ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ

Spread the love

ಸಚಿವೆ ಜಯಮಾಲಾರಿಂದ ಜನತೆಗೆ ಯುಗಾದಿ ಶುಭಾಶಯ

ಉಡುಪಿ: ಚಾಂದ್ರಮಾನ ಯುಗಾದಿಯ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|ಜಯಮಾಲಾ ಅವರು ಯುಗಾದಿ ಶುಭಾಶಯಗಳನ್ನು ಕೋರಿದ್ದಾರೆ.

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ತರುತಿದೆ ಎಂಬಂತೆ ಈ ಯುಗಾದಿ ಹಬ್ಬದ ದಿವ್ಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ನಾನು ಶುಭಾಶಯ ತಿಳಿಸಬಯಸುತ್ತೇನೆ. ನಾಡಿನ ಸಮಸ್ತ ಜನರ ಬಾಳಲ್ಲಿ ಬೇವಿನಂತಹ ಕಹಿ ಕಷ್ಟಗಳು ಕಡಿಮೆಯಾಗಿ, ಬೆಲ್ಲದಂತಹ ಸವಿ ಸುಖಗಳು ಹೆಚ್ಚಲಿ ಎಂದು ಹಾರೈಸುತ್ತೇನೆ. ಹೊಸ ವರ್ಷದ ಯುಗಾದಿಯನ್ನು ಹೊಸತನದೊಂದಿಗೆ ಬರಮಾಡಿಕೊಳ್ಳೋಣ. ದೇವರು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಂತೋಷ ಮತ್ತು ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love