ್ಯ ಕ್ರಮಕೈಗೊಂಡು ತಿರುವನಂತ ಪುರ – ಮಂಗಳೂರಿಗೆ ಹಾಗೂ ಕೊಚ್ಚಿನ್ –ಮಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಒದಗಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.


Spread the love