ವಿಶ್ವಕರ್ಮ ಯುವ ಮಿಲನ್ ವತಿಯಿಂದ ಪ್ರತಿಭಾ ಪುರಸ್ಕಾರ

Spread the love

ವಿಶ್ವಕರ್ಮ ಯುವ ಮಿಲನ್  ವತಿಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ವಿಶ್ವಕರ್ಮ ಯುವ ಮಿಲನ್ ರಾಜ್ಯ ಸಂಘಟನೆ ಮಂಗಳೂರು  ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ವಿಶ್ವಕರ್ಮ ಯುವ ಮಿಲನ್ ರಾಜ್ಯಾಧ್ಯಕ್ಷರಾದ   ವಿಕ್ರಂ ಐ ಆಚಾರ್ಯರವರು ಹಾಗೂ ಸಂಘಟನೆಯ ಪದಾಧಿಕಾರಿಗಳು ಸೇರಿ ಇದೆ ಪ್ರಥಮಬಾರಿಗೆ ನೂತನವಾಗಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿರುದ್ದಿ ನಿಗಮಕ್ಕೆ ಆಯ್ಕೆಯಾಗಿರುವ  ಎನ್ .ನಂದಕುಮಾರ್ ರವನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ.  ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು  ಮಂಗಳೂರಿನ  ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಗುರು ಮಠದ ಸಭಾ ಭವನದಲ್ಲಿ ನೆರವೇರಿಸಲಾಯಿತು .ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ    ಎನ್ ನಂದಕುಮಾರ್ ರವರು ತಮ್ಮ ಅಧಿಕಾರದ ಅವಧಿಯಲ್ಲಿ ಸರ್ಕಾರದಿಂದ ಬರುವ ಎರಡನೇ ತಿಂಗಳಿನ ಗೌರವ ಧನವನ್ನು ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ನೀಡಿ ,ತಮ್ಮ ನಿಗಮದಿಂದ ನೆನಪಿನ ಕಾಣಿಕೆಯನ್ನು ನೀಡಿ, ವಿಶ್ವಕರ್ಮ ಯುವ ಮಿಲನ್ ,ರಾಜ್ಯ ಸಂಘಟನೆಯ ಸಹಕಾರದೊಂದಿಗೆ ಹಾಗು ಮಂಗಳೂರಿನ ವಿಶ್ವಕರ್ಮ ಸಮಾಜದ ಸಹಕಾರಗಳೊಂದಿಗೆ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಂಗಳೂರಿನ ಪ್ರತಿಭಾವಂತ ಕ್ರೀಡಾಪಟು ಪ್ರದೀಪ್ ಆಚಾರ್ಯ ರವನ್ನು ಗೌರವ ಧನ ಮತ್ತು ನೆನಪಿನ ಕಾಣಿಕೆಯನ್ನು ನೀಡಿ  ಸನ್ಮಾನಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಯುವ ಮಿಲನ್ (ರೀ) ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ವಿಕ್ರಂ ಐ .ಆಚಾರ್ಯ ರವರು ,ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರಜ್ ರವರು ,ಶ್ರೀ ಕಾಳಿಕಾಂಬಾ  ವಿನಾಯಕ ದೇವಸ್ಥಾನದ ಮೊಕ್ತೇಸರರು ನಾಗರಾಜಾಚಾರ್ ರವರು , ಮಂಗಳೂರು ತಾಲೂಕಿನ ಅಧ್ಯಕ್ಷರಾದ ಅರುಣ್ ಆಚಾರ್ಯ ಪಂಜಿಕಲ್  ಹಾಗು ನೂತನವಾಗಿ ದಕ್ಷಿಣ ಕನ್ನಡ  ಜಿಲ್ಲೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಹರೀಶ್ ಆಚಾರ್ಯ ಪುತ್ತೂರು ಉಪಸ್ಥಿತರಿದ್ದರು.


Spread the love