ವೀರ ಯೋಧರಿಂದ ದೇಶ ಸುರಕ್ಷಿತ: ನಳಿನ್ ಕುಮಾರ್ ಕಟೀಲ್

ವೀರ ಯೋಧರಿಂದ ದೇಶ ಸುರಕ್ಷಿತ: ನಳಿನ್ ಕುಮಾರ್ ಕಟೀಲ್

ಮಂಗಳೂರು : ಭಾರತದ ವೀರಯೋಧರು ಪಾಕ್ ಪ್ರೇರಿತ ಭಯೋತ್ಪಾದಕರ ನೆಲೆಯನ್ನು ದ್ವಂಸ ಮಾಡುವ ಮೂಲಕ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳೀದ್ದಾರೆ

 ವೈರಿಗಳನ್ನು ಸದೆ ಬಡಿಯಲು ಭಾರತದ ಸೇನೆ ಸಮರ್ಥವಾಗಿದೆ ಎನ್ನುವ ಸಂದೇಶವನ್ನು ಈ ದಾಳಿಯಿಂದ ಜಗತ್ತಿಗೆ ಸಾರಲಾಗಿದೆ. ನಮ್ಮ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ನುಡಿದಂತೆ ನಡೆದಿದ್ದಾರೆ. ಕಠಿಣ ಸವಾಲುಗಳನ್ನು ದಿಟ್ಟವಾಗಿ ಎದುರಿಸಬಲ್ಲ ಸಮರ್ಥ ಪ್ರಧಾನಿ ನರೇಂದ್ರ ಮೋದಿ ಹಾಗೂ ವೀರ ಯೋಧರಿಂದ ದೇಶ ಸುರಕ್ಷಿತವಾಗಿದೆ. ದೇಶದೊಳಗಿದ್ದು ಪಾಕ್ ಪರ ಮೃದು ಧೋರಣೆ ಹೊಂದಿರುವ ಪ್ರಗತಿಪರರಿಗೆ ಸೂಕ್ತ ಪಾಠ ಕಲಿಸಲು ಎಲ್ಲ ದೇಶಪ್ರೇಮಿಗಳು ಒಂದಾಗಬೇಕು. ತನ್ಮೂಲಕ ಭಾರತೀಯ ಸೇನೆಗೆ ಇನ್ನಷ್ಟು ಬಲ ತುಂಬಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.