ಸಫ್ವಾನ್ ಅಪಹರಣ ; ಪೊಲೀಸರಿಂದ ಅಪಹರಣಕಾರರ ಭಾವಚಿತ್ರ ಬಿಡುಗಡೆ

Spread the love

ಸಫ್ವಾನ್ ಅಪಹರಣ ; ಪೊಲೀಸರಿಂದ ಅಪಹರಣಕಾರರ ಭಾವಚಿತ್ರ ಬಿಡುಗಡೆ

ಮಂಗಳೂರು: ಚೊಕ್ಕಬೆಟ್ಟು ಕಾಟಿಪಳ್ಳ 8 ನೇ ಬ್ಲಾಕ್ ನಿವಾಸಿ ಅಬ್ದುಲ್ ಹಮೀದ್ ಎಂಬವರ ಪುತ್ರ ಸಫ್ವಾನ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸರು ಐವರು ಅಪಹರಣಕಾರರ ಭಾವಚಿತ್ರವನ್ನು ಬಿಡುಗಡೆಗೊಳಿಸಿದ್ದು, ಇವರ ಬಗ್ಗೆ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಅಕ್ಟೋಬರ್ 5 ರಂದು ಸಫ್ವಾನ್ ಅವರನ್ನು ಸಂಶುದ್ದೀನ್, ಸಫ್ವಾನ್ ಕಿನ್ನಿಗೋಳಿ ಸಹಿತಿ ಇತರರು ಕಾರಿನಲ್ಲಿ ಅಪಹರಿಸಿದ್ದಾರೆ ಎಂದು ಹಮೀದ್ ಸುರತ್ಕಲ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಈ ವರೆಗೂ ಅಪಹರಣಕಾರರನ್ನು ಪತ್ತೆ ಹಚ್ಚಲು ಪೋಲಿಸರಿಗೆ ಸಾಧ್ಯವಾಗಿಲ್ಲ. ಇದೀಗ ಪೋಲಿಸರು ಅಪಹರಣಕಾರರ ಪತ್ತೆಗೆ ಸಾರ್ವಜನಿಕರ ಸಹಾಯವನ್ನು ಯಾಚಿಸಿದ್ದಾರೆ.

ಆರೋಪಿಗಳು ಯಾರಿಗಾದರೂ ಕಂಡು ಬಂದಲ್ಲಿ ಉಪ ಪೋಲಿಸ್ ಆಯುಕ್ತರು, ಕಾ ಮತ್ತು ಸು. ಮಂಗಳೂರು ನಗರ – 9480802304, ಉಪ ಪೋಲಿಸ್ ಆಯುಕ್ತರು, ಅಪರಾಧ ಮತ್ತು ಸಂಚಾರ – 9480802305, ಸಹಾಯಕ ಪೋಲಿಸ್ ಆಯುಕ್ತರು, ಮಂಗಳೂರು ಉತ್ತರ ಉಪ ವಿಭಾಗ ಪಣಂಬೂರು – 9480805322, ಪೊಲೀಸ್ ನಿರೀಕ್ಷಕರು ಸುರತ್ಕಲ್ ಪೊಲೀಸ್ ಠಾಣೆ – 9480805360, ನಗರ ನಿಯಂತ್ರಣ ಕೊಠಡಿ, ಮಂಗಳೂರು ನಗರ – 0824-2220800 ಸಂಪರ್ಕಿಸಲು ಕೋರಲಾಗಿದೆ.


Spread the love