ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಜೀವನ ಆದರ್ಶ- ಶಾಸಕ ಕಾಮತ್

Spread the love

ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಜೀವನ ಆದರ್ಶ- ಶಾಸಕ ಕಾಮತ್

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರಿಂದ ಹೊಗಳಿಸಿಕೊಂಡ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರ ಜೀವನ ನಮಗೆಲ್ಲರಿಗೂ ಆದರ್ಶಪಾಯ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ. ಜನವರಿ 30 ರಂದು ಕುದ್ಮುಲ್ ರಂಗರಾವ್ ಅವರ ಪುಣ್ಯತಿಥಿಯಂದು ಮಾತನಾಡಿದ ಶಾಸಕರು ಕುದ್ಮುಲ್ ರಂಗರಾವ್ ಅವರು ಮಂಗಳೂರಿನವರು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಯಾಕೆಂದರೆ ತಮ್ಮ ಇಡೀ ಬದುಕನ್ನು ದಲಿತರ ಉದ್ಧಾರಕ್ಕಾಗಿ ಮುಡಿಪಾಗಿಟ್ಟು ಅವರ ಏಳಿಗೆಗೆ ಶ್ರಮಿಸಿದ ರಂಗರಾವ್ ಅವರು ನಮಗೆಲ್ಲಾ ಮಾದರಿ ಎಂದು ಹೇಳಿದರು.

ಕುದ್ಮುಲ್ ರಂಗರಾವ್ ಅವರು ಹೇಳಿದಂತೆ ಒಬ್ಬ ದಲಿತ ಯುವಕ ಉತ್ತಮ ವಿದ್ಯಾಭ್ಯಾಸ ಪಡೆದು ಸರಕಾರಿ ಉದ್ಯೋಗವನ್ನು ಗಳಿಸಿ ಕಾರಿನಲ್ಲಿ ಬರುವಾಗ ಅದರಿಂದ ಎದ್ದ ಧೂಳು ತನ್ನ ಹಣೆಗೆ ತಾಗಿದಾಗ ತನಗೆ ತೃಪ್ತಿಯಾಗುತ್ತದೆ ಎಂದು ಕುದ್ಮುಲ್ ರಂಗರಾವ್ ಅವರು ಹೇಳಿದ್ದರು. ಅದರಂತೆ ಪರಿಶಿಷ್ಟ ಜಾತಿಯವರಿಗೆ ವಿದ್ಯೆ, ಉದ್ಯೋಗ, ಆಶ್ರಯ ಸಿಗಲು ಜೀವನವನ್ನೇ ಧಾರೆ ಎರೆದರು. ಅಂತಹ ಶ್ರೇಷ್ಟ ಸಾಧಕರ ಹೆಸರನ್ನು ಮಂಗಳೂರಿನ ಪುರಭವನಕ್ಕೆ ಇಡಲು ನಡೆಸಿದ ಬಿಜೆಪಿ ಹೋರಾಟ ಸಾರ್ಥಕವಾಗಿದೆ. ಮುಂದಿನ ದಿನಗಳಲ್ಲಿ ಕುದ್ಮುಲ್ ರಂಗರಾವ್ ಅವರ ಹೆಸರನ್ನು ಮುಂದಿನ ಪೀಳಿಗೆ ಕೂಡ ನೆನಪಿನಲ್ಲಿ ಇಡುವಂತಹ ಯಾವುದಾದರೂ ಉತ್ತಮ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.


Spread the love