ಸರಗಳ್ಳತನ ಪ್ರಕರಣ ಇಬ್ಬರ ಬಂಧನ

Spread the love

ಸರಗಳ್ಳತನ ಪ್ರಕರಣ ಇಬ್ಬರ ಬಂಧನ

ಮಂಗಳೂರು: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ

ಬಂಧಿತ ಆರೋಪಿಗಳನ್ನು ಹಾಸನ ಜಿಲ್ಲೆ, ಅರಕಲಗೂಡು ತಾಲೂಕು, ಕೋಟೆಸಾಲುಗೇರಿ ನಿವಾಸಿಗಳಾದ 1) ಶ್ರೀಮತಿ ಲಕ್ಷ್ಮೀಯಮ್ಮ @ ಗೌರಮ್ಮ, (60), 2) ಶ್ರೀಮತಿ ಅಶ್ವಿನಿ , (22) ಎಂದು ಗುರುತಿಸಲಾಗಿದೆ.

ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ದೇವಸ್ಥಾನವೊಂದರ ವಠಾರದಲ್ಲಿ ದಿನಾಂಕ 18-01-2020 ರಂದು ಬಂಟ್ವಾಳ ತೆಂಕಕಜೆಕ್ಕಾರು ಗ್ರಾಮದ ನಿವಾಸಿ ಶ್ರೀಮತಿ ಹೊನ್ನಮ್ಮ ಮತ್ತು ಬಂಟ್ವಾಳ ಉಳಿ ಗ್ರಾಮದ ನಿವಾಸಿ ಶ್ರೀಮತಿ ಮೋನಮ್ಮ ಎಂಬವರುಗಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವವನ್ನು ಯಾರೋ ಕಳ್ಳರು ಕಳವು ಮಾಡಿರುವುದಕ್ಕೆ ಸಂಬಂಧಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 04/2020 ಹಾಗೂ 05/2020 ಕಲಂ 379 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳು ಕಳವು ಮಾಡಿದ 1] 23.900 ಗ್ರಾಂ ತೂಕದ ಚಿನ್ನದ ಚೈನ್ -1, 2] 16.180 ಗ್ರಾಂ ತೂಕದ ಚಿನ್ನದ ಚೈನ್ – 1 ನ್ನು ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಚೈನ್ ನ ಒಟ್ಟು ಅಂದಾಜು ಮೌಲ್ಯ ರೂ. 1,37,000/- ಆಗಿರುತ್ತದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ.


Spread the love