ಸರಕಾರಿ ಬಸ್ಸಿಗೆ ಕಲ್ಲೆಸೆದ ಸಾರ್ವಜನಿಕರು – ದೂರು ದಾಖಲು

58

ಸರಕಾರಿ ಬಸ್ಸಿಗೆ ಕಲ್ಲೆಸೆದ ಸಾರ್ವಜನಿಕರು – ದೂರು ದಾಖಲು

ಮಂಗಳೂರು: ನಗರದ ಬೆಂದೂರ್ ವೆಲ್ ಬಳಿ ಕಾರಿಗೆ ಡಿಕ್ಕಿ ಹೊಡೆದ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಸಾರ್ವಜನಿಕರು ಕಲ್ಲೆಸದ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ ಹಾಗೂ ಕಾರು ಪಂಪ್ ವೆಲ್ ಕಡೆಯಿಂದ ಮಂಗಳವಾರ ರಾತ್ರಿ ಬೆಂದೂರ್ ವೆಲ್ ಕಡೆಗೆ ಸಂಚರಿಸುತ್ತಿದ್ದು, ಕರಾವಳಿ ವೃತ್ತದ ಬಳಿ ಬರುತ್ತಿದ್ದಂತೆ ಬಸ್ಸು ಎಡಬದಿಗೆ ಚಲಿಸಿದ ಪರಿಣಾಮ ಕಾರಿಗೆ ಡಿಕ್ಕಿಯಾಗಿದೆ.

ಈ ವೇಳೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬಸ್ಸಿಗೆ ಕಲ್ಲೆಸಿದಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ರದ್ರಿ ಸಂಚಾರ ಪೊಲೀಸರು ಸಾರ್ವಜನಿಕರನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.