ಶಿರ್ವದಲ್ಲಿ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 8ನೇ ಶಾಖೆಗೆ ಚಾಲನೆ

Spread the love

ಶಿರ್ವದಲ್ಲಿ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 8ನೇ ಶಾಖೆಗೆ ಚಾಲನೆ

ಕುಂದಾಪುರ: ಕುಂದಾಪುರದಲ್ಲಿ ಜನ್ಮ ತಾಳಿದ ಸಹಕಾರ ಸಂಸ್ಥೆ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಎಂಟನೇ ಶಾಖೆಯು ಶಿರ್ವದ ಬಹ್ರೇನ್ ಟವರ್ ಇಲ್ಲಿ ಸೋಮವಾರ ಉದ್ಘಾಟನೆಗೊಂಡಿತು.

ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಜಾನ್ಸನ್ ಡಿ’ಆಲ್ಮೇಡಾ ಅವರು ನೂತನ ಶಾಖೆಯನ್ನು ರಿಬ್ಬನ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಶಿರ್ವ ಆರೋಗ್ಯ ಮಾತೆಯ ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ ನೂತನ ಶಾಖೆಯ ಆಶೀರ್ವಚನ ನೆರವೇರಿಸಿದರು. ಸಂಸ್ಥೆಯ ಹಿರಿಯ ಸದಸ್ಯ ಫಿಲಿಪ್ ಡಿಕೋಸ್ತಾ ಅವರು ಭದ್ರತಾ ಕೊಠಡಿಯ ಉದ್ಘಾಟನೆ ನೆರವೇರಿಸಿದರು.

ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾದ ಜಾನ್ಸನ್ ಡಿ’ಆಲ್ಮೇಡಾ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ–ಅಪರೇಟಿವ್ ಸೊಸೈಟಿಗೆ ರಾಜ್ಯ ಮಟ್ಟದಲ್ಲಿ 2019 ರ ‘ಉತ್ತಮ ಸಹಕಾರ ಸಂಘ ಪ್ರಶಸ್ತಿ’ ಯನ್ನು ಪಡೆದುಕೊಂಡಿದೆ. ಪಡೆದುಕೊಂಡ ಸಂಸ್ಥೆಯಾಗಿದೆ. ದೇಶದಲ್ಲಿ ಲಾಖ್ ಡೌನ್ ಇರುವ ಕಾರಣ ಉದ್ಘಾಟನೆಯನ್ನು ಸರಳವಾಗಿ ನೆರವೇರಿಸಿದ್ದು ಇದರ ಲಾಭವನ್ನು ಶಿರ್ವಾ ಆಸು ಪಾಸಿನ ಜನ ಪಡೆದು ಸಂಸ್ಥೆಗೆ ಸಹಕಾರ ಪ್ರೋತ್ಸಾಹ ನೀಡಿ ಸಂಸ್ಥೆ ಇನ್ನೂ ಹೆಚ್ಚಿನ ಯಶಸು ಪಡೆಯಲು ಕಾರಣಾಗಬೇಕು ಎಂದು ವಿನಂತಿಸಿದರು.

ಈ ವೇಳೆ ಸಂಸ್ಥೆಯ ಉಪಾಧ್ಯಕ್ಷ ಕಿರಣ್ ಮೆಲ್ವಿನ್ ಲೋಬೊ, ಶಿರ್ವ ಶಾಖೆಯ ನೂತನ ಸಭಾಪತಿ ವಿಲ್ಸನ್ ಡಿ’ಸೋಜಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ, ನಿರ್ದೇಶಕರಾದ ಜೆಕಬ್ ಡಿಸೋಜಾ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಾಯಸ್, ಓಝ್ಲಿನ್ ರೆಬೆಲ್ಲೊ, ಶಾಂತಿ ಆರ್ ಕರ್ವಾಲ್ಲೊ, ಡಯಾನಾ ಡಿ’ಆಲ್ಮೇಡಾ, ಶಾಂತಿ ಡಾಯಸ್, ಡೆರಿಕ್ ಡಿ’ಸೋಜಾ, ಪ್ರಕಾಶ್ ಲೋಬೊ, ವಿಲ್ಫ್ರೇಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ತಿಯೋದರ್ ಒಲಿವೇರಾ, ಜಿಪಂ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಮಾಜಿ ಜಿಪ ಅಧ್ಯಕ್ಷರಾದ ಜೆರಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ತನ್ನ ಪ್ರಧಾನ ಕಚೇರಿಯನ್ನು ಕುಂದಾಪುರದಲ್ಲಿ ಹೊಂದಿದ್ದು ಕುಂದಾಪುರ, ಬೈಂದೂರು, ಪಡುಕೋಣೆ, ಬಸ್ರೂರು, ಪಿಯುಸ್ ನಗರ್, ಗಂಗೊಳ್ಳಿ, ಕಲ್ಯಾಣಪುರ-ಸಂತೆಕಟ್ಟೆ ಇಲ್ಲಿ ಶಾಖೆಗಳನ್ನು ಹೊಂದಿದ್ದು ಎಂಟನೇ ಶಾಖೆ ಶಿರ್ವದಲ್ಲಿ ಆರಂಭಗೊಂಡಿದೆ.

ಸೊಸೈಟಿಯಲ್ಲಿ ಉಳಿತಾಯ ಖಾತೆ, ಚಾಲ್ತಿ ಖಾತೆ, ರೋಜರಿ ನಗದು ಪತ್ರ, ನಿರಖು ಠೇವಣಿ, ಆವರ್ತನ ಠೇವಣಿ ಸೇರಿದಂತೆ ಮನೆ ಸಾಲ, ವ್ಯಾಪಾರ ಸಾಲ, ವಾಹನ ಸಾಲ, ಉಚಾಪತಿ ಸಾಲ ಆಭರಣ ಈಡಿನ ಸಾಲ ಯೋಜನೆ ಅವಕಾಶ ಪಡೆಯುವಂತೆ ವಿನಂತಿಸಲಾಗಿದೆ


Spread the love