ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು  

Spread the love

ವಾಟ್ಸಾಪ್ನಲ್ಲಿ ಯಡ್ಯೂರಪ್ಪ, ಶೋಭಾರ ಅಶ್ಲೀಲ ಚಿತ್ರ ರವಾನೆ; ಕುಂದಾಪುರದ ಮೂರು ಬಿಜೆಪಿ ನಾಯಕರ ವಿರುದ್ದ ದೂರು  

ಕುಂದಾಪುರ: ಬಿಜೆಪಿ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯ ಅಶ್ಲೀಲ ಫೋಟೊಗಳನ್ನು ವಾಟ್ಸ್ಯಾಪ್ ನಲ್ಲಿ ರವಾನೆ ಮಾಡಿರುವ ಕುಂದಾಪುರದ ಮೂವರು ಬಿಜೆಪಿ ಮುಖಂಡರ ವಿರುದ್ದ ಉಡುಪಿ ಸೆನ್ ಅಪರಾಧ ಪೋಲಿಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಭಾರತೀಯ ಜನತಾ ಪಕ್ಷದ ಕುಂದಾಪುರ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಕಾಡೂರು ಸುರೇಶ್ ಶೆಟ್ಟಿ ಅವರು ಬಿಜೆಪಿಯ ಮೂವರು ಮುಖಂಡರುಗಳಾದ ರಾಜೇಶ್ ಕಾವೇರಿ, ಬಿ.ಕಿಶೋರ್ ಕುಮಾರ್ ಮತ್ತು ರಾಜು ಪೂಜಾರಿ ಅವರ ವಿರುದ್ದ ದೂರು ನೀಡಿದ್ದು, ಮೂವರು ಮುಖಂಡರು ನವೆಂಬರ್ 13 ರ ಬಳಿಕ ಬಿ.ಜೆ.ಪಿ. ಕುಂದಾಪುರ ಎನ್ನುವ ಅನಧಿಕೃತ ವಾಟ್ಸ್ ಅಪ್ ಗ್ರೂಪ್‌‌ನಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ   ಬಿ.ಎಸ್. ಯಡಿಯೂರಪ್ಪ ಮತ್ತು ಚಿಕ್ಕಮಂಗಳೂರು ಕ್ಷೇತ್ರದ ಸಂಸದೆ   ಶೋಭಾ ಕರಾಂದ್ಲಾಜೆ ರವರ ಬಗ್ಗೆ ಅವಹೇಳನಕರವಾಗಿ ವಾಟ್ಸ್ಅಪ್ ನಲ್ಲಿ ಬರಹಗಳನ್ನು ಪೋಸ್ಟ್ ಮಾಡಿದ್ದು, ಅಲ್ಲದೇ ಅವರಿಬ್ಬರ ಫೋಟೋಗಳನ್ನು ಎಡಿಟ್ ಮಾಡಿ ಅಶ್ಲೀಲವಾಗಿ ವಾಟ್ಸ್ಅಪ್ ಮೂಲಕ ಕಳುಹಿಸಿ, ಮಾನ ಹಾನಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸುರೇಶ್ ಶೆಟ್ಟಿ ದೂರಿನಂತೆ ಉಡುಪಿ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 34/2017 ಕಲಂ:67 ಐ.ಟಿ.ಆಕ್ಟ್ ಮತ್ತು 507 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

 


Spread the love