ಶೋಭಾಗೆ ಸಿ.ಟಿ.ರವಿ ವೋಟಾಕಲ್ವಂತೆ! – ಸಿದ್ದರಾಮಯ್ಯ

Spread the love

ಶೋಭಾಗೆ ಸಿ.ಟಿ.ರವಿ ವೋಟಾಕಲ್ವಂತೆ! – ಸಿದ್ದರಾಮಯ್ಯ

ಚಿಕ್ಕಮಗಳೂರು : ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆಗೆ ಶಾಸಕ ಸಿ ಟಿ ರವಿಯೇ ವೋಟು ಹಾಕಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ವಿಜಯಪುರ ಗಣಪತಿ ಪೆಂಡಾಲ್ನಲ್ಲಿ ಸೋಮವಾರ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಪರ ಪ್ರಚಾರ ಭಾಷಣ ಮಾಡುವ ಸಂದರ್ಭ ಶೋಭಾ ಕರಂದ್ಲಾಜೆಗೆ ಈ ಬಾರಿ ಸಿ.ಟಿ.ರವಿಯೇ ವೋಟು ಹಾಕಲ್ಲ. ಶೋಭಾ ಗೋಬ್ಯಾಕ್ ಅಂತ ಬಿಜೆಪಿ ಹುಡುಗರ ಕೈಯಲ್ಲಿ ಹೇಳಿಸಿದ್ದೇ ಈ ಗಿರಾಕಿ. ಈಗ ಪ್ರಮೋದ್ ಮಧ್ವರಾಜ್ ವೆಲ್ಕಂ, ವೆಲ್ಕಂ, ವೆಲ್ಕಂ ಅಂತಾ ಇರಬೇಕು. ಪ್ರಜಾಪ್ರಭುತ್ವ, ಸಂವಿಧಾನದಲ್ಲಿ ನಂಬಿಕೆ ಇಟ್ಟವರು ಒಂದೇ ಒಂದು ವೋಟನ್ನು ಬಿಜೆಪಿಗೆ ಹಾಕಬಾರದು. ದೇಶ, ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಂದರು.

ಬಿಜೆಪಿಯ ಈಶ್ವರಪ್ಪ, ಸಿ.ಟಿ.ರವಿ ಅವರೆಲ್ಲ ಯಾವ ಸಂಸ್ಕೃತಿ, ಸಂಸ್ಕಾರ ಕಲಿತಿದ್ದಾರೋ ಗೊತ್ತಿಲ್ಲ. ಇಲ್ಲಿನ ಸುಸಂಸ್ಕೃತ ಜನ ಆ ಸಿ.ಟಿ.ರವಿಯನ್ನು ಹೇಗೆ ಆಯ್ಕೆ ಮಾಡಿ ಕಳಿಸುತ್ತೀರಿ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಅವರು ಸಿ.ಟಿ.ರವಿ ನೀಡಿರುವ ಹೇಳಿಕೆ ಭಾರತೀಯ ದಂಡಸಂಹಿತೆ ಪ್ರಕಾರ ಅಪರಾಧ.ಇಂತಹ ಹೇಳಿಕೆ ನೀಡಲು ಅವರಿಗೆ ನಾಚಿಕೆ ಆಗಲ್ವಎಂದು ಪ್ರಶ್ನಿಸಿದರು.


Spread the love