ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ವಿತರಣ ಸಮಾರಂಭ-2018

Spread the love

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ವಿತರಣ ಸಮಾರಂಭ-2018

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ವೇತನ ನಿಧಿ ವತಿಯಿಂದ ಚಪ್ಟೇಕಾರ ಸಾರಸ್ವತ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶ್ರೇಣಿಯಲ್ಲಿ ಅಧ್ಯಯನ ಮಾಡುವ ಪಿಯುಸಿ, ಡಿಗ್ರಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ರೂ. 4.00 ಲಕ್ಷ ಮೊತ್ತದ ವಿದ್ಯಾರ್ಥಿವೇತನ ವಿತರಣ ಸಮಾರಂಭವು ದಿ. 02-10-2018 ರಂದು ಮಂಗಳೂರು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಚಪ್ಟೇಕಾರ ಸಾರಸ್ವತ ಸಮಾಜದ ಅಧ್ಯಕ್ಷ ಪ್ರವೀಣ ಕುಮಾರ ನಾಯಕ, ಉಪಾಧ್ಯಕ್ಷ ಪಿ. ಧರ್ಮೇಶ ನಾಯಕ, ಕಾರ್ಯದರ್ಶಿ ಮುರಳಿ ಮನೋಹರ ನಾಯಕ, ಖಜಾಂಚಿ ಸತ್ಯ ಪ್ರಶಾಂತ ನಾಯಕ, ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮಿ ನಾಯಕ ಹಾಗೂ ವಿದ್ಯಾರ್ಥಿ ವೇತನದ ಉಸ್ತುವಾರಿ ಸುರೇಖಾ ನಾಯಕ ಮತ್ತು ಮಾಜಿ ಅಧ್ಯಕ್ಷ ರಮಾನಂದ ರಾವ್ ಅವರು ವೇದಿಕೆಯಲ್ಲಿ ಉಪಸ್ಥತರಿದ್ದರು.

ಚಪ್ಟೇಕಾರ ಸಾರಸ್ವತ ಸಮಾಜದ 76 ವಿದ್ಯಾರ್ಥಿಗಳು ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ಫಲಾನುಭವ ಪಡೆದರು. ಪ್ರೀತಮ್ ನಾಯಕ ರವರು ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಣೆ ಮಾಡಿದರು.


Spread the love