ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಆರೋಪಿಯ ಸೆರೆ

Spread the love

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ, ಆರೋಪಿಯ ಸೆರೆ

ಮಂಗಳೂರು: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನನ್ನು ಅಶೋಕ್ ಆಚಾರ್ಯ ಎಂದು ಗುರುತಿಸಲಾಗಿದೆ.

ಬಾಲಕಿಯ ಕುಟುಂಬದ ಜಾಗದ ಸಮಸ್ಯೆಯನ್ನು ಸರಿಪಡಿಸಿಕೊಡುವುದಾಗಿ ಭರವಸೆ ನೀಡಿ, ಬಾಲಕಿಯ ಮನೆಯವರೊಂದಿಗೆ ಅನೊನ್ಯತೆಯನ್ನು ಬೆಳೆಸಿಕೊಂಡು ಕಾಲೇಜಿಗೆ ರಜೆ ಇರುವ ದಿನದಲ್ಲಿ ಒದಿಕೊಳ್ಳಲು ಕಚೆರಿಗೆ ಬರುವಂತೆಯೂ ತಾನು ಕಲಿಯಲು ನೆರವಾಗುವುದಾಗಿಯೂ ಹೇಳಿ ಬಾಲಕಿಯನ್ನುತನ್ನ ಕಚೇರಿಗೆ ಕರೆಸಿಕೊಂಡು ಅಲ್ಲಿ ಈತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಬಾಲಕಿ ನೀಡಿದ ದೂರಿನಂತೆ ಆರೊಪಿ ವಿರುದ್ದ ಪೊಸ್ಕೋ ಪ್ರಕರಣದ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


Spread the love