ಸಚಿವೆ ಜಯಮಾಲಾರಿಂದ 32 ಸಾಧಕರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Spread the love

ಸಚಿವೆ ಜಯಮಾಲಾರಿಂದ 32 ಸಾಧಕರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಶುಕ್ರವಾರ ಜಿಲ್ಲೆಯ 32 ಮಂದಿ ಸಾಧಕರಿಗೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ವಿತರಿಸಿದರು.

ಪ್ರಶಸ್ತಿಗೆ ಆಯ್ಕೆಯಾದವರು

ಯಕ್ಷಗಾನ: ಗೋಪಾಲ ಆಚಾರ್ಯ ತೀರ್ಥಹಳಿ, ಗೋಪಾಲ ಗಾಣಿಗ ಹೇರಂಜಾಲು , ರಾಘವೇಂದ್ರ ಆಚಾರ್ಯ, ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು.

ಶಿಕ್ಷಣ: ಎಂ.ಇಸ್ಮಾಯಿಲ್ ಸಾಹೇಬ್

ಧಾರ್ಮಿಕ: ಬಾರ್ಕೂರು ಹೃಷಿಕೇಶ ಬಾಯರಿ, ಎನ್.ಬಾಲಕೃಷ್ಣ ವೈದ್ಯ.

ಸಂಗೀತ: ಪರಮೇಶ್ವರ ಭಟ್, ಆರ್.ಶ್ರೀಶದಾಸ್, ಹಿರಿಯಣ್ಣ, ವಿದುಷಿ ಪ್ರವಿತಾ ಅಶೋಕ.

ಜಾನಪದ: ಶೀನ ಪಾಣರ, ಹುಭಾಶಿಕ ಕೊರಗರ ಯುವ ಕಲಾ ವೇದಿಕೆ.

ಕಲೆ, ನಾಟಕ, ರಂಗಭೂಮಿ, ಸಿನಿಮಾ: ಜಯರಾಂ ನೀಲಾವರ,  ಶ್ಲಾಘ ಸಾಲಿಗ್ರಾಮ.

ಕ್ರೀಡೆ: ಅಕ್ಷತಾ ಪೂಜಾರಿ ಬೋಳ, ಮೃಣಾಲಿ ಸಚಿನ್ ಶೆಟ್ಟಿ (ಅಂತಾರಾಷ್ಟ್ರೀಯ ಕರಾಟೆ ಪಟು), ಗುರುರಾಜ ಪೂಜಾರಿ.

ಸಾಹಿತ್ಯ: ಟಿ.ಎಸ್. ಹುಸೈನ್, ವಾಸಂತಿ ಅಂಬಲಪಾಡಿ.

ಕಲೆ ಮತ್ತು ಶಿಲ್ಪಕಲೆ: ಲಾರೆನ್ ಪಿಂಟೊ.

ಪತ್ರಿಕೋದ್ಯಮ : ಗೋಕುಲ್ದಾಸ್ ಪೈ.

ಸಂಕೀರ್ಣ: ಶೇಖರ ಅಜೆಕಾರು.

ಸಂಘ-ಸಂಸ್ಥೆಗಳು: ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ, ಜಲದುರ್ಗಾ ಮಹಿಳಾ ಸಂಘ, ಯುವಕ ಮಂಡಲ ಸಾಣೂರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಾಲೂಕು ಪಂಚಾಯತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು.


Spread the love