ಸಂಸದೆ ಸುಮಲತಾ ಕೊರೋನಾದಿಂದ ಗುಣಮುಖ

Spread the love

ಸಂಸದೆ ಸುಮಲತಾ ಕೊರೋನಾದಿಂದ ಗುಣಮುಖ

ಮಂಡ್ಯ ಸಂಸದೆ, ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ತಾವು ಕೊರೋನಾ ಸೋಂಕಿನಿಂದ ಮುಕ್ತವಾಗಿರುವುದನ್ನು ಸುಮಲತಾ ಅಂಬರೀಶ್ ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದಾರೆ.

“ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್‍ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ ನಂತರ ನಾನೀಗ #ಕೋವಿಡ್19 ನೆಗೆಟಿವ್ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲಕ್ಕು ವಾರದ ವಿಶ್ರಾಂತಿ ಪಡೆದು, ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ. ” ಸಂಸದೆ ಟ್ವೀಟ್ ಮಾಡಿದ್ದಾರೆ.

ಅಲ್ಲದೆ”ಕೋವಿಡ್ ಪಾಸಿಟಿವ್ ಆದ ಜನರು ಹೆದರಬೇಕಿಲ್ಲ. ದಯವಿಟ್ಟು ವೈದ್ಯರು ಹೇಳುವ ಎಲ್ಲಾ ಸಲಹೆಯನ್ನೂ ಚಾಚೂ ತಪ್ಪದೆ ಪಾಲಿಸಿ, ಅನುಸರಿಸಿ. ಸದಾ ಸಕಾರಾತ್ಮಕವಾಗಿ ಯೋಚಿಸಿ. ಯಾವುದೇ ಕಾರಣಕ್ಕೂ ಅಧೈರ್ಯ ಪಡಬೇಡಿ. ಕೊರೋನಾ ಪಾಸಿಟಿವ್ ಅನ್ನು ನಿಮ್ಮ ಪಾಸಿಟಿವ್ ಯೋಚನೆ ಮೂಲಕ ಗೆಲ್ಲಿ ಎಲ್ಲೇ ಇರಿ ಸೇಫ್ ಆಗಿರಿ” ಎಂದು ತಮ್ಮ ಬೆಂಬಲಿಗರಿಗೆ, ಅಭಿಮಾನಿಗಳಿಗೆ ಸುಮಲತಾ ಸಲಹೆ ನೀಡಿದ್ದಾರೆ.


Spread the love