ಶಂಕರನಾರಾಯಣ ಪೊಲೀಸ್ ಸಿಬಂದಿಯ ಎರಡನೇ ಕೊರೋನಾ ಪರೀಕ್ಷಾ ವರದಿ ನೆಗೆಟಿವ್

Spread the love

ಶಂಕರನಾರಾಯಣ ಪೊಲೀಸ್ ಸಿಬಂದಿಯ ಎರಡನೇ ಕೊರೋನಾ ಪರೀಕ್ಷಾ ವರದಿ ನೆಗೆಟಿವ್

ಕುಂದಾಪುರ: ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬಂದಿಯ ಎರಡನೇ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು ಠಾಣೆಯ ಸಿಬಂದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬಂದಿಯೋರ್ವರಿಗೆ ಮೊದಲ ವರದಿಯಲ್ಲಿ ಪಾಸಿಟಿವ್ ಎಂಬುದಾಗಿ ಬಂದಿದ್ದು, ಆ ಸಿಬಂದಿ ಚೆಕ್ ಪೋಸ್ಟ್ ಅಥವಾ ಹೊರಗಡೆ ಕರ್ತವ್ಯ ನಿರ್ವಹಿಸದ ಹಿನ್ನಲೆಯಲ್ಲಿ ಸಂಶಯಾಸ್ಪದ ಪ್ರಕರಣದ ಅಡಿಯಲ್ಲಿ ಮತ್ತೊಮ್ಮೆ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.

ಇದೀಗ ಅವರ ಗಂಟಲ ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು 14 ದಿನ ಮನೆಯಲ್ಲಿ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದ್ದು ಬುಧವಾರದಿಂದ ಕಾರ್ಯಾರಂಭ ಮಾಡಲಿದೆ.


Spread the love