ವಿಹಾರಕ್ಕೆ ಬಂದ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ; ಮೂವರ ಬಂಧನ

Spread the love

ವಿಹಾರಕ್ಕೆ ಬಂದ ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ; ಮೂವರ ಬಂಧನ

ಮಂಗಳೂರು: ಪಿಲಿಕುಳ ನಿಸರ್ಗಧಾಮದ ಮಾನಸ ವಾಟರ್ ಪಾರ್ಕಿನಲ್ಲಿ ವಿಹಾರಕ್ಕೆ ಬಂದ ಕಾಲೇಜೊಂದರ ವಿದ್ಯಾರ್ಥಿಗಳಿಗೆ ಹಿಂದೂ ಸಂಘಟನೆಯ ಕಾರ್ಯಕರ್ತರು ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸಂಪತ್ ಶೆಟ್ಟಿ, ವರದ ಮತ್ತು ದಿನೇಶ್ ಎಂದು ತಿಳಿದುಬಂದಿದೆ.

ಜನವರಿ 2 ರಂದು ಕಾಲೇಜೊಂದರ ವಿದ್ಯಾರ್ಥಿಗಳ ತಂಡ ನಗರದ ಹೊರವಲಯದಲ್ಲಿರುವ ಮಾನಸ ವಾಟರ್ ಪಾರ್ಕಿಗೆ ವಿಹಾರಕ್ಕೆಂದು ಬಂದ ವೇಳೆ ಹಿಂದೂ ಸಂಘಟನೆಗೆ ಸೇರಿದವರೆನ್ನಲಾದ ಮೂರು ಮಂದಿ ಯುವಕರು ವಿದ್ಯಾರ್ಥಿಗಳನ್ನು ಸುತ್ತುವರಿದು ಹಲ್ಲೆ ನಡೆಸಿದ್ದರು. ಪೋಲಿಸರ ಸಮ್ಮುಖದಲ್ಲೇ ಒರ್ವ ಯುವಕ ಯುವತಿಯ ಮೇಲೆ ಹಲ್ಲೆ ನಡೆಸಿದ್ದು, ಎಮ್ ಸೆರಾವೊ ಎಂಬವರು ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದು ಈ ಸಂಬಂಧ ಪೋಲಿಸರು ಯುವಕರನ್ನು ಬಂಧಿಸಿದ್ದಾರೆ.

ಬಂಧಿತ ಯುವಕರ ಮೇಲೆ ಸೆ. 341, 342, 324, 506, 509, 355, 153(ಎ), 74(1) ಅನ್ವಯ ಕಾವೂರು ಪೋಲಿಸರು ಪ್ರಕರಣ ದಾಖಲಿಸದ್ದಾರೆ.


Spread the love