ಕೊರ್ಡೆಲ್ ಚರ್ಚಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗೆ ಗೌರವ ಪೂರ್ವಕ ಸಮಾಧಿ

Spread the love

ಕೊರ್ಡೆಲ್ ಚರ್ಚಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗೆ ಗೌರವ ಪೂರ್ವಕ ಸಮಾಧಿ

ಮಂಗಳೂರು: ಕೊರೋನಾ ಸೋಂಕಿನಿಂದ ಮೃತಪಟ್ಟ 67 ವರ್ಷದ ವ್ಯಕ್ತಿಯೊಬ್ಬರಿಗೆ ಧರ್ಮಪ್ರಾಂತ್ಯದ ಶ್ರೀಸಾಮಾನ್ಯ ಆಯೋಗದ ಸದಸ್ಯರ ನೇತೃತ್ವದಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಂಗಳೂರಿನ ಕೊರ್ಡೆಲ್ ಚರ್ಚಿನ ದಫನ ಭೂಮಿಯಲ್ಲಿ ಶನಿವಾರ ನೆರವೇರಿಸಲಾಯಿತು.

67 ವರ್ಷದ ವ್ಯಕ್ತಿ ಪಾರ್ಶ್ವವಾಯು ಮತ್ತು ನ್ಯುಮೋನಿಯಾದಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಪಾಸಿಟಿವ್ ದೃಢಗೊಂಡ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು . ಜುಲೈ 18 ರಂದು ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಕೋವಿಡ್ -19 ಸೋಂಕಿನಿಂದ ಮೃತಪಟ್ಟವರ ಅಂತಿಮ ಸಂಸ್ಕಾರವನ್ನು ನೆರವೇರಿಸಲು ಮಂಗಳೂರು ಧರ್ಮಪ್ರಾಂತ್ಯ ಬಿಷಪ್ ಡಾ. ಪೀಟರ್ ಪಾಲ್ ಸಲ್ಡಾನ್ಹಾ ನೇತೃತ್ವದಲ್ಲಿ ಧರ್ಮಪ್ರಾಂತ್ಯದ ಶ್ರೀಸಾಮಾನ್ಯ ಆಯೋಗದ ಮೂಲಕ ಸಮಿತಿಯೊಂದನ್ನು ರಚಿಸಲಾಗಿದೆ. ಬಿಷಪ್ ಮತ್ತು ಕಾರ್ಯದರ್ಶಿ ಫ್ರಾ ಜೆ ಬಿ ಕ್ರಾಸ್ಟಾ ಅವರ ನಿರ್ದೇಶನದಲ್ಲಿ ಡಿಬಿಸಿಎಲ್ಸಿ ಸದಸ್ಯರಾದ ಲೂಯಿಸ್ ಪಿಂಟೊ ಮತ್ತು ರಾಯ್ ಕ್ಯಾಸ್ಟೆಲಿನೊ ಅವರು ಸತ್ತವರ ಅಂತಿಮ ವಿಧಿಗಳಿಗೆ ವ್ಯವಸ್ಥೆ ಮಾಡಿದರು. ರಾಯ್ ಕ್ಯಾಸ್ಟೆಲಿನೊ ಮತ್ತು ಲೂಯಿಸ್ ಪಿಂಟೊ ಅವರ ಮೇಲ್ವಿಚಾರಣೆಯಲ್ಲಿ, ಶವವನ್ನು ಶವಪೆಟ್ಟಿಗೆಯಲ್ಲಿ ವೆನ್ಲಾಕ್ ಕೊವೀಡ್ ಆಸ್ಪತ್ರೆಯಿಂದ ಕೊರ್ಡೆಲ್ ಚರ್ಚ್ ಸ್ಮಶಾನಕ್ಕೆ ಆರೋಗ್ಯ ಇಲಾಖೆ ಮತ್ತು ಎಂಸಿಸಿ ಅಧಿಕಾರಿಗಳೊಂದಿಗೆ ತರಲಾಯಿತು.

ಡಿಬಿಸಿಎಲ್ಸಿಯ ಮಾರ್ಗಸೂಚಿಗಳ ಪ್ರಕಾರ, ಕೋವಿಡ್ ಸೋಂಕಿತರನ್ನು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗೌರವಯುತವಾಗಿ ಸಮಾಧಿ ಮಾಡಲಾಯಿತು. ಸಹಾಯಕ ಧರ್ಮಗುರುಗಳು ಸಮಾಧಿ ಮಾಡುವ ಮೊದಲು ಶವವನ್ನು ಆಶೀರ್ವದಿಸಿದರು, ಮತ್ತು ನಂತರ ಆರೋಗ್ಯ ಇಲಾಖೆಯ ಅಧಿಕಾರಿಗಳು ಶವವನ್ನು ಸಮಾಧಿ ಮಾಡಿದರು.


Spread the love