ವಾರೀಸು ಸೊತ್ತಲ್ಲಿ ಮಹಿಳೆಯರಿಗೂ ಅವಕಾಶವಿದೆ: ಮೌಲಾನ ವಹೀದುದ್ದೀನ್ ಖಾನ್ ಉಮರಿ

Spread the love

ಮಂಗಳೂರು: ಕುಟುಂಬದ ವಾರೀಸಿನ ಸೊತ್ತಲ್ಲಿ ಕೇವಲ ಪುರುಷರಿಗೆ ಮಾತ್ರ ಹಕ್ಕಿಲ್ಲ. ಮಹಿಳೆಯರಿಗೂ ಹಕ್ಕನ್ನು ನೀಡಿ, ಅಲ್ಲಾಹನು ಕುರ್ ಆನಿನಲ್ಲಿ ಸ್ಪಷ್ಟವಾದ ಆದೇಶ ನೀಡಲಾಗಿದ್ದರೂ ಈ ಬಗ್ಗೆ ಮುಸ್ಲಿಂ ಸಮುದಾಯದಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜಾಮಿಯಾ ತಯ್ಯಿಬಾ ಬೆಂಗಳೂರು ಪ್ರಾಂಶುಪಾಲರಾದ ಮೌಲಾನ ವಹೀದುದ್ದೀನ್ ಖಾನ್ ಉಮರಿ ಹೇಳೀದರು.

jameth-e-islam-mangalore

ಅವರು ಇಂದು ನಗರದ ಪುರಭವನದಲ್ಲಿ ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಘಟಕವು ಆಯೋಜಿಸಿದ್ದ `ವಾರೀಸು ಹಕ್ಕು ಜಾಗೃತಿ ಅಭಿಯಾನ’ ದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ವಾರೀಸು ಎಂಬುದು ಮಾನವ ಜೀವನದ ಅನಿವಾರ್ಯ ಅಗತ್ಯವಾಗಿದೆ. ಸಂಪತ್ತು ಎಂಬುವುದು ಒಂದೇ ಕಡೆ ಜಮೆಯಾಗಿರಬಾರದು ಎಂದು ಅಲ್ಲಾಹನು ಹೇಳಿರುತ್ತಾನೆ. ವಾರೀಸು ಸೊತ್ತಿನಲ್ಲಿ ಪುರುಷರು ತಮ್ಮ ಪ್ರಾಬಲ್ಯ ತೋರುತ್ತಿರುವುದುರಿಂದ ಮಹಿಳೆಯರು ಇದರಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಪುರುಷನಿಗೆ ನೀಡಿದ ಪಾಲಿನ ಅರ್ಧದಷ್ಟು ಮಹಿಳೆಯರಿಗೂ ನೀಡಬೇಕಿದೆ. ಆದರೆ ಈ ವಿಷಯದಲ್ಲಿ ಸಮಾಜದಲ್ಲಿ ಹೆಚ್ಚು ಜಾಗೃತಿ ಇಲ್ಲದ ಪರಿಣಾಮವಾಗಿ ವಾರೀಸು ಸೊತ್ತಿನ ವಿತರಣೆಯಲ್ಲಿ ಹೆಚ್ಚಿನವರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಹೆಚ್ಚು ಮುತುವಜರ್ಿ ವಹಿಸಿ, ಅಲ್ಲಾಹನು ಕಲ್ಪಿಸಿದ ನಿಯಮದ ಆಧಾರದಲ್ಲಿ ಪಾಲು ಮಾಡಬೇಕಿದೆ ಎಂದು ಅವರು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನ್ನಾಡಿದ ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಅಧ್ಯಕ್ಷ ಮುಹಮ್ಮದ್ ಕುಂಞ, ಇಸ್ಲಾಮಿನಲ್ಲಿ ಆರಾಧನೆಗಳಿಗೆ ಇರುವಷ್ಟು ಮಹತ್ವವು ಆಥರ್ಿಕ ವಿಷಯಗಳಿಗೂ ನೀಡಲಾಗಿದೆ. ಆದರೆ ನಮ್ಮ ಸಮಾಜದಲ್ಲಿ ಆರಾಧನೆಗಳ ವಿಷಯದಲ್ಲಿ ನಡೆಸುವಷ್ಟು ಚಚರ್ೆ ಆಥರ್ಿಕ ವಿಷಯಗಳಲ್ಲಿ ಆಗುತ್ತಿಲ್ಲವೆಂಬುವುದು ದೊಡ್ಡ ದುರಂತ. ಅಜ್ಞಾನ ಕಾಲದಲ್ಲಿ ಸ್ತ್ರೀಯರಿಗೆ ಸೊತ್ತಿನಲ್ಲಿ ಯಾವುದೇ ಪಾಲು ಸಿಗುತ್ತಿರಲಿಲ್ಲ. ಆದರೆ ಕುರ್ ಆನ್ ಅವತೀರ್ಣವಾದ ಬಳಿಕ ವಾರೀಸಿನ ನಿಯಮಗಳ ಬಗ್ಗೆ ಅಲ್ಲಾಹನು ಸ್ಪಷ್ಟವಾಗಿ ಎಲ್ಲವನ್ನೂ ತಿಳಿಸಿದ್ದರೂ ಕೂಡ ಅದನ್ನು ಇಂದು ಸಮುದಾಯದವರು ನಿರ್ಲಕ್ಷಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಪ್ರತಿಯೋರ್ವರಿಗೂ ಅರಿವು ಮೂಡಿಸಿ ಸಾರ್ವತ್ರಿಕಗೊಳಿಸಬೇಕಾದ ಅಗತ್ಯವಿದೆ ಎಂದವರು ಅಭಿಪ್ರಾಯಿಸಿದರು.

ಇದೇ ವೇಳೆ ಕೇರಳದ ‘ಪ್ರಬೋಧನಂ’ ವಾರಪತ್ರಿಕೆಯ ಸಂಪಾದಕರಾದ ಸದ್ರುದ್ದೀನ್ ವಾಝಕ್ಕಾಡ್, ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನ ಯಹ್ಯಾ ತಂಙಳ್ ಮದನಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷರಾದ ಅಥರುಲ್ಲಾ ಶರೀಫ್ ವಹಿಸಿದ್ದರು.

ಸಮಾರಂಭದಲ್ಲಿ ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದಶರ್ಿ ಅಶ್ರಫ್ ಕುದ್ರೋಳಿ, ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಂ ಉಪ್ಪಿನಂಗಡಿ, ದ.ಕ.ಜಿಲ್ಲಾಧ್ಯಕ್ಷರಾದ ಇಲ್ಯಾಸ್ ಇಸ್ಮಾಯೀಲ್ ಉಪಸ್ಥಿತರಿದ್ದರು. ಲತೀಫ್ ಆಲಿಯಾ ಕಿರಾಅತ್ ಪಠಿಸಿದರೆ, ಆಸಿಫ್ ಬಜಾಲ್ ನಿರೂಪಿಸಿದರು.


Spread the love