`ವಿಶ್ವ ಕನ್ನಡೋತ್ಸವ’ ಸಾಂಸ್ಕೃತಿಕ ಸಮಾಗಮಕ್ಕೆ ದಿನಗಣನೆ

Spread the love

ಬೆಂಗಳೂರು:`ನಾವಿಕ’ ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ `ನಾವಿಕೋತ್ಸವ’ಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ಮತ್ತು ಸಮಾಗಮದ ಸಂಕೇತವಾಗಿರುವ ನಾವಿಕೋತ್ಸವ ಈ ಬಾರಿ ಜುಲೈನಲ್ಲಿ ನಡೆಯಲಿದೆ..
ಈ ಸಾಂಸ್ಕೃತಿಕ ಉತ್ಸವಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ರೇಣುಕಾ ರಾಮಪ್ಪ ಇದರ ರೂಪುರೇಷೆಗಳನ್ನು ರೂಪಿಸಿದ್ದಾರೆ. ಖಜಾಂಚಿಯಾದ ವೀಣಾರಾಜ್ ಅವರು ಸಹಕರಿಸುತ್ತಿದ್ದಾರೆ. `ನಾವಿಕೋತ್ಸವ-2016′ ಸಮಿತಿಯ ಸಂಚಾಲಕ ಯಶವಂತ ಸರದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

Photo

ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಪ್ರಾಧಿಕಾರ ಸಹಯೋಗದಲ್ಲಿ ನಾವಿಕ (ನಾರ್ತ್ ಅಮೆರಿಕ ವಿಶ್ವಕನ್ನಡ ಆಗರ) 2 ದಿನಗಳ ಕಾಲ `ನಾವಿಕೋತ್ಸವ’ವನ್ನು ಆಯೋಜಿಸಿದೆ.
ಅಮೆರಿಕಾದ ನಾವಿಕ ಸಂಸ್ಥೆ 2 ವರ್ಷಗಳಿಗೊಮ್ಮೆ ನಡೆಸುವ ಈ ಸಾಂಸ್ಕೃತಿಕ ಉತ್ಸವ ಈ ಬಾರಿಯೂ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 16 ಮತ್ತು 17 ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ಸಾಂಸ್ಕೃತಿಕ ಉತ್ಸವಕ್ಕೆ ವಿವಿಧ ದೇಶಗಳ 90ಕ್ಕೂ ಹೆಚ್ಚು ಕನ್ನಡದ ಸಂಘ-ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. 2000ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರು ನಾವಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ `ನಾವಿಕೋತ್ಸವ’ದಲ್ಲಿ ಕನ್ನಡ ಸಾಹಿತ್ಯಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಾಧನೆ ನಡೆಯಲಿದ್ದು, ಖ್ಯಾತ ಸಾಹಿತಿಗಳು, ಕಲಾವಿದರು, ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಭಾಗವಹಿಸಲಿದ್ದಾರೆ. ಎರಡೂ ದಿನಗಳ ಕಾಲ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ಎಡೆಬಿಡದೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಈ ಹಿಂದೆ ಅಮೆರಿಕನ್ನಡೋತ್ಸವ ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದ ಸಾಂಸ್ಕೃತಿಕ ಉತ್ಸವವನ್ನು ಈ ಬಾರಿ `ನಾವಿಕೋತ್ಸವ’ ಎಂಬ ಹೆಸರಿನಲ್ಲಿ ನಡೆಸಲು ನಾವಿಕ ಸಂಘಟನೆ ನಿರ್ಧರಿಸಿದೆ. ಸಹ ಸಂಚಾಲಕರಾದ ಸಂಜಯ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.


Spread the love