ಶಿರ್ವ – ಕಳತ್ತೂರಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

Spread the love

ಶಿರ್ವ – ಕಳತ್ತೂರಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ

ಉಡುಪಿ: ಶಿರ್ವ ಠಾಣಾ ಸರಹದ್ದಿನ ಕಳತ್ತೂರು ಗ್ರಾಮದ ಚಂದ್ರನಗರ ಕ್ರಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ಬಳಿಯಿರುವ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಸುಮಾರು 60 ರಿಂದ 70 ವರ್ಷದ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಶನಿವಾರ ರಾತ್ರಿ ಪತ್ತೆಯಾಗಿದೆ.

ಮೃತದೇಹದ ಹೊಟ್ಟೆಯಲ್ಲಿ ಹಳೆಗಾಯದ ಗುರುತು ಇದ್ದು, ಎತ್ತರ -ಸುಮಾರು 5 ಅಡಿ 5 ಇಂಚು , ಗೋಧಿ ಮೈಬಣ್ಣ ನೆರೆತ ತಲೆಗೂದಲು ಹಾಗೂ ಬಿಳಿ ಕುರುಚಲು ಗಡ್ಡ ಇರುತ್ತದೆ.

ಮೃತ ದೇಹದ ಮೇಲೆ ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ, ಕೇಸರಿ ಬಣ್ಣದ ಬೈರಾಸ್ ಕಪ್ಪು ಬಣ್ಣದ ಬಿಳಿ ಹೂಗಳಿರುವ ಬರ್ಮುಡ ಇರುತ್ತದೆ.

ಮೃತ ದೇಹದ ವಾರಿಸುದಾರರು ಪತ್ತೆಯಾದಲ್ಲಿ ಪಿಎಸ್ಐ ಶಿರ್ವ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0820-2554139, 9480805451ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ .


Spread the love