ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ

Spread the love

ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಮೇಲೆ ಮಾರಾಣಾಂತಿಕ ಹಲ್ಲೆ

ತುಮಕೂರು: ಎರಡು ಬೈಕುಗಳಲ್ಲಿ ಬಂದ ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ದಲಿತ ಯುವಕನ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ತುರವೆಕೆರೆ ತಾಲೂಕಿನ ಮಾಯಸಂದ್ರ ಬಳಿ ಬುಧವಾರ ರಾತ್ರಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಮಾಯಸಂದ್ರ ನಿವಾಸಿ ಸಚಿನ್ (30) ಎಂದು ಗುರುತಿಸಲಾಗಿದೆ.

ದಲಿತ ಯುವಕ ಸಚಿನ್ ಕಳೆದ ರಾತ್ರಿ ತನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಎರಡು ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ವಿಳಾಸ ಕೇಳುವ ನೆಪದಲ್ಲಿ ಹಲ್ಲೆ ನಡೆಸಿದ್ದು, ಕೆಎಸ್ ಆರ್ ಟಿ ಸಿ ಬಸ್ಸೊಂದು ಬಂದದ್ದನ್ನು ಗಮನಿಸಿ ಬಿಟ್ಟು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳಿಂದ ಮಾರಾಣಾಂತಿಕ ಹಲ್ಲೆಯಿಂದಾಗಿ ಸಚಿನ್ ಗಂಭೀರ ಗಾಯಗೊಂಡಿದ್ದು, ತುರವೆಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತುರುವೆಕೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love