ಶನಿವಾರ ಜಿಲ್ಲಾ ಎಸ್ಪಿಯವರಿಗೆ ಫೋನ್ ಮಾಡಿ ; ಸಮಸ್ಯೆ, ಅಕ್ರಮ ಚಟುವಟಿಕೆ ಮಾಹಿತಿ ನೀಡಿ

Spread the love

ಶನಿವಾರ ಜಿಲ್ಲಾ ಎಸ್ಪಿಯವರಿಗೆ ಫೋನ್ ಮಾಡಿ ; ಸಮಸ್ಯೆ, ಅಕ್ರಮ ಚಟುವಟಿಕೆ ಮಾಹಿತಿ ನೀಡಿ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು, ಜಿಲ್ಲೆಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಚಾರ ವಿನಿಮಯ ಮಾಡಿಕೊಳ್ಳುವ  ಉದ್ದೇಶದೊಂದಿಗೆ,   ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಸಪ್ಟೆಂಬರ್ 2 ರಂದು ಮೂರನೇ  ನೇರ ಫೋನ್ – ಇನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತಾರೆ. ಹಾಗೂ ನೇರ ಫೋನ್ – ಇನ್ ಕಾರ್ಯಕ್ರಮವನ್ನು ಪ್ರತಿ ಶನಿವಾರ ನಡೆಸಲು ಉದ್ದೇಶಿಸಲಾಗಿರುತ್ತದೆ.

ಉಡುಪಿ ಜಿಲ್ಲಾ ಸಾರ್ವಜನಿಕರು ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಕರೆ ಮಾಡಿ, ಉಡುಪಿ ಜಿಲ್ಲಾ ಪೊಲೀಸರು ಜನಸ್ನೇಹಿ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಏನಾದರೂ ಸಲಹೆ/ಸೂಚನೆಗಳು, ಹಿಂದಿನ ಅರ್ಜಿ ಪ್ರಕರಣಗಳ ಕುರಿತಾಗಿ ಮಾಹಿತಿ, ವಾಸಿಸುವ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳೇನಾದರೂ ನಡೆಯುತ್ತಿದ್ದಲ್ಲಿ, ಅದನ್ನು ತಡೆಗಟ್ಟಲು ಮಾಹಿತಿ ಅಥವಾ ಪೊಲೀಸರ ಬಗ್ಗೆ ಮೆಚ್ಚುಗೆ ವಿಷಯ ಮಾತನಾಡಬೇಕೆಂದಿದ್ದಲ್ಲಿ ಅಥವಾ ಅವರಿಂದ ಏನಾದರೂ ತಪ್ಪಾಗುತ್ತಿದ್ದಲ್ಲಿ ಮಾಹಿತಿಯನ್ನು ನೀಡಬಹುದಾಗಿರುತ್ತದೆ.
ನೇರ ಫೋನ್-ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದು.

 ಫೋನ್ ಮಾಡಬೇಕಾದ ಸಮಯ : ಬೆಳಗ್ಗೆ 10:00 ಗಂಟೆಯಿಂದ 11:00 ಗಂಟೆಯವರೆಗೆ

ಸಂಪರ್ಕಿಸುವ ಸ್ಥಿರ ದೂರವಾಣಿ ಸಂಖ್ಯೆ: 0820 – 2534777


Spread the love