ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು

Spread the love

ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ವಿಷ ಸೇವಿಸಿದ್ದ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಕಾವ್ಯಾ (20) ಮೃತ ವಿದ್ಯಾರ್ಥಿನಿ. ಈಕೆ ಪುಂಜಾಲಕಟ್ಟೆ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಎರಡು ದಿನಗಳ ಹಿಂದೆ ಕಾವ್ಯಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾಳೆ.

ಮೃತ ಕಾವ್ಯಾ ಬೆಳ್ತಂಗಡಿ ತಾಲೂಕಿನ ಹುಣ್ಸೇಕಟ್ಟೆ ನಿವಾಸಿಯಾಗಿದ್ದು, ಸಾರ್ವಜನಿಕವಾಗಿ ವ್ಯಕ್ತಿಯೊಬ್ಬನಿಂದ ಅವಮಾನಿತಳಾಗಿದ್ದಳು. ಅವಮಾನ ಮಾಡಿದ್ದ ವ್ಯಕ್ತಿಯನ್ನು ಬಾಬು ಗೌಡ ಎಂದು ಗುರುತಿಸಲಾಗಿದೆ. ಬಳಿಕ ಅವಮಾನದಿಂದ ನೊಂದು ಕಾವ್ಯಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಮಾಹಿತಿ ತಿಳಿದು ಬಂದಿದೆ.

ಮೃತ ಕಾವ್ಯಾ ಎರಡು ದಿನದ ಹಿಂದೆ ಸ್ಕೂಟಿಯಲ್ಲಿ ಹೋಗುವಾಗ ಅಪಘಾತವಾಗಿದ್ದು, ಈ ವೇಳೆ ಅವಳಿಗೆ ಅವಮಾನ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿ ತಿಳಿದು ಬಂದಿಲ್ಲ.
ಸದ್ಯಕ್ಕೆ ಬಾಬು ಗೌಡ ವಿರುದ್ಧ ಕಾವ್ಯಾ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಮಂಗಳೂರಿನ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love