ವಕ್ಫ್ ಆಸ್ತಿಯನ್ನು ಮಾರಾಟ ಮಾಡಿದವರ ವಿರುದ್ದ ಪ್ರತಿಭಟನಾ ಸಭೆ

Spread the love

ವಕ್ಫ್ ಆಸ್ತಿಯನ್ನು ಮಾರಾಟ ಮಾಡಿದವರ ವಿರುದ್ದ ಪ್ರತಿಭಟನಾ ಸಭೆ

ವಕ್ಫ್ ಸಂರಕ್ಷಣಾ ಸಮಿತಿ ಉಳ್ಳಾಲ ಇದರ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ವಕ್ಫ್ ಆಸ್ತಿಯನ್ನು ಮಾರಾಟ ಮಾಡಿದವರ ವಿರುದ್ದ ಬೃಹತ್ ಪ್ರತಿಭಟನಾ ಸಭೆ ಅಧ್ಯಕ್ಷರಾದ ರಿಯಾಝ್ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ವಕ್ಫ್ ಆಸ್ತಿಯನ್ನು ಅಕ್ರಮವಾಗಿ ಮಾರಾಟ ಮಾಡಿದ ಪ್ರಸ್ತುತ ವಜಾಗೊಂಡಿರುವ ಉಳ್ಳಾಲ ದರ್ಗಾ ಸಮಿತಿಯ ವಿರುಧ್ಧ ಕ್ರಮ ಕೈಗೊಳ್ಳಬೇಕೆಂದು ಸೆಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟದ ಅಧ್ಯಕ್ಷರಾದ ಬಹುಮಾನ್ಯ ಪಿ. ಎಸ್. ಶಿಹಾಬುದ್ದೀನ್ ಕಾಮಿಲ್ ಸಖಾಫಿ ತನ್ನ ದಿಕ್ಸೂಚಿ ಭಾಷಣದಲ್ಲಿ ಆಗ್ರಹಿಸಿದರು.

ಮದನಿ ನಗರ ಮದ್ರಸದ ಸದರ್ ಮುಅಲ್ಲಿಂ ಅಯ್ಯೂಬ್ ಮಹ್ಳರಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಹಳೆಕೋಟೆ ತಾಜುಲ್ ಉಲಮಾ ಮದ್ರಸ ಅಧ್ಯಾಪಕರಾದ ನಿಸಾರ್ ಸಖಾಫಿ ಉದ್ಘಾಟಿಸಿದರು.

ವೇದಿಕೆಯಲ್ಲಿ ಮಂಚಿಲ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಮೀದ್ ಮಂಚಿಲ, ಇಸ್ಮಾಯೀಲ್ ಮದನಿ ಮೊರಾಕ್ಕೊ, ಮುಸ್ತಫಾ ಮದನಿ ಮೇಲಂಗಡಿ, ಅಬ್ಬಾಸ್ ಮದನಿ, ಹಾಜಿ ಸೆಯ್ಯಿದ್ ಖುಬೈಬ್ ತಂಙಳ್, ಅಳೇಕಲ ಮಸೀದಿ ಪ್ರ. ಕಾರ್ಯದರ್ಶಿ ಅಶ್ರಫ್ ಯು.ಡಿ., ತೋಟ ಮಸೀದಿ ಪ್ರಧಾನ ಕಾರ್ಯದರ್ಶಿ ತಹ್ಸೀನ್ ತೋಟ, ಮೊಹಲ್ಲಾ ಒಕ್ಕೂಟ ಕೋಶಾಧಿಕಾರಿ ಅಶ್ರಫ್ ಸುಂದರಿಭಾಗ್, ದಾರಂದಬಾಗಿಲು ಮಸೀದಿ ಪ್ರ. ಕಾರ್ಯದರ್ಶಿ ಮನ್ಸೂರ್, ಇಜಾಝ್ ಮದನಿ ನಗರ, ಹೈದರ್ ಮುಕ್ಕಚ್ಚೇರಿ, ತಾಜುಲ್ ಉಲಮಾ ಮದ್ರಸ ಹಳೆಕೋಟೆ ಇದರ ಅಧ್ಯಕ್ಷರಾದ ಯು. ಎಚ್. ಯೂಸುಫ್, ಸೇವಂತಿಗುಡ್ಡೆ ಮದ್ರಸ ಅಧ್ಯಕ್ಷರಾದ ಸಮೀರ್ ತೊಕ್ಕೊಟ್ಟು, ಅಝಾದ್ ನಗರ ಮಸೀದಿ ಕೋಶಾಧಿಕಾರಿ ರಫೀಕ್ ಮತ್ತಿತರು ಉಪಸ್ಥಿತರಿದ್ದರು, ಉಳ್ಳಾಲ ನಗರಸಭಾ ಕೌನ್ಸಿಲರ್ಗಳು ಕಾರ್ಯಕ್ರಮಕ್ಕೆ ಸಹಕರಿಸಿದರು. ಮೊಹಮ್ಮದ್ ತಾಜುದ್ದೀನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಾನ್ಯ ಜಿಲ್ಲಾಧಿಕಾರಿಯವರಿಗೆ ನಿಯೋಗವು ಮನವಿ ಸಲ್ಲಿಸಿತು


Spread the love