ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾ ತೊಕ್ಕೊಟ್ಟುವಿನಲ್ಲ ಪಲ್ಟಿ ; ತಪ್ಪಿದ ಭಾರಿ ಅನಾಹುತ

Spread the love

ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾ ತೊಕ್ಕೊಟ್ಟುವಿನಲ್ಲ ಪಲ್ಟಿ ; ತಪ್ಪಿದ ಭಾರಿ ಅನಾಹುತ

ಮಂಗಳೂರು: ಮಿತಿಮೀರಿ ಶಾಲಾ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ರಿಕ್ಷವೊಂದು ತನ್ನ ಬ್ರೇಕ್ ಫೈಲ್ ಆಗಿ ಹತ್ತಿರದ ಅಂಗಡಿಗೆ ಡಿಕ್ಕಿ ಹೊಡೆದ ಘಟನೆ ತೊಕ್ಕೊಟ್ಟು ಒವರ್ ಬ್ರಿಡ್ಜ್ ಬಳಿ ಸೋಮವಾರ ನಡೆದಿದೆ.

ಘಟನೆಯಿಂದ ಚಾಲಕ ಹಾಗೂ ಒರ್ವ ವಿದ್ಯಾರ್ಥಿಯು ಗಾಯಗೊಂಡಿದ್ದು, ಇತರ ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.

ಪ್ರತಿನಿತ್ಯ ಉಳ್ಳಾಲ ತೊಕ್ಕೊಟ್ಟು ಪ್ರದೇಶದಲ್ಲಿ ಅನೇಕ ರಿಕ್ಷಾಚಾಲಕರು ಶಾಲಾ ವಿದ್ಯಾರ್ಥಿಗಳನ್ನು ಮಿತಿ ಮೀರಿದ ಸಂಖ್ಯೆಯಲ್ಲಿ ಕುರಿಗಳಂತೆ ತುಂಬಿಕೊಂಡು ಟ್ರಿಪ್ ಹೊಡೆಯುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


Spread the love